ಸಂಗ್ರಹ ಚಿತ್ರ 
ರಾಜ್ಯ

ಪಟಾಕಿ ಅವಾಂತರ: ರಾಕೆಟ್ ಸಿಡಿದು ಬಾಲಕನ ಖಾಸಗಿ ಅಂಗಕ್ಕೆ ಗಾಯ, ದೂರು ದಾಖಲು

ರಾಕೆಟ್ ಹಾರಿಸಿ 10 ವರ್ಷದ ಬಾಲಕನ ಖಾಸಗಿ ಅಂಗಗಳಿಗೆ ಗಾಯವಾಗುವಂತೆ ಮಾಡಿದ ಹಿನ್ನೆಲೆಯಲ್ಲಿ 24 ವರ್ಷದ ಯುವಕನೊಬ್ಬನ ವಿರುದ್ಧ ದೂರು ದಾಖಲಾಗಿದೆ.

ಬೆಂಗಳೂರು: ರಾಕೆಟ್ ಹಾರಿಸಿ 10 ವರ್ಷದ ಬಾಲಕನ ಖಾಸಗಿ ಅಂಗಗಳಿಗೆ ಗಾಯವಾಗುವಂತೆ ಮಾಡಿದ ಹಿನ್ನೆಲೆಯಲ್ಲಿ 24 ವರ್ಷದ ಯುವಕನೊಬ್ಬನ ವಿರುದ್ಧ ದೂರು ದಾಖಲಾಗಿದೆ.

ಮಂಗಳವಾರ ಈ ಘಟನೆ ನಡೆದಿದ್ದು, ಎರಡು ದಿನಗಳ ನಂತರ ಮಲ್ಲಿಕಾರ್ಜುನ ಎಂಬುವವರ ವಿರುದ್ಧ ದೂರು ದಾಖಲಾಗಿದೆ.

ಗಾಯಾಳು ಬಾಲಕ ಹಾಗೂ ಮಲ್ಲಿಕಾರ್ಜುನ ಇಬ್ಬರು ಹೊಸನಗರ ನಿವಾಸಿಗಳಾಗಿದ್ದಾರೆ. ಬಾಲಕನ ಚಿಕ್ಕಮ್ಮ ಯುವನ ವಿರುದ್ಧ ದೂರು ದಾಖಲಿಸಿದ್ದಾರೆ.

ನೆರೆಮನೆಯಾತನಾಗಿದ್ದ ಮಲ್ಲಿಕಾರ್ಜುನ ಅವರು, ರಾಕೆಟ್ ಹಾರಿಸಿ ಉದ್ದೇಶ ಪೂರ್ವಕವಾಗಿಯೇ ಗಾಯವಾಗುವಂತೆ ಮಾಡಿದ್ದಾರೆಂದು ಬಾಲಕ ಹೇಳಿಕೊಂಡಿದ್ದಾನೆ. ಇದರಿಂದ ಎರಡೂ ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಬಾಲಕನ ತಾಯಿಯ ಮೇಲೆ ಯುವಕ ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದಾನೆಂದು ತಿಳಿದುಬಂದಿದೆ.

ನಾವು ಪಟಾಕಿ ಹೊಡೆಯುತ್ತಿರಲಿಲ್ಲ. ಪಟಾಕಿ ಹೊಡೆಯುತ್ತಿರುವುದನ್ನು ಬಾಲಕ ನೋಡುತ್ತಿದ್ದ. ಬಾಲನಕ ಜೊತೆಗೆ ಆತನ ಸಹೋದರಿಗೂ ಥಳಿಸಲಾಗಿದೆ ಎಂದು ದೂರಿನಲ್ಲಿ ಹೇಳಿದ್ದಾರೆ. ಎರಡೂ ಕುಟುಂಬಗಳೂ ದೂರು ದಾಖಲಿಸಿವೆ. ಇಬ್ಬರಿಂದಲೂ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಇದೀಗ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪ ನಿಜವೇ ಎಂದು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಬಿಲ್‌ಗಳ ಸಲ್ಲಿಸುವಂತೆ ಬಾಲಕನ ಕುಟುಂಬಸ್ಥರಿಗೆ ಪೊಲೀಸರು ಸೂಚಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿಯಿಂದ ಸಿಟಿ ರೌಂಡ್ಸ್

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರು ಜೊತೆ ತಾಯಿ ಸ್ಥದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ