ಒತ್ತುವರಿ ಮಾಡಿಕೊಂಡ ಜಮೀನು 
ರಾಜ್ಯ

ಬೆಳಗಾವಿಯಲ್ಲಿ ಮತ್ತೊಬ್ಬ ಮಹಿಳೆ ವಿವಸ್ತ್ರಗೊಳಿಸಿದ ಆರೋಪ: ಜಮೀನು ಒತ್ತುವರಿ ಪ್ರಶ್ನಿಸಿದ್ದಕ್ಕೆ ಬಡ ಮಹಿಳೆ ಮೇಲೆ ಹಲ್ಲೆ?

ವಂಟಮೂರಿ ಘಟನೆ ರೀತಿಯ ಮತ್ತೊಂದು ಪ್ರಕರಣ ವರದಿ

ಬೆಳಗಾವಿ: ಕಳೆದ ವರ್ಷಾಂತ್ಯ ಗಡಿ ಜಿಲ್ಲೆ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿತ್ತು.

ವಂಟಮೂರಿ ಗ್ರಾಮದಲ್ಲಿ ಮಹಿಳೆ‌‌ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದ ಘಟನೆಯಂತೆಯೇ ಅದೇ ಬೆಳಗಾವಿಯಲ್ಲಿ ಅಂಥದ್ದೇ ಅಮಾನವೀಯ ಘಟನೆ ನಡೆದಿದೆ ಎಂದು ಸುದ್ದಿಯಾಗಿದೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಜಮೀನು ಒತ್ತುವರಿ ಪ್ರಶ್ನಿಸಿದ ಬಡ ಕುಟುಂಬದ ಮಹಿಳೆಯ ಸೀರೆ ಕಳಚಿ ವಿವಸ್ತ್ರಗೊಳಿಸಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಮಹಿಳೆಯನ್ನು ಅರೆ ಬೆತ್ತಲೆ ಮಾಡಿ ಪುತ್ರನ ಮೇಲೂ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ.

ಐನಾಪುರದ ಸುಭಾಷ್ ದಾನೊಳ್ಳಿ, ಸುರೇಶ ದಾನೊಳ್ಳಿ,‌ ಮಾಯಪ್ಪ ಹಳ್ಯಾಳ ಎಂಬುವವರು ಸರ್ಕಾರಿ ರಸ್ತೆ ಜೊತೆಗೆ ಬಡ ಕುಟುಂಬಕ್ಕೆ ರಾಜ್ಯ ಸರ್ಕಾರ ನೀಡಿದ್ದ ಜಮೀನು ‌ಒತ್ತುವರಿ ಮಾಡಿಕೊಂಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಸರ್ಕಾರ ನೀಡಿದ್ದ ಜಮೀನು ‌ಒತ್ತುವರಿ ಮಾಡಿಕೊಂಡ ಬಗ್ಗೆ ಬಡ ಮಹಿಳೆ ಕೇಳಿದ್ದಕ್ಕೆ ಆರೋಪಿಗಳು ಮಹಿಳೆ ಸೀರೆ ಕಳಚಿ ಹಲ್ಲೆ ಮಾಡಿ ವಿಕೃತಿ ಮೆರೆದಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾರೆ. ಮಹಿಳೆ ಅರೆ ಬೆತ್ತಲೆ ಮಾಡಿ ಜೊತೆಗೆ ಪುತ್ರನ ಮೇಲೂ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವೈಮಾನಿಕ ದಾಳಿಗಳನ್ನು ಹಿಮ್ಮೆಟ್ಟಿಸಿದ ಕುವೈತ್; ಏಕಾಂಗಿ ಆಯ್ತಾ ಇರಾನ್?

2028ರ ವಿಧಾನಸಭಾ ಚುನಾವಣೆ: Jds ಗೆ ಹೆಚ್ಚು ಕ್ಷೇತ್ರ ಗೆಲ್ಲುವ ಗುರಿ; ಸೀಟು ಹಂಚಿಕೆ ಬಗ್ಗೆ ವಿಜಯಪುರ ಜಿಲ್ಲಾ BJP ನಾಯಕರಲ್ಲಿ ಅಸಮಾಧಾನದ ದಳ್ಳುರಿ!

ಇರಾನ್ ಮೇಲೆ ದಾಳಿ: ಹಿಜ್ಬುಲ್ಲಾ ರಾಕೆಟ್ ದಾಳಿ ಬಳಿಕ ಬೈರುತ್ ಮೇಲೆ ಬಾಂಬ್ ಹಾಕಿದ ಇಸ್ರೇಲ್!

IRGC ಪ್ರಧಾನ ಕಚೇರಿ ಧ್ವಂಸ! ಹಾವಿನ ತಲೆಯನ್ನು ಕತ್ತರಿಸಿದ್ದೇವೆ: ಅಮೆರಿಕ

ThinkEdu 2026: ಚೆನ್ನೈನಲ್ಲಿಂದು ಸಮಾವೇಶ ಆರಂಭ, 'ಆತ್ಮನಿರ್ಭರ ಭಾರತದ ಕನಸಿಗೆ ಶಿಕ್ಷಣವೇ ದಿಕ್ಕು' ಕುರಿತು ಗಂಭೀರ ಚರ್ಚೆ

SCROLL FOR NEXT