ರಾಮಲಲ್ಲಾನ ಮೂರ್ತಿಗಳು 
ರಾಜ್ಯ

ಕರ್ನಾಟಕದ ಶಿಲ್ಪಿ ಗಣೇಶ್ ಭಟ್ ಕೆತ್ತನೆಯ 3ನೇ ರಾಮ ಲಲ್ಲಾ ಮೂರ್ತಿಯ ಫೋಟೋ ಬಹಿರಂಗ

ಅಯೋಧ್ಯೆಯ ರಾಮಮಂದಿರಕ್ಕಾಗಿ ಕೆತ್ತಲಾದ ಮೂರನೇ ರಾಮಲಲ್ಲಾ ವಿಗ್ರಹದ ಫೋಟೋ ಬಹಿರಂಗಗೊಂಡಿದೆ.

ಬೆಂಗಳೂರು: ಅಯೋಧ್ಯೆಯ ರಾಮಮಂದಿರಕ್ಕಾಗಿ ಕೆತ್ತಲಾದ ಮೂರನೇ ರಾಮಲಲ್ಲಾ ವಿಗ್ರಹದ ಫೋಟೋ ಬಹಿರಂಗಗೊಂಡಿದೆ.

ಅಯೋಧ್ಯೆಯ ರಾಮಮಂದಿರದಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ್ದ ರಾಮಲಲ್ಲಾನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ನಿನ್ನೆ ಒಂದೇ ದಿನ ಐದು ಲಕ್ಷಕ್ಕೂ ಹೆಚ್ಚು ಭಕ್ತರು ದೇವರ ದರ್ಶನವನ್ನು ಪಡೆದಿದ್ದಾರೆ. ದೇವರ ದರ್ಶನ ಪಡೆಯಲು ಸಾಗರೋಪಾದಿಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಹೀಗಾಗಿ ಈ ಸಂದಣಿಯನ್ನು ನಿಯಂತ್ರಿಸಲು ಸರ್ಕಾರ ಜಿಲ್ಲಾಢಳಿತ ಅಯೋಧ್ಯೆಗೆ ವಾಹನಗಳ ಪ್ರವೇಶವನ್ನು ನಿಷೇಧಿಸಿದೆ.

ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ನಂತರ ರಾಜಸ್ಥಾನದ ಶಿಲ್ಪಿ ಸತ್ಯನಾರಾಯಣ ಪಾಂಡೆ ಕೆತ್ತಿರುವ ಮೂರ್ತಿಯ ಫೋಟೋವನ್ನು ನಿನ್ನೆ ಬಹಿರಂಗಪಡಿಸಲಾಗಿತ್ತು. ಇದೀಗ ಕರ್ನಾಟಕದ ಶಿಲ್ಪಿ ಗಣೇಶ್ ಭಟ್ ಅವರು ಕೆತ್ತಿರುವ ರಾಮ ಲಲ್ಲಾ ಮೂರನೇ ಮೂರ್ತಿಯ ಫೋಟೋವನ್ನು ಇದೀಗ ಬಹಿರಂಗಪಡಿಸಲಾಗಿದೆ.

ಗಣೇಶ್ ಭಟ್ ಅವರು ಕೃಷ್ಣ ಶಿಲೆಯಲ್ಲೇ ಮೂರ್ತಿಯನ್ನು ಕೆತ್ತಿದ್ದಾರೆ. ಇದರಲ್ಲಿ, ಭಗವಾನ್ ರಾಮನ ಪಾದದ ಒಂದು ಬದಿಯಲ್ಲಿ ಹನುಮಂತನನ್ನು ಇನ್ನೊಂದು ಬದಿಯಲ್ಲಿ ಗರುಡನನ್ನು ಕೆತ್ತಲಾಗಿದೆ. ವಿಗ್ರಹ ಸುತ್ತಲೂ ವಿಷ್ಣುವಿನ ಅವತಾರಗಳನ್ನು ಕೆತ್ತಲಾಗಿದೆ.

ಇದರಲ್ಲಿ ವಿಷ್ಣುವಿನ 10 ಅವತಾರಗಳ ಚಿತ್ರ. 1- ಮತ್ಸ್ಯ, 2- ಕೂರ್ಮ, 3- ವರಾಹ, 4- ನರಸಿಂಹ, 5- ವಾಮನ್, 6- ಪರಶುರಾಮ, 7- ರಾಮ, 8- ಕೃಷ್ಣ, 9- ಬುದ್ಧ ಮತ್ತು 10ನೇ ಕಲ್ಕಿ ಅವತಾರವನ್ನು ಕಾಣಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT