ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ 
ರಾಜ್ಯ

ಬೆಂಗಳೂರಿನಲ್ಲಿ ಧಾರಾಕಾರ ಮಳೆ: ಧರೆಗುರುಳಿದ ಮರಗಳು, ಹಲವು ಪ್ರದೇಶ ಜಲಾವೃತ, ಸಂಚಾರಕ್ಕೆ ಅಡ್ಡಿ

ನಿನ್ನೆ ಸೋಮವಾರ ಸಂಜೆ ಬೆಂಗಳೂರು ನಗರದಲ್ಲಿ ಧಾರಾಕಾರ ಮಳೆಯಾಗಿದ್ದು, ಮರಗಳು ಧರೆಗುರುಳಿದ್ದು, ಹಲವು ಬಡಾವಣೆಗಳಲ್ಲಿ ನೀರು ನಿಂತಿದೆ. ಹಲವು ಅವಾಂತರಗಳು ನಡೆದಿವೆ. 

ಬೆಂಗಳೂರು: ನಿನ್ನೆ ಸೋಮವಾರ ಸಂಜೆ ಬೆಂಗಳೂರು ನಗರದಲ್ಲಿ ಧಾರಾಕಾರ ಮಳೆಯಾಗಿದ್ದು, ಮರಗಳು ಧರೆಗುರುಳಿದ್ದು, ಹಲವು ಬಡಾವಣೆಗಳಲ್ಲಿ ನೀರು ನಿಂತಿದೆ. ಹಲವು ಅವಾಂತರಗಳು ನಡೆದಿವೆ. 

ಹೊರ ವರ್ತುಲ ರಸ್ತೆಯಲ್ಲಿ ವಿಶೇಷವಾಗಿ ಸಕ್ರಾ ಆಸ್ಪತ್ರೆ ರಸ್ತೆ ಮತ್ತು ದೇವರಬೀಸನಹಳ್ಳಿ, ಬೆಳ್ಳಂದೂರು ಇಕೋಸ್ಪೇಸ್, ಕ್ರೋಮಾ ರಸ್ತೆ ಮತ್ತು ಮಾರತ್ತಳ್ಳಿ ಬಳಿ ವಾಹನ ಸಂಚಾರ ನಿಧಾನವಾಗಿತ್ತು. ಅದೇ ರೀತಿ ಹೆಬ್ಬಾಳದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಜಲಾವೃತವಾಗಿದೆ.

ಸಂಚಾರ ವಿಭಾಗ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಅವರು ಜಲಾವೃತದಿಂದ ಉಂಟಾಗುವ ಟ್ರಾಫಿಕ್ ಅನಾಹುತಗಳ ಬಗ್ಗೆ ಟ್ವೀಟ್ ಮಾಡಿದ್ದಾರೆ. ಯಲಹಂಕ ವ್ಹೀಲ್ ಮತ್ತು ಆಕ್ಸಲ್ ಫ್ಯಾಕ್ಟರಿ ರಸ್ತೆ, ಬಸವೇಶ್ವರನಗರ ಮತ್ತು ವಿ ನಾಗೇನಹಳ್ಳಿಯಲ್ಲಿ ಮರ ಬಿದ್ದಿರುವ ಬಗ್ಗೆ ಬಿಬಿಎಂಪಿಗೆ ದೂರುಗಳು ಬಂದಿದ್ದವು.

ಮಿಲ್ಲರ್ಸ್ ರಸ್ತೆಯ ಅಯ್ಯಪ್ಪ ದೇವಸ್ಥಾನದ ಬಳಿ, ಫಯಾಜಾಬಾದ್, ಯಲಚೇನಹಳ್ಳಿಯ ರಾಮಕೃಷ್ಣನಗರ ಮತ್ತು ಇತರ ಭಾಗಗಳಲ್ಲಿ ಜಲಾವೃತವಾಗಿದೆ. ನಿನ್ನೆ ರಾತ್ರಿ 11.30ಕ್ಕೆ ನಗರದಲ್ಲಿ 59.5 ಮಿ.ಮೀ ಹಾಗೂ ಎಚ್‌ಎಎಲ್‌ನಲ್ಲಿ 54.8 ಮಿ.ಮೀ ಮಳೆಯಾಗಿದೆ.

ನಗರದಾದ್ಯಂತ ಸುರಿದ ಮಳೆಯ ಪ್ರಮಾಣ ಈ ರೀತಿಯಾಗಿದೆ: 
ಕೆಂಗೇರಿ 81.5 ಮಿ.ಮೀ
ಎಚ್ ಗೊಲ್ಲಹಳ್ಳಿ 75.5 ಮಿ.ಮೀ
ಆರ್.ಆರ್.ನಗರ 67 ಮಿ.ಮೀ
ನಾಯಂಡಹಳ್ಳಿ 61.5 ಮಿ.ಮೀ
ಕೊಟ್ಟಿಗೆಪಾಳ್ಯ 61 ಮಿ.ಮೀ
ಪೀಣ್ಯ 58 ಮಿ.ಮೀ
ಬಿಳೇಕಹಳ್ಳಿ 57.5 ಮಿ.ಮೀ
ಬಾಗಲಕುಂಟೆ 53 ಮಿ.ಮೀ
ಅರೆಕೆರೆ 51 ಮಿ.ಮೀ
ದಯಾನಂದ ನಗರ 49 ಮಿ.ಮೀ
ಮಾರತ್ತಳ್ಳಿ 46.5 ಮಿ.ಮೀ
ಕೋರಮಂಗಲ 44 ಮಿ.ಮೀ
ಬೆಳ್ಳಂದೂರು 35.5 ಮಿ.ಮೀ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT