ನಿಸರ್ಗ ಗ್ರ್ಯಾಂಡ್‌ನಲ್ಲಿ ಶುಕ್ರವಾರ ಮತದಾರರಿಗೆ ಬೆಣ್ಣೆದೋಸೆ, ಕಲ್ಲಂಗಡಿ ಹಣ್ಣಿನ ಜ್ಯೂಸ್ ಮತ್ತು ತುಪ್ಪದ ಲಡ್ಡುವನ್ನು ಉಚಿತವಾಗಿ ವಿತರಿಸಲಾಯಿತು.
ನಿಸರ್ಗ ಗ್ರ್ಯಾಂಡ್‌ನಲ್ಲಿ ಶುಕ್ರವಾರ ಮತದಾರರಿಗೆ ಬೆಣ್ಣೆದೋಸೆ, ಕಲ್ಲಂಗಡಿ ಹಣ್ಣಿನ ಜ್ಯೂಸ್ ಮತ್ತು ತುಪ್ಪದ ಲಡ್ಡುವನ್ನು ಉಚಿತವಾಗಿ ವಿತರಿಸಲಾಯಿತು. 
ರಾಜ್ಯ

ಉಚಿತ ಬೆಣ್ಣೆ ದೋಸೆ, ತುಪ್ಪದ ಲಡ್ಡುಗಳಿಗಾಗಿ ಬೆಂಗಳೂರಿನ ಹೋಟೆಲ್‌ಗಳಿಗೆ ಮುಗಿಬಿದ್ದ ಮತದಾರರು!

Ramyashree GN

ಬೆಂಗಳೂರು: ವರ್ಷದಿಂದ ವರ್ಷಕ್ಕೆ ಬೆಂಗಳೂರಿನ ಜನರು ಮತದಾನದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದು, ಮತ ಚಲಾಯಿಸುವಂತೆ ಚುನಾವಣಾ ಆಯೋಗ ಎಷ್ಟೇ ಪ್ರಚಾರ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಬೆಂಗಳೂರಿನ ಜನರು ಮತದಾನ ದಿನವನ್ನು ರಜಾ ದಿನದಂತೆ ಭಾವಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಕಡಿಮೆ ಮತದಾನವಾಗಿದ್ದು, ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಿನ್ನೆ ಶುಕ್ರವಾರ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಬೆಂಗಳೂರಿನಲ್ಲಿ ಮತದಾನ ಮಾಡಿದ ಕೂಡಲೇ ಜನರು ಹೋಟೆಲ್‌, ರೆಸ್ಟೋರೆಂಟ್‌ಗಳಿಗೆ ಮುಗಿಬಿದ್ದಿದ್ದ ದೃಶ್ಯ ಕಂಡುಬಂತು.

ಮತದಾನ ಮಾಡಿದವರಿಗೆ ಉಚಿತ ಊಟ ಮತ್ತು ಜ್ಯೂಸ್ ವ್ಯವಸ್ಥೆ ಮಾಡಿದ್ದರಿಂದ ಬೆಣ್ಣೆ ದೋಸೆ ಮತ್ತು ಫಿಲ್ಟರ್ ಕಾಫಿಯಿಂದ ಹಿಡಿದು ಮಾಕ್‌ಟೇಲ್‌ಗಳು, ತಿನಿಸುಗಳನ್ನು ನೀಡುವುದಾಗಿ ಮತದಾರರಿಗೆ ಆಮಿಷವೊಡ್ಡಲಾಗಿತ್ತು. ಹೀಗಾಗಿ ಜನರು ಉಚಿತ ದೋಸೆ ಮತ್ತು ತುಪ್ಪದ ಲಡ್ಡುಗಳಿಗಾಗಿ ಸರದಿಯಲ್ಲಿ ನಿಂತು ಕಾಯುತ್ತಿದ್ದರು.

ನೃಪತಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್ ಸುಮಾರು 6,700 ಗ್ರಾಹಕರಿಗೆ ಬೆಣ್ಣೆ ದೋಸೆ, ಕಲ್ಲಂಗಡಿ ಜ್ಯೂಸ್ ಮತ್ತು ತುಪ್ಪದ ಲಡ್ಡುಗಳನ್ನು ಉಚಿತವಾಗಿ ವಿತರಿಸಿದೆ. ರೆಸ್ಟೋರೆಂಟ್‌‌ಗೆ ಬರುವ ಜನರಿಗೆ ಜ್ಯೂಸ್ ಪೂರೈಸಲು 800 ಕೆಜಿಗೂ ಹೆಚ್ಚು ಕಲ್ಲಂಗಡಿ ಹಣ್ಣನ್ನು ತರಿಸಲಾಗಿತ್ತು ಎಂದು ಹೋಟೆಲ್ ಮಾಲೀಕ ಎಸ್‌ಪಿ ಕೃಷ್ಣರಾಜ್ ಟಿಎನ್‌ಐಇಗೆ ತಿಳಿಸಿದ್ದಾರೆ. ಬೆಳಗ್ಗೆ 7.30ರಿಂದಲೇ ಮತದಾರರು ತಮ್ಮ ರುಚಿಕರವಾದ ದೋಸೆ ಮತ್ತು ತಾಜಾ ಜ್ಯೂಸ್‌ಗಾಗಿ ತಾಳ್ಮೆಯಿಂದ ಕಾಯುತ್ತಿದ್ದರು.

ಕೋರಮಂಗಲದ ಮಾಲ್ಗುಡಿ ಮೈಲಾರಿ ಮನೆ ಕೂಡ ಮೈಲಾರಿ ದೋಸೆ ಮತ್ತು ಫಿಲ್ಟರ್ ಕಾಫಿ ನೀಡುವುದಾಗಿ ಹೇಳಿತ್ತು. ಅದರಂತೆ ಸುಮಾರು 1,200 ದೋಸೆ ಮತ್ತು ಕಪ್ ಕಾಫಿಯನ್ನು ನೀಡಿತು. ಬೆಳಗ್ಗೆ 8.30ಕ್ಕೆ ಗ್ರಾಹಕರು ಸಾಲುಗಟ್ಟಿ ನಿಂತಿದ್ದರು ಮತ್ತು ರೆಸ್ಟೋರೆಂಟ್ ಸಂಜೆ 5.30ರವರೆಗೆ ಜನರಿಗೆ ಸೇವೆ ನೀಡುವುದನ್ನು ಮುಂದುವರಿಸಿತು.

ರಾಜಾಜಿನಗರದಲ್ಲಿರುವ ಕೆಫೆ ಉಡುಪಿ ರುಚಿ ಪೂರಕ ಮಾಕ್‌ಟೇಲ್‌ಗಳನ್ನು ಒದಗಿಸಿತು ಮತ್ತು 4,000 ಕ್ಕೂ ಹೆಚ್ಚು ಮತದಾರರಿಗೆ ರಿಫ್ರೆಶ್ ಪುದೀನ ನಿಂಬೆ ಜ್ಯೂಸ್ ಮತ್ತು ಕಲ್ಲಂಗಡಿ ಜ್ಯೂಸ್ ಅನ್ನು ಒದಗಿಸಿತು.

ಶನಿವಾರದಂದು ಪಬ್‌ಗಳು ಗ್ರಾಹಕರಿಗೆ ಬಿಲ್‌ಗಳಲ್ಲಿ ಶೇ 20 ರಿಯಾಯಿತಿ ನೀಡಲಿದ್ದು, ಮೊದಲ ಬಾರಿಗೆ ಮತದಾರರಿಗೆ ವಿಶೇಷ ರಿಯಾಯಿತಿಗಳನ್ನು ಘೋಷಿಸಿದೆ. ಕಾಡುಬೀಸನಹಳ್ಳಿಯ ಡೆಕ್ ಆಫ್ ಬ್ರೂಸ್‌ನಲ್ಲಿ ಕಾಂಪ್ಲಿಮೆಂಟರಿ ಬಿಯರ್ ಅನ್ನು ನೀಡಲು ಮುಂದಾಗಿದೆ.

SCROLL FOR NEXT