ಸಂಗ್ರಹ ಚಿತ್ರ 
ರಾಜ್ಯ

ನಮ್ಮ ಮೆಟ್ರೋ ಬಳಿ ಆ್ಯಪ್‌ ಆಧಾರಿತ ಆಟೋ ಸೌಲಭ್ಯ: ಶೀಘ್ರದಲ್ಲೇ 'ಮೆಟ್ರೋ ಮಿತ್ರ' ಆರಂಭ

ಮೆಟ್ರೋ ನಿಲ್ದಾಣಗಳಿಂದ ನಾವು ತಲುಪುವ ಸ್ಥಳಗಳಿಗೆ ಹೋಗಲು ಸಮಸ್ಯೆಯಾಗುತ್ತಿದೆ. ಆಟೋ ಚಾಲಕರು ನಾವು ಕರೆದ ಕಡೆ ಬರುವುದಿಲ್ಲ. ಹೆಚ್ಚಿಗೆ ಹಣ ಪಡೆಯುತ್ತಿದ್ದಾರೆಂಬುದು ಮೆಟ್ರೋ ಪ್ರಯಾಣಿಕರ ದೂರುಗಳಾಗಿತ್ತು. ಇದಕ್ಕೆ ಸ್ವತಃ ಆಟೋ ಚಾಲಕರೇ ಪರಿಹಾರವನ್ನ ಒದಗಿಸುತ್ತಿದ್ದಾರೆ.

ಬೆಂಗಳೂರು: ಮೆಟ್ರೋ ನಿಲ್ದಾಣಗಳಿಂದ ನಾವು ತಲುಪುವ ಸ್ಥಳಗಳಿಗೆ ಹೋಗಲು ಸಮಸ್ಯೆಯಾಗುತ್ತಿದೆ. ಆಟೋ ಚಾಲಕರು ನಾವು ಕರೆದ ಕಡೆ ಬರುವುದಿಲ್ಲ. ಹೆಚ್ಚಿಗೆ ಹಣ ಪಡೆಯುತ್ತಿದ್ದಾರೆಂಬುದು ಮೆಟ್ರೋ ಪ್ರಯಾಣಿಕರ ದೂರುಗಳಾಗಿತ್ತು. ಇದಕ್ಕೆ ಸ್ವತಃ ಆಟೋ ಚಾಲಕರೇ ಪರಿಹಾರವನ್ನ ಒದಗಿಸುತ್ತಿದ್ದಾರೆ.

ಆಟೋ ಚಾಲಕರ ಮೇಲಿನ ನಕಾರಾತ್ಮಕ ಚಿತ್ರಣವನ್ನು ಬದಲಾಯಿಸಲು ಆಟೋರಿಕ್ಷಾ ಚಾಲಕರ ಒಕ್ಕೂಟ (ಎಆರ್'ಡಿಯು) ‘ಮೆಟ್ರೊ ಮಿತ್ರ’ ಅಪ್ಲಿಕೇಶನ್ ನ್ನು ಆರಂಭಿಸುತ್ತಿದೆ.

‘ನಮ್ಮ ಯಾತ್ರಿ’ ಆನ್‌ಲೈನ್ ಆಟೋ ರಿಕ್ಷಾ ಬುಕ್ಕಿಂಗ್ ಅಪ್ಲಿಕೇಶನ್ ಈಗಾಗಲೇ ಯಶಸ್ವಿಯಾಗಿದೆ. ಇದಾದ ಬಳಿಕ ‘ಮೆಟ್ರೋ ಮಿತ್ರ’ ಆ್ಯಪ್ ಅನ್ನು ವಿವಿಧ ಪ್ರದೇಶಗಳಿಗೆ ಮತ್ತು ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸಲೆಂದೇ ರಚನೆ ಮಾಡಲಾಗಿದೆ.

ಬೆಂಗಳೂರಿನ ಆಟೋ ರಿಕ್ಷಾ ಡ್ರೈವರ್ಸ್‌ ಯೂನಿಯನ್, ಬಿಎಂಆರ್‌ಸಿಎಲ್ ಸಹಕಾರದಲ್ಲಿ ಮೆಟ್ರೋ ಮಿತ್ರನ್ನು ಪರಿಚಯಿಸಲಾಗುತ್ತಿದೆ. ಈ ಆ್ಯಪ್ ಬೆಂಗಳೂರಿನ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಬಳಕೆಗೆ ಲಭ್ಯವಿರುತ್ತದೆ.

ಆಟೋರಿಕ್ಷಾ ಚಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ಅವರು ಮಾತನಾಡಿ, ಮಧ್ಯವರ್ತಿಗಳನ್ನು ದೂರ ಉಳಿಸುವುದು, ಗ್ರಾಹಕರಿಗೆ ಸಹಾಯ ಮಾಡುವ ಸಲುವಾಗಿ ಆ್ಯಪ್ ಪರಿಚಯಿಸಲಾಗುತ್ತಿದೆ. ಆ್ಯಪ್ ನಲ್ಲಿ ಗ್ರಾಹಕರು ತಮ್ಮ ಅನುಭವವನ್ನು ಹಂಚಿಕೊಳ್ಳಬಹುದು. ಜಯನಗರ ಮತ್ತು ಆರ್'ವಿ ಮೆಟ್ರೋ ನಿಲ್ದಾಣಗಳಲ್ಲಿ ಸೇವೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು. ಆಟೋ ಚಾಲಕರನ್ನು ಮತ್ತಷ್ಟು ವೃತ್ತಿಪರರಾಗಿ ರೂಪಿಸಲು ಸಂಸ್ಥೆಯಿಂದ ತರಬೇತಿ ನೀಡಲಾಗುತ್ತಿದೆ. ಇದರಡಿ ತಂತ್ರಜ್ಞಾನ ಆಧಾರಿತ ಸೇವೆ ಮತ್ತು ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ವೆಚ್ಚ ಸರಿದೂಗಿಸಲು ಮೀಟರ್‌ ಶುಲ್ಕದ ಜತೆಗೆ .10 ಹೆಚ್ಚುವರಿಯಾಗಿ ಪಡೆದುಕೊಳ್ಳತ್ತೇವೆಂದು ಹೇಳಿದರು.

ಪ್ರಯಾಣಿಕರು ಮೆಟ್ರೋ ಮಿತ್ರದಿಂದ ಅಳವಡಿಸಿರುವ ಕ್ಯುಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ಅದರಲ್ಲಿ ನಿಲ್ದಾಣದ 5 ಕಿಮೀ ವ್ಯಾಪ್ತಿಯಲ್ಲಿರು ಪ್ರಮುಖ ಪ್ರದೇಶಗಳನ್ನು ಪಟ್ಟಿ ನೀಡುತ್ತದೆ. ಪ್ರಯಾಣಿಕರು ನಿರ್ದಿಷ್ಟ ಸ್ಥಳವನ್ನು ಆಯ್ಕೆ ಮಾಡಿ ಆಟೋವನ್ನು ಬುಕ್‌ ಮಾಡಬಹುದು. ಬುಕ್‌ ಆದಕೂಡಲೇ ಮೆಟ್ರೋ ಮಿತ್ರ ಅಪ್ಲಿಕೇಶನ್ ಅನ್ನು ಅಳವಡಿಸಿಕೊಂಡಿರುವ ಆಟೋ ಚಾಲಕರಿಗೆ ಸಂದೇಶ ರವಾನೆಯಾಗಿ ಅವರು ನೀವು ಇರುವ ಸ್ಥಳಕ್ಕೆ ಬರುತ್ತಾರೆ. ಪ್ರಯಾಣಿಕರು ತಮ್ಮ ಚಾಲಕರನ್ನು ಆಯ್ಕೆ ಮಾಡುವ ಆಯ್ಕೆಯನ್ನೂ ಕೂಡ ಹೊಂದಿರುತ್ತಾರೆಂದು ತಿಳಿಸಿದರು.

ಆದರ್ಶ ಆಟೋ ಚಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಂಪತ್ ಸಿ ಅವರು ಮಾತನಾಡಿ, ಈ ಉಪಕ್ರಮವನ್ನು ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿಯೂ  ಜಾರಿಗೆ ತರಬೇಕೆಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

SCROLL FOR NEXT