ದೀಪಾವಳಿ ಹಬ್ಬಕ್ಕೆ ಮನೆಗೆ ಬಾರದ ಪತಿ: ನೊಂದ ಪತ್ನಿ ಆತ್ಮಹತ್ಯೆಗೆ ಶರಣು
ದೀಪಾವಳಿ ದಿನದಂದು ಪತಿ ಮನೆಗೆ ಬರದಿದ್ದಕ್ಕೆ ನೊಂದ ಪತ್ನಿಯೊಬ್ಬಳು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ದೇವನಹಳ್ಳಿ ಉಪವಿಭಾಗದ ಪೊಲೀಸ್ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.
ಬೆಂಗಳೂರು: ದೀಪಾವಳಿ ದಿನದಂದು ಪತಿ ಮನೆಗೆ ಬರದಿದ್ದಕ್ಕೆ ನೊಂದ ಪತ್ನಿಯೊಬ್ಬಳು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ದೇವನಹಳ್ಳಿ ಉಪವಿಭಾಗದ ಪೊಲೀಸ್ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.
ಆರ್.ದೇವಿಕಾ (21) ಆತ್ಮಹತ್ಯೆಗೆ ಶರಣಾದ ಯುವತಿ. ಆತ್ಮಹತ್ಯೆ ಮಾಡಿಕೊಂಡಾಗ ಆಕೆ ಗರ್ಭಿಣಿಯಾಗಿದ್ದಳು ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತಿಳಿದುಬಂದಿದೆ.
ಆತ್ಮಹತ್ಯೆಗೂ ಮುನ್ನ ಪತಿ ಉಮೇಶ್'ಗೆ ದೇವಿಕಾ ವಿಡಿಯೋ ಕರೆ ಮಾಡಿದ್ದು, ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ಹೇಳಲಾಗುತ್ತಿದೆ.
ಈ ನಡುವೆ ಪ್ರಕರಣ ಸಂಬಂಧ ಮೃತನ ದೇವಿಕಾ ಸಹೋದರ ಆರ್ ದರ್ಶನ್, ಉಮೇಶ್ ವಿರುದ್ಧ ದೂರು ದಾಖಲಿಸಿದ್ದಾರೆ. ಪತಿಯ ಕಿರುಕುಳ ತಾಳಲಾರದೆ ಸಹೋದರಿ ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತಂಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ತಡೆಯುವ ಬದಲು ಆಕ, ಆತೆ ಸಾಯುತ್ತಿರುವುದನ್ನೇ ಲೈವ್ ಆಗಿ ನೋಡಿದ್ದಾನೆ. ಆಕೆ ನೇಣು ಬಿಗಿದುಕೊಂಡ ನಂತರ ಮೃತಪಟ್ಟಿದ್ದಾಳೆಯೇ ಎಂದು ಪರೀಕ್ಷಿಸಲು ಮನೆಗೆ ಹೋಗಿದ್ದಾನೆ. ನಂತರ ಇತರರಿಗೆ ಆಕೆಯ ಸಾವಿನ ಕುರಿತು ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆಕೆ ಗರ್ಭಿಣಿ ಎಂದು ತಿಳಿದುಬಂದಿದೆ.
ತಂಗಿಯದ್ದು ಪ್ರೇಮ ವಿವಾಹವಾಗಿದ್ದು, ಮನೆಯವರ ಒಪ್ಪಿಗೆ ಇಲ್ಲದಯೇ ಮದುವೆಯಾಗಿದ್ದಳು. ಮದುವೆಯ ನಂತರ ಸ್ವಲ್ಪ ದಿನ ಇಬ್ಬರೂ ಚೆನ್ನಾಗಿಯೇ ಇದ್ದರು. ನಂತರ ಉಮೇಶ್ ತಂಗಿಯ ಮೇಲೆ ಅನುಮಾನ ಪಡಲು ಪ್ರಾರಂಭಿಸಿದ್ದ ಎಂದು ದರ್ಶನ್ ಅವರು ಹೇಳಿದ್ದಾರೆ.
ಈ ನಡುವೆ ಪೊಲೀಸರು ಐಪಿಸಿ ಸೆಕ್ಷನ್ 306 ರ ಅಡಿಯಲ್ಲಿ (ಆತ್ಮಹತ್ಯೆಗೆ ಪ್ರಚೋದನೆ) ಪ್ರಕರಣವನ್ನು ದಾಖಲಿಕೊಂಡಿದ್ದು, ಉಮೇಶ್ ಅವರನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.