ಮಹಿಳೆ ಹಾಗೂ ವೈದ್ಯ
ಮಹಿಳೆ ಹಾಗೂ ವೈದ್ಯ 
ರಾಜ್ಯ

ಮತದಾನ ಮಾಡಲು ಬಂದ ಮಹಿಳೆಗೆ ಹೃದಯ ಸ್ತಂಭನ: ಪ್ರಾಥಮಿಕ ಚಿಕಿತ್ಸೆ ನೀಡಿ ಜೀವ ಉಳಿಸಿದ ವೈದ್ಯ!

Manjula VN

ಬೆಂಗಳೂರು: ಮತದಾನ ಮಾಡಲು ಬಂದ ಮಹಿಳೆಗೆ ಹೃದಯ ಸ್ತಂಭನವಾಗಿದ್ದು, ಇದೇ ವೇಳೆ ಮತಹಕ್ಕು ಚಲಾಯಿಸಲು ಬಂದಿದ್ದ ವೈದ್ಯರೊಬ್ಬರು ಆಕೆಯ ಜೀವ ಉಳಿದ ಘಟನೆ ನಗರದ ಜೆ.ಪಿ.ನಗರ 8 ನೇ ಹಂತದ ಜಂಬೂ ಸವಾರಿ ದಿನ್ನೆಯಲ್ಲಿ ನಡೆದಿದೆ.

ಸುಮಾರು ಐವತ್ತರ ಆಸುಪಾಸಿನ ಮಹಿಳೆಯೊಬ್ಬರು ಮತದಾನ ಮಾಡಲು ಬಂದಿದ್ದರು. ಸ್ಥಳದಲ್ಲಿ ಕ್ಯಾನ್ ನಲ್ಲಿದ್ದ ನೀರು ಕುಡಿಯಲು ಮಹಿಳೆ ಹೋಗಿದ್ದು, ಈ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಅದೃಷ್ಟವಶಾತ್ ಇದೇ ಸಂದರ್ಭದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ಡಾ.ಗಣೇಶ್ ಶ್ರೀನಿವಾಸ್ ಪ್ರಸಾದ್ ಎಂಬುವವರು ಮಹಿಳೆಯ ನಾಡಿ ಮಿಡಿತವನ್ನು ಪರಿಶೀಲಿಸಿದ್ದಾರೆ.

ನಾಡಿಮಿಡಿತ ಕಡಿಮೆಯಾಗಿರುವುದು ತಿಳಿದುಬದಿದೆ. ದೇಹ ಕೂಡ ಯಾವುದೇ ಪ್ರತಿಕ್ರಿಯೆಯನ್ನು ತೋರಿಸುತ್ತಿರಲಿಲ್ಲ. ತಕ್ಷಣ ಸ್ಥಳದಲ್ಲೇ CPR ಮಾಡಿ, ಆರೋಗ್ಯ ಚೇತರಿಸಿಕೊಳ್ಳುವಂತೆ ಮಾಡಿದ್ದಾರೆ.

ಚುನಾವಣಾ ಕರ್ತವ್ಯದಲ್ಲಿದ್ದವರು ಮಹಿಳೆಯ ನೆರವಿಗೆ ಬಂದಿದ್ದಾರೆ. ಬಳಿಕ ಐದು ನಿಮಿಷದೊಳಗೆ ಆ್ಯಂಬುಲೆನ್ಸ್ ಸ್ಥಳಕ್ಕೆ ಬಂದಿದ್ದು, ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವೈದ್ಯ ಗಣೇಶ್​ ಶ್ರೀನಿವಾಸ್​ ಪ್ರಸಾದ್​ ಮಾತನಾಡಿ, 50 ಆಸುಪಾಸಿನ ಮಹಿಳೆಯೊಬ್ಬರು ಕ್ಯಾನ್‌ನಲ್ಲಿ ನೀರು ಕುಡಿಯಲು ಬಂದಿದ್ದರು. ಮಹಿಳೆ ಅಸ್ವಸ್ಥರಾಗುತ್ತಿರುವುದು ಕಂಡು ನೆರವಿಗೆ ಧಾವಿಸಿದೆ. ಬಳಿಕ ಅವರ ನಾಡಿಮಿಡಿತವನ್ನು ಪರಿಶೀಲಿಸಿದೆ. ನಾಡಿಮಿಡಿತ ತುಂಬಾ ಕಡಿಮೆಯಾಗಿದೆ ಅಂತ ಕಂಡುಬಂತು. ಕಣ್ಣುಗಳು ಮೇಲಕ್ಕೆತ್ತಿ ಧಿಡೀರನೆ ಕುಸಿದರು. ಅವರ ದೇಹದಲ್ಲಿ ಚಲನವಲ ಇರಲಿಲ್ಲ. ಉಸಿರುಗಟ್ಟುತ್ತಿದ್ದರು. ತಕ್ಷಣ ಸಿಪಿಆರ್ ಮಾಡಿದೆ. ಸ್ವಲ್ಪ ಗುಣಮುಖರಾದರು. ಅವರ ಸ್ಥಿತಿ ಸುಧಾರಿಸಿತು. ಬಳಿಕ ಚುನಾವಣಾ ಕರ್ತವ್ಯದಲ್ಲಿದ್ದವರು ಧಾವಿಸಿ ಜ್ಯೂಸ್ ನೀಡಿದರು. ಆಂಬ್ಯುಲೆನ್ಸ್​ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. 5 ನಿಮಿಷ ವಿಳಂಬವಾಗಿದ್ದರೂ ಆಕೆ ಬದುಕುಳಿಯುತ್ತಿರಲಿಲ್ಲ ಎಂದು ಹೇಳಿದ್ದಾರೆ.

SCROLL FOR NEXT