ಸಂಗ್ರಹ ಚಿತ್ರ
ಸಂಗ್ರಹ ಚಿತ್ರ 
ರಾಜ್ಯ

ಚುನಾವಣಾ ಅಕ್ರಮ: ಕೇವಲ 24 ಗಂಟೆಗಳಲ್ಲಿ ರಾಜ್ಯದಲ್ಲಿ 87 ಕೆಜಿ ಚಿನ್ನ ವಶ!

Manjula VN

ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಅಕ್ರಮಗಳ ವಿರುದ್ಧ ಸಮರ ಸಾರಿರುವ ಚುನಾವಣಾ ಆಯೋಗದ ಅಧಿಕಾರಿಗಳು ರಾಜ್ಯದಲ್ಲಿ ಕಳೆದ 2 ಗಂಟೆಗಳಲ್ಲಿ ಬರೋಬ್ಬರಿ 87.78 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಇದು ರಾಜ್ಯದಲ್ಲಿ ಇದೂವರೆಗೆ ವಶಪಡಿಸಿಕೊಂಡ ಅತ್ಯಧಿಕ ಪ್ರಮಾಣದ ಚಿನ್ನವಾಗಿ ಎಂದು ರಾಜ್ ಮುಖ್ಯ ಚುನಾವಣಾಧಿಕಾರಿ (ಸಿಇಒ) ಕಚೇರಿ ಮಾಹಿತಿ ಮಾಡಿದೆ.

ಏಪ್ರಿಲ್ 12 ರ ಬೆಳಿಗ್ಗೆ 9 ರಿಂದ ಏಪ್ರಿಲ್ 13 ರ ಬೆಳಿಗ್ಗೆ 9 ಗಂಟೆಯವರೆಗೆ 32,58,68,623 ರೂ ಮೌಲ್ಯದ 87 ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಚಿನ್ನದ ಜೊತೆಗೆ 27,82,000 ಮೌಲ್ಯದ 35.59 ಕೆಜಿ ಬೆಳ್ಳಿಯನ್ನೂ ವಶಪಡಿಸಿಕೊಂಡಿದೆ. ಏಪ್ರಿಲ್ 13ರವರೆಗೆ ವಶಪಡಿಸಿಕೊಂಡಿರುವ ಒಟ್ಟು ಚಿನ್ನ ಮತ್ತು ಬೆಳ್ಳಿಯ ಮೌಲ್ಯ 101.65 ಕೋಟಿ ರೂ. ಆಗಿದೆ ಎಂದು ಮಾಹಿತಿ ನೀಡಿದ್ದಾರೆ.

ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ 10,06,985 ಮೌಲ್ಯದ 22.96 ಕೆಜಿ ಬೆಳ್ಳಿಯ ತುಂಡುಗಳನ್ನು ಎಫ್‌ಎಸ್‌ಟಿ ತಂಡ ವಶಪಡಿಸಿಕೊಂಡಿತ್ತು. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ರಾಮನಗರ ಜಿಲ್ಲೆಯ ಹೆಜ್ಜಾಲ ಚೆಕ್‌ಪೋಸ್ಟ್‌ನಲ್ಲಿ 19,02,61,638 ಮೌಲ್ಯದ 28.5 ಕೆಜಿ ಚಿನ್ನ ಮತ್ತು 28 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿತ್ತು.

ಚಿಕ್ಕಮಗಳೂರು ಜಿಲ್ಲೆಯ ಬೀರೂರು ರಸ್ತೆಯ ಅಜ್ಜಂಪುರದಲ್ಲಿ ವಾಣಿಜ್ಯ ತೆರಿಗೆ ಇಲಾಖೆ 9,35,00,000 ಮೌಲ್ಯದ 30 ಕೆಜಿ ಚಿನ್ನ ಮತ್ತು 5,98,000 ಮೌಲ್ಯದ 7.59 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಂಡಿದೆ.

SCROLL FOR NEXT