ಸಾಂದರ್ಭಿಕ ಚಿತ್ರ  
ರಾಜ್ಯ

ಸೈಬರ್ ಅಪರಾಧಿಗಳಿಂದಲೂ ಉತ್ತರ-ದಕ್ಷಿಣ ವಿಭಜನೆ: ಪಾರ್ಟ್ ಟೈಂ ಉದ್ಯೋಗಿಗಳೇ ಇವರ ಟಾರ್ಗೆಟ್!

ಸೈಬರ್ ಕ್ರೈಂ ಇತ್ತೀಚೆಗೆ ಹೆಚ್ಚಾಗುತ್ತಿರುವ ಅಪರಾಧ ಪ್ರಕರಣಗಳಲ್ಲಿ ಬಹಳ ಆತಂಕಕಾರಿಯಾದದ್ದು. ಈ ಸೈಬರ್ ಕ್ರೈಂಗಳಲ್ಲಿ ಇತ್ತೀಚೆಗೆ ಬಹುಸಂಖ್ಯೆಯ ಅಕ್ರಮ ಹಣ ವರ್ಗಾವಣೆ ಖಾತೆಗಳು(Mule account)ಗಳನ್ನು ಒಳಗೊಂಡಿದ್ದು ಸೈಬರ್ ಅಪರಾಧ ಮಾಡುವವರು ಉತ್ತರ ಮತ್ತು ದಕ್ಷಿಣ ಎಂದು ವಿಭಜನೆ ಮಾಡುತ್ತಾರೆ.

ಬೆಂಗಳೂರು: ಸೈಬರ್ ಕ್ರೈಂ ಇತ್ತೀಚೆಗೆ ಹೆಚ್ಚಾಗುತ್ತಿರುವ ಅಪರಾಧ ಪ್ರಕರಣಗಳಲ್ಲಿ ಬಹಳ ಆತಂಕಕಾರಿಯಾದದ್ದು. ಈ ಸೈಬರ್ ಕ್ರೈಂಗಳಲ್ಲಿ ಇತ್ತೀಚೆಗೆ ಬಹುಸಂಖ್ಯೆಯ ಅಕ್ರಮ ಹಣ ವರ್ಗಾವಣೆ ಖಾತೆಗಳು(Mule account)ಗಳನ್ನು ಒಳಗೊಂಡಿದ್ದು ಸೈಬರ್ ಅಪರಾಧ ಮಾಡುವವರು ಉತ್ತರ ಮತ್ತು ದಕ್ಷಿಣ ಎಂದು ವಿಭಜನೆ ಮಾಡುತ್ತಾರೆ.

ಕರ್ನಾಟಕದಲ್ಲಿ ಈ ರೀತಿ ಮ್ಯೂಲ್ ಅಕೌಂಟ್ ಗಳ (ಇತರರ ಪರವಾಗಿ ಅಕ್ರಮವಾಗಿ ಸಂಪಾದಿಸಿದ ಹಣವನ್ನು ಸ್ವೀಕರಿಸಲು ಮತ್ತು ವರ್ಗಾಯಿಸಲು ಬಳಸುವ ಖಾತೆಗಳು) ತನಿಖೆಯ ಭಾಗವಾಗಿರುವ ಪೊಲೀಸ್ ಅಧಿಕಾರಿಯೊಬ್ಬರು, ನಮ್ಮ ಗಮನಕ್ಕೆ ಬಂದಿರುವ ಇಂತಹ ಎಲ್ಲಾ ಖಾತೆಗಳು ದೇಶದ ಉತ್ತರ ಭಾಗಗಳಿಗೆ ಸಂಬಂಧಿಸಿವೆ ಎಂದು ಹೇಳಿದರು. ಈ ರೀತಿ ಅಕ್ರಮ ಮಾಡುವುದರಿಂದ ವಂಚಕರು ತ್ವರಿತವಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ, ಇದರಿಂದಾಗಿ ದೂರು ದಾಖಲಾಗಿ ಪೊಲೀಸರು ಕ್ರಮ ಕೈಗೊಳ್ಳುವ ಹೊತ್ತಿಗೆ ಆರೋಪಿಗಳು ಹಣ ವರ್ಗಾವಣೆ ಮಾಡಿ ಪರಾರಿಯಾಗಬಹುದು. ಉತ್ತರದ ಪೊಲೀಸರು ದಕ್ಷಿಣ ಭಾರತದಲ್ಲಿ ಕಂಡುಬಂದ ಇಂತಹ ಅಕೌಂಟ್ ಗಳನ್ನು ಕಾರ್ಯನಿರ್ವಹಿಸಲು ಸಾಕಷ್ಟು ಎಚ್ಚರಿಕೆ ನೀಡಿದರೂ ಇದು ಅಪರಾಧಿಗಳಿಗೆ ಬೇಗನೆ ಶಿಕ್ಷೆಯಿಂದ ತಪ್ಪಿಸಲು ಸಮಯಾವಕಾಶ ನೀಡುತ್ತದೆ ಎನ್ನುತ್ತಾರೆ.

ವಂಚಕರ ಬಲಿಪಶುಗಳು ಯಾರು?: ಸೈಬರ್ ಅಪರಾಧದಲ್ಲಿ ಎರಡು ರೀತಿಯ ಮ್ಯೂಲ್ ಅಕೌಂಟ್ ಗಳಿರುತ್ತವೆ, ಒಂದರಲ್ಲಿ ಸಂತ್ರಸ್ತರು ತಮ್ಮ ವಿವರಗಳನ್ನು ಸ್ವಇಚ್ಛೆಯಿಂದ ಜಮಾ ಮಾಡಿದ ಮೊತ್ತದ ಮೇಲೆ ಶೇಕಡಾ 1ರಷ್ಟು ಕಮಿಷನ್ ಗೆ ನೀಡುವ ವಿವರವಾಗಿರುತ್ತದೆ. ಈ ಸಂದರ್ಭಗಳಲ್ಲಿ, ಖಾತೆದಾರರಿಗೆ ಹಣದ ಮೂಲದ ಬಗ್ಗೆ ಸಾಮಾನ್ಯವಾಗಿ ತಿಳಿದಿರುವುದಿಲ್ಲ.

ಇನ್ನೊಂದನ್ನು ಶೇಕಡಾ 5ರಷ್ಟು ಕಮಿಷನ್‌ ಪಡೆಯುವುದಾಗಿರುತ್ತದೆ, ಇದರಲ್ಲಿ ಬ್ಯಾಂಕ್ ಖಾತೆದಾರರು ಅವರ ಅರಿವಿಲ್ಲದೆ ತಮ್ಮ ಖಾತೆಗಳಿಗೆ ಪ್ರವೇಶವನ್ನು ಕಳೆದುಕೊಳ್ಳುತ್ತಾರೆ. ಒಂದು ವಾರದೊಳಗೆ ಆಗಾಗ್ಗೆ ಅಳಿಸಲಾದ ವಿವಿಧ ವೆಬ್‌ಸೈಟ್‌ಗಳ ಮೂಲಕ ಇದನ್ನು ಮಾಡಲಾಗುತ್ತದೆ. ವೆಬ್‌ಸೈಟ್‌ಗಳು - ಗೇಮಿಂಗ್ ವೆಬ್‌ಸೈಟ್‌ಗಳಂತೆ - ಸಂತ್ರಸ್ತರಿಗೆ ಅವರು ಪಾವತಿಸುವ ಮೊತ್ತಕ್ಕೆ 'ಡಬಲ್ ಕ್ರೆಡಿಟ್ ಪಾಯಿಂಟ್‌ಗಳನ್ನು' ಪಡೆಯುವ ನಿರ್ದಿಷ್ಟ ಮೊತ್ತವನ್ನು ಪಾವತಿಸಲು ಪ್ರೇರೇಪಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಅಂತಹ ವಹಿವಾಟುಗಳಿಗಾಗಿ, ಸಂತ್ರಸ್ತರಿಗೆ ಪಾವತಿಸಲು ವಿಭಿನ್ನ UPI ಖಾತೆಗಳಿಗೆ ಲಿಂಕ್ ಮಾಡಲಾದ ವಿಭಿನ್ನ ಸಂಖ್ಯೆಗಳನ್ನು ಒದಗಿಸಲಾಗುತ್ತದೆ.

ತರುವಾಯ, ವಂಚಕರು ಈ ಗೇಮಿಂಗ್ ಅಪ್ಲಿಕೇಶನ್‌ಗಳಿಂದ ಹುಟ್ಟಿಕೊಂಡ ಬ್ಯಾಂಕ್ ವಹಿವಾಟುಗಳನ್ನು ಪರಿಶೀಲಿಸುವ ಅರೆಕಾಲಿಕ ಉದ್ಯೋಗಗಳನ್ನು ಹುಡುಕುವ ಜನರನ್ನು ಗುರಿಯಾಗಿಸುತ್ತಾರೆ. ಗೇಮಿಂಗ್ ಸೈಟ್‌ಗಳಿಗೆ ಪಾವತಿಸುವ ವ್ಯಕ್ತಿಗಳು ಮತ್ತು ಬ್ಯಾಂಕ್ ವಿವರಗಳನ್ನು ಪರಿಶೀಲಿಸುವವರು - ಇಬ್ಬರೂ ದೊಡ್ಡ ಹಗರಣದ ಬಗ್ಗೆ ತಿಳಿದಿರುವುದಿಲ್ಲ.

ಅಂತಹ ಸಂದರ್ಭಗಳಲ್ಲಿ, ಒಂದು ವಾರದೊಳಗೆ, ವೆಬ್‌ಸೈಟ್‌ನ URL ನ್ನು ಬದಲಾಯಿಸಲಾಗುತ್ತದೆ ಮತ್ತು ಅನೇಕ ಮ್ಯೂಲ್ ಖಾತೆಗಳನ್ನು ನಿರ್ಬಂಧಿಸಲಾಗುತ್ತದೆ. ಹಲವಾರು ಮ್ಯೂಲ್ ಖಾತೆಗಳನ್ನು ಬೇಧಿಸಲಾಗುತ್ತಿದ್ದು, ಕೇವಲ ಎಂಟು ಖಾತೆಗಳು ಮಾತ್ರ ಅನ್‌ಬ್ಲಾಕ್ ಆಗಿವೆ. ನಾವು ಖಾತೆದಾರರನ್ನು ಪರಿಶೀಲಿಸಿದಾಗ ಮತ್ತು ಪತ್ತೆಹಚ್ಚಿದಾಗ, ಅವರು ಬ್ಯಾಂಕ್ ಖಾತೆ ಹೊಂದಿರುವ ಬಗ್ಗೆ ತಿಳಿದಿಲ್ಲ ಎಂದು ಹೇಳಿದರು. ತನಿಖೆಯ ಸಮಯದಲ್ಲಿ, ಈ ಸಂತ್ರಸ್ತರು ತಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ವಿವರಗಳನ್ನು ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ, ಅದನ್ನು ವಂಚಕರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿ ಹೇಳಿದರು. ಹಣವನ್ನು ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸುತ್ತಾರೆ ಅಥವಾ ಸುಲಭವಾಗಿ ಹಿಂಪಡೆಯಲು ಅಂತಾರಾಷ್ಟ್ರೀಯ ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ.

ಈ ಬಗ್ಗೆ ಮಾತನಾಡಿದ ಹಿರಿಯ ಅಧಿಕಾರಿಯೊಬ್ಬರು “ಎಲ್ಲಾ ಹಣಕಾಸು ವಹಿವಾಟುಗಳಲ್ಲಿ ವ್ಯಕ್ತಿಗಳು ಜಾಗರೂಕರಾಗಿರಬೇಕು, ಖಾಸಗಿ ಮತ್ತು ಪ್ರಾದೇಶಿಕ ಬ್ಯಾಂಕ್‌ಗಳು ಸೇರಿದಂತೆ ಹಣಕಾಸು ಸಂಸ್ಥೆಗಳು ಖಾತೆ ರಚನೆಗೆ ಕಟ್ಟುನಿಟ್ಟಾದ ಶಿಷ್ಠಾಚಾರಗಳನ್ನು ಜಾರಿಗೊಳಿಸಬೇಕು. ಇನ್ನೊಬ್ಬ ವ್ಯಕ್ತಿಯ ಸರ್ಕಾರಿ ಐಡಿ ಪುರಾವೆಯನ್ನು ಪ್ರವೇಶಿಸುವ ಮೂಲಕ ಕೇವಲ SIM ಕಾರ್ಡ್‌ನೊಂದಿಗೆ ಖಾತೆಯನ್ನು ತೆರೆಯುವ ಸುಲಭವು ತನಿಖೆಯನ್ನು ಸಂಕೀರ್ಣಗೊಳಿಸುತ್ತದೆ ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT