ಆನಂದ ನ್ಯಾಮಗೌಡ  
ರಾಜ್ಯ

ಬಿಜೆಪಿಯ ಮಾಜಿ ಸಿಎಂ ಒಬ್ಬರ ವಿಡಿಯೋ ಶೀಘ್ರದಲ್ಲೇ ರಿಲೀಸ್: ಕಾಂಗ್ರೆಸ್ ಮಾಜಿ ಶಾಸಕ ನ್ಯಾಮಗೌಡ ಶಾಕಿಂಗ್ ಹೇಳಿಕೆ

ಬಿಜೆಪಿಯಿಂದ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು ಒಬ್ಬರ ಸಿಡಿ ಬರುವ ಸುದ್ದಿ ಬಂದಿದೆ, ಅದನ್ನು ನೀವು ನೋಡಿದ್ದೀರೋ ಇಲ್ಲವೋ ಗೊತ್ತಿಲ್ಲ. ನಾನು ಇವತ್ತು ಆ ಸುದ್ದಿ ಕೇಳಿದ್ದೇನೆ. ಅತಿ ಶೀಘ್ರದಲ್ಲಿ ಆ ಅಶ್ಲೀಲ ಸಿಡಿ ಹೊರಬರಲಿದೆಯಂತೆ ಎಂದು ಕೈ ಕಾರ್ಯಕರ್ತರ ಎದುರು ಹೇಳಿದರು.

ಬಾಗಲಕೋಟೆ: ಅತಿ ಶೀಘ್ರದಲ್ಲಿ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಒಬ್ಬರ ಅಶ್ಲೀಲ ಸಿಡಿ ಬಿಡುಗಡೆ ಆಗಲಿದೆ ಎನ್ನುವ ಸುದ್ದಿ ಬಂದಿದೆ ಎಂದು ಜಮಖಂಡಿ ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದ್ದಾರೆ.

ಸಿಎಂ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ನೀಡಿರುವುದನ್ನು ವಿರೋಧಿಸಿ ಜಮಖಂಡಿ ನಗರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಬಿಜೆಪಿಯಿಂದ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು ಒಬ್ಬರ ಸಿಡಿ ಬರುವ ಸುದ್ದಿ ಬಂದಿದೆ, ಅದನ್ನು ನೀವು ನೋಡಿದ್ದೀರೋ ಇಲ್ಲವೋ ಗೊತ್ತಿಲ್ಲ. ನಾನು ಇವತ್ತು ಆ ಸುದ್ದಿ ಕೇಳಿದ್ದೇನೆ. ಅತಿ ಶೀಘ್ರದಲ್ಲಿ ಆ ಅಶ್ಲೀಲ ಸಿಡಿ ಹೊರಬರಲಿದೆಯಂತೆ ಎಂದು ಕೈ ಕಾರ್ಯಕರ್ತರ ಎದುರು ಹೇಳಿದರು.

ಆ ಅಶ್ಲೀಲ‌ ಸಿಡಿ ಭಾರತೀಯ ಜನತಾ ಪಾರ್ಟಿಯವನದ್ದೇ. ಬಿಜೆಪಿ ಮಾಜಿ ‌ಮುಖ್ಯಮಂತ್ರಿಯ ಅಶ್ಲೀಲ ಸಿಡಿ ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಂದು ನ್ಯಾಮಗೌಡ ಹೇಳಿದ್ದಾರೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​​ ಗೆಅನುಮತಿ ನೀಡಿರುವ ರಾಜ್ಯಪಾಲರ ನಡೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ, ಪ್ರತಿಭಟನಾ ಭಾಷಣದಲ್ಲಿ ನ್ಯಾಮಗೌಡ ಸಿಡಿ ಕುರಿತು ಹೇಳಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

Mysuru Rain: ಸಿಡಿಲು ಬಡಿದು ಬೆಂಗಳೂರಿನ ಟೆಕ್ಕಿ ಸಾವು

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

SCROLL FOR NEXT