ಆಟೋ ಚಾಲಕನೊಂದಿಗೆ ಯುವತಿ ರಂಪಾಟ 
ರಾಜ್ಯ

FU** You..: ಬೆಂಗಳೂರಲ್ಲಿ ಮತ್ತೊಂದು Auto Driver ಸಂಘರ್ಷ; ರೈಡ್ ಕ್ಯಾನ್ಸಲ್ ಮಾಡಿ ಮನಸೋ ಇಚ್ಛೆ ಬೈದ ಯುವತಿ, Video ವೈರಲ್!

ಕನ್ನಡ ಬಾರದ ಯುವತಿಯೊಬ್ಬಳು ಏಕಕಾಲದಲ್ಲಿ ಓಲಾ ಮತ್ತು ರ‍್ಯಾಪಿಡೋ ಆ್ಯಪ್ ಗಳಲ್ಲಿ ಆಟೋ ಬುಕ್ ಮಾಡಿದ್ದು, ಈ ವೇಳೆ ಕೊನೆಯ ಕ್ಷಣದಲ್ಲಿ ಒಂದು ಆಟೋ ರೈಡ್ ಅನ್ನು ಕ್ಯಾನ್ಸಲ್ ಮಾಡಿದ್ದಾರೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಆಟೋ ಸಂಘರ್ಷ ವರದಿಯಾಗಿದ್ದು, ಎರಡೆರಡು ಆ್ಯಪ್ ನಲ್ಲಿ ರೈಡ್ ಬುಕ್ ಮಾಡಿ ಇಬ್ಬರೂ ಚಾಲಕರು ಬಂದ ಬಳಿಕ ಒಂದರಲ್ಲಿ ಕ್ಯಾನ್ಸಲ್ ಮಾಡಿದ ಯುವತಿ ಆಟೋ ಚಾಲಕನಿಗೇ ಮನಸೋ ಇಚ್ಛೆ ಬೈದಿರುವ ಘಟನೆ ವರದಿಯಾಗಿದೆ.

ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕನ್ನಡ ಬಾರದ ಯುವತಿಯೊಬ್ಬಳು ಏಕಕಾಲದಲ್ಲಿ ಓಲಾ ಮತ್ತು ರ‍್ಯಾಪಿಡೋ ಆ್ಯಪ್ ಗಳಲ್ಲಿ ಆಟೋ ಬುಕ್ ಮಾಡಿದ್ದು, ಈ ವೇಳೆ ಕೊನೆಯ ಕ್ಷಣದಲ್ಲಿ ಒಂದು ಆಟೋ ರೈಡ್ ಅನ್ನು ಕ್ಯಾನ್ಸಲ್ ಮಾಡಿದ್ದಾರೆ.

ಇದರಿಂದ ಆಕ್ರೋಶಗೊಂಡ ಆಟೋ ಚಾಲಕ ಬೇರೆ ಆಟೋ ಹತ್ತಿದ ಮಹಿಳೆಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಆಕೆ ಆತನ ಆರೋಪ ನಿರಾಕರಿಸಿದ್ದು, ತಾನು ಬುಕ್ ಮಾಡಿಲ್ಲ ಎಂದು ವಾದಿಸಿದ್ದಾಳೆ. ಇದಕ್ಕೆ ಒಬ್ಬದ ಆಟೋ ಚಾಲಕ ನಾನು ಸುಮಾರು 1.5 ಕಿಮೀ ನಿಂದ ಇಲ್ಲಿಗೆ ಬಂದಿದ್ದೇನೆ. ಇಲ್ಲಿಗೆ ಬಂದು 15 ನಿಮಿಷಗಳಾಗಿವೆ. ಆದರೂ ಕಾದು ನಿಂತಿದ್ದೇನೆ. ಇದೀಗ ಬೇರೆ ಆಟೋದಲ್ಲಿ ಹೋದರೆ ಹೇಗೆ ಎಂದು ಪ್ರಶ್ನಿಸಿದ್ದಾನೆ.

ಇದರಿಂದ ರೊಚ್ಚಿಗೆದ್ದ ಯುವತಿ ಆಟೋ ಚಾಲಕನ ವಿರುದ್ಧ ಅವಾಚ್ಯ ಶಬ್ಧಗಳನ್ನು ಬಳಸಿ ನಿಂದಿಸಿ ಆತನಿಗೆ ಗುದ್ದಲು ಪ್ರಯತ್ನಿಸಿದ್ದಾಳೆ. ಅಲ್ಲದೆ ಆಟೋ ಮುಂದಕ್ಕೆ ಸಾಗುತ್ತಲೇ ಚಾಲಕನಿಗೆ ನಿಂದನಾತ್ಮಕ ಪದ ಬಳಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಪೊಲೀಸರ ಮಧ್ಯಪ್ರವೇಶ

ಇನ್ನು ಈ ವಿಡಿಯೋ ವೈರಲ್ ಆಗುತ್ತಲೇ ಪೊಲೀಸರು ಮಧ್ಯಪ್ರವೇಶಿಸಿದ್ದು, ಘಟನೆಯ ಸ್ಥಳವನ್ನು ಮತ್ತ ಚಾಲಕನ ಸಂಪರ್ಕಕ್ಕಾಗಿ ದೂರವಾಣಿ ಸಂಖ್ಯೆ ನೀಡುವಂತೆ ಕೇಳಿದ್ದಾರೆ.

ಆಟೋದವರು ಗ್ರಾಹಕರ ಮಾತುಗಳನ್ನು ಕೇಳುತ್ತಿದ್ದರೆ, ಓಲಾ/ಉಬರ್ ಬರುತ್ತಲೇ ಇರಲಿಲ್ಲ

ಇನ್ನು ಈ ವಿಡಿಯೋ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, "ಕಂಪನಿಯು ತನ್ನ ಅಪ್ಲಿಕೇಶನ್‌ನಲ್ಲಿ ರೈಡ್ ರದ್ದುಗೊಳಿಸುವ ವೈಶಿಷ್ಟ್ಯವನ್ನು ನೀಡಿದಾಗ, ಅದನ್ನು ಬಳಸುವುದಕ್ಕಾಗಿ ಗ್ರಾಹಕರನ್ನು ಏಕೆ ದೂಷಿಸುತ್ತೀರಿ? ರೈಡ್ ರದ್ದಿಗಾಗಿ ಸಂಸ್ಥೆ ದಂಡ ಕಲೆಹಾಕುತ್ತಿದೆ. ಸಾಕಷ್ಟು ಬಾರಿ ಚಾಲಕರೇ ರೈಡ್ ಕ್ಯಾನ್ಸಲ್ ಮಾಡುತ್ತಾರೆ. ಇದೇ ಕಾರಣಕ್ಕೆ ಪ್ರಯಾಣಿಕರು 2 ಆ್ಯಪ್ ಗಳಲ್ಲಿ ರೈಡ್ ಬುಕ್ ಮಾಡುತ್ತಾರೆ. ಈ ಆಟೋದವರು ಗ್ರಾಹಕರ ಮಾತುಗಳನ್ನು ಕೇಳುತ್ತಿದ್ದರೆ, ಓಲಾ/ಉಬರ್ ಬರುತ್ತಲೇ ಇರಲಿಲ್ಲ. ಇದು ನಿಮ್ಮ ತಪ್ಪಿನ ಪ್ರತಿಫಲ ಎಂದು ಓರ್ವ ಬಳಕೆದಾರ ಟ್ವೀಟ್ ಮಾಡಿದ್ದಾರೆ.

ಮತ್ತೋರ್ವ ಬಳಕೆದಾರ ಟ್ವೀಟ್ ಮಾಡಿ, 'ಆಟೋ ಸವಾರಿ ರದ್ದುಗೊಳಿಸುವುದು ಅಪರಾಧವಲ್ಲ, ಆದರೆ ಅವಾಚ್ಯ ಪದಗಳನ್ನು ಬಳಸಿ ಮತ್ತು ಯಾರಿಗಾದರೂ ಹೊಡೆಯುವುದು ತಪ್ಪು. ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಶೀಘ್ರದಲ್ಲೇ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ಪ್ರತಿಕ್ರಿಯಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT