ತುಂಗಭದ್ರಾ ಅಣೆಕಟ್ಟಿನ 19ನೇ ಗೇಟ್ 
ರಾಜ್ಯ

ತುಂಗಭದ್ರಾ ಅಣೆಕಟ್ಟು ದುರಸ್ತಿಗೆ ಯೋಜನೆ: ಸರ್ಕಾರದ ಮುಂದೆ ಎರಡು ಪ್ಲಾನ್ ಮುಂದಿಟ್ಟ ತಜ್ಞರ ತಂಡ

ಹೈಡ್ರೋ-ಮೆಕಾನಿಕಲ್ ಇಂಜಿನಿಯರಿಂಗ್ (ಅಣೆಕಟ್ಟುಗಳು) ತಜ್ಞ ಎನ್ ಕನ್ನಯ್ಯ ನಾಯ್ಡು ಮತ್ತು ತಂಡದ ಇತರ ಸದಸ್ಯರು ಮುರಿದ ಕ್ರೆಸ್ಟ್ ಗೇಟ್ ಸರಿಪಡಿಸಲು ಸಜ್ಜಾಗುತ್ತಿದ್ದಾರೆ.

ಹೊಸಪೇಟೆ: ತುಂಗಭದ್ರಾ ಅಣೆಕಟ್ಟಿನ 19ನೇ ಕ್ರೆಸ್ಟ್ ಗೇಟ್ ಸರಿಪಡಿಸಲು ತಜ್ಞರ ತಂಡ ಎರಡು ಯೋಜನೆಗಳನ್ನು ರೂಪಿಸಿದೆ.ದುರಸ್ತಿ ಯೋಜನೆಗಳನ್ನುಈ ತಂಡ ರಾಜ್ಯ ಸರ್ಕಾರದ ಮುಂದೆ ಇಡಲಾಗಿದ್ದು, ಈ ವಾರಾಂತ್ಯದೊಳಗೆ ದುರಸ್ತಿ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಹೈಡ್ರೋ-ಮೆಕಾನಿಕಲ್ ಇಂಜಿನಿಯರಿಂಗ್ (ಅಣೆಕಟ್ಟುಗಳು) ತಜ್ಞ ಎನ್ ಕನ್ನಯ್ಯ ನಾಯ್ಡು ಮತ್ತು ತಂಡದ ಇತರ ಸದಸ್ಯರು ಮುರಿದ ಕ್ರೆಸ್ಟ್ ಗೇಟ್ ಸರಿಪಡಿಸಲು ಸಜ್ಜಾಗುತ್ತಿದ್ದಾರೆ. ತೆಲಂಗಾಣ ಮತ್ತು ಆಂಧ್ರಪ್ರದೇಶ ಸರ್ಕಾರಗಳು ಜಲಾಶಯದ ಪರಿಸ್ಥಿತಿ ತಿಳಿದುಕೊಳ್ಳಲು ಇಬ್ಬರು ತಜ್ಞರನ್ನು ಅಣೆಕಟ್ಟಿನ ಸ್ಥಳಕ್ಕೆ ನಿಯೋಜಿಸಿವೆ. ನಾಯ್ಡು ಅವರ ಪ್ಲಾನ್ ಎ ಪ್ರಕಾರ, ಅಣೆಕಟ್ಟಿನಲ್ಲಿ ನೀರಿನ ಸಂಗ್ರಹವು 60 ಟಿಎಂಸಿ ಅಡಿ ಇಳಿದ ಮೇಲೆ ತಂಡವು ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತದೆ. ಪ್ಲಾನ್ ಬಿ ಅಡಿಯಲ್ಲಿ, ತಂಡವು ಹೆವಿ ಮೆಟಲ್ ಶೀಟ್‌ಗಳನ್ನು ಬಳಸಿ ಸ್ಥಳದಿಂದ ನೀರನ್ನು ಬೇರೆಡೆ ತಿರುಗಿಸಿದ ನಂತರ ಗೇಟ್‌ನ ಅರ್ಧವನ್ನು ರಿಪೇರಿ ಮಾಡುತ್ತದೆ ಎಂದು ತಂಡದ ಹಿರಿಯ ಸದಸ್ಯರು ತಿಳಿಸಿದ್ದಾರೆ.

45 ಟನ್ ತೂಕದ ಕ್ರೆಸ್ಟ್ ಗೇಟ್ ಅದರ ಚೈನ್ ಲಿಂಕ್ ಮುರಿದು ನಂತರ ನದಿಯಲ್ಲಿ ಕೊಚ್ಚಿಹೋಗಿದೆ. ಇದೀಗ ಹೊಸಪೇಟೆಯಲ್ಲಿ ಖಾಸಗಿ ಸಂಸ್ಥೆಯೊಂದು ಹೊಸ ಗೇಟ್ ನಿರ್ಮಿಸುತ್ತಿದ್ದು, ಮಂಗಳವಾರ ಸಂಜೆ ವೇಳೆಗೆ ಸಿದ್ಧವಾಗುವ ನಿರೀಕ್ಷೆ ಇದೆ. ಆದರೆ ಪ್ಲಾನ್ ಎ ಪ್ರಕಾರ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ 60 ಟಿಎಂಸಿ ಅಡಿ ತಲುಪಲು ಇನ್ನೂ ನಾಲ್ಕು ದಿನ ಕಾಯಬೇಕು. ಭಾನುವಾರ ಬೆಳಗ್ಗೆ ಗೇಟ್ ಮುರಿದ ಬಳಿಕ ಅಣೆಕಟ್ಟೆಯಿಂದ 10 ಟಿಎಂಸಿ ಅಡಿಗೂ ಹೆಚ್ಚು ನೀರು ಹರಿದು ಹೊರ ಹೋಗಿದೆ. ಟಿಬಿ ಅಣೆಕಟ್ಟು ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿ ಒಆರ್‌ಕೆ ರೆಡ್ಡಿ ಮಾತನಾಡಿ, ದುರಸ್ತಿ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಅಣೆಕಟ್ಟೆಯ ಎಲ್ಲಾ ಕ್ರೆಸ್ಟ್ ಗೇಟ್‌ಗಳಿಂದ ನೀರು ಬಿಡಲಾಗುತ್ತಿದೆ. ಅಣೆಕಟ್ಟಿನಿಂದ ಹೆಚ್ಚಿನ ಹೊರಹರಿವು ತಪ್ಪಿಸಲು ರಾಜ್ಯ ಸರ್ಕಾರ ಮತ್ತು ತಜ್ಞರ ತಂಡವು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT