ಕ್ಷಮೆಯಾಚಿಸಿದ Instagrammer ದೇವ್ ಶರ್ಮಾ 
ರಾಜ್ಯ

'ತಪ್ಪಾಯ್ತು ದಯವಿಟ್ಟು ಕ್ಷಮಿಸಿ': ಕನ್ನಡಿಗರು, ಕರ್ನಾಟಕದ ವಿರುದ್ಧ ಅವಾಚ್ಯ ನಿಂದನೆ ಮಾಡಿದ್ದ Instagrammer ಕ್ಷಮೆ ಯಾಚನೆ!

ಬೆಂಗಳೂರು ಪೊಲೀಸರು ಮತ್ತು ಮುಂಬೈ ಪೊಲೀಸರ ಎಚ್ಚರಿಕೆ ಬಳಿಕ Instagrammer ದೇವ್ ಶರ್ಮಾ ಇದೀಗ ವಿಡಿಯೋ ಮಾಡಿ ಕನ್ನಡಿಗರು ಮತ್ತು ಕರ್ನಾಟಕದ ಕ್ಷಮೆಯಾಚಿಸಿದ್ದಾನೆ.

ಬೆಂಗಳೂರು: ಕನ್ನಡಿಗರು, ಕರ್ನಾಟಕದ ವಿರುದ್ಧ ಅವಾಚ್ಯ ನಿಂದನೆ ಮಾಡಿ ವಿಡಿಯೋ ಮಾಡಿದ್ದ ಮಹಾರಾಷ್ಟ್ರ ಮೂಲದ Instagrammer ಕೊನೆಗೂ ಕ್ಷಮೆಯಾಚಿಸಿದ್ದಾನೆ.

ಬೆಂಗಳೂರು ಪೊಲೀಸರು ಮತ್ತು ಮುಂಬೈ ಪೊಲೀಸರ ಎಚ್ಚರಿಕೆ ಬಳಿಕ Instagrammer ದೇವ್ ಶರ್ಮಾ ಇದೀಗ ವಿಡಿಯೋ ಮಾಡಿ ಕನ್ನಡಿಗರು ಮತ್ತು ಕರ್ನಾಟಕದ ಕ್ಷಮೆಯಾಚಿಸಿದ್ದಾನೆ.

ಈ ಕುರಿತು ವಿಡಿಯೋ ಮಾಡಿರುವ ದೇವ್ ಶರ್ಮಾ, 'ಇಂದು ನನ್ನ ಮನೆಗೆ ಮಹಾರಾಷ್ಟ್ರ ಪೊಲೀಸರು ಬಂದಿದ್ದರು. ನನ್ನ ವಿಡಿಯೋಗಳ ಕುರಿತು ನನಗೆ ಅರಿವು ಮೂಡಿಸಿದರು. ಇದೀಗ ನನ್ನ ತಪ್ಪಿನ ಅರಿವು ನನಗಾಗಿದೆ. ಆ ವಿಡಿಯೋಗಳೆಲ್ಲವೂ ನಾನು ಕೋಪದಿಂದ ಮಾಡಿದ್ದು. ಇನ್ನು ಮುಂದೆ ಇಂತಹ ವಿಡಿಯೋಗಳನ್ನು ಮಾಡಲ್ಲ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದಿದ್ದಾನೆ.

ಅಲ್ಲದೆ ಇನ್ನು ಮುಂದೆ ಯಾರಿಗೂ ನೋವಾಗದ ರೀತಿಯಲ್ಲಿ ಕ್ರಿಯಾತ್ಮಕ ವಿಡಿಯೋಗಳನ್ನು ಮಾಡುತ್ತೇನೆ. ದಯವಿಟ್ಟು ಕ್ಷಮಿಸಿ.. ನನ್ನ ತಪ್ಪಿನ ಅರಿವು ಮೂಡಿಸಿದ್ದಕ್ಕಾಗಿ ಬೆಂಗಳೂರು ಮತ್ತು ಮುಂಬೈ ಪೊಲೀಸರಿಗೆ ಧನ್ಯವಾದ ಹೇಳುತ್ತೇನೆ ಎಂದು ದೇವ್ ಶರ್ಮಾ ಹೇಳಿದ್ದಾನೆ.

ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿದ್ದ ದೇವ್ ಶರ್ಮಾ

ಇನ್ನು ಈ Instagrammer ದೇವ್ ಶರ್ಮಾ ತನ್ನ ಖಾತೆಯಲ್ಲಿ ಕನ್ನಡಿಗರು ಮತ್ತು ಕರ್ನಾಟಕದ ಕುರಿತು ಆಕ್ಷೇಪಾರ್ಹ ವಿಡಿಯೋಗಳನ್ನು ಮಾಡಿ ವ್ಯಾಪಕ ವಿರೋಧ ಎದುರಿಸುತ್ತಿದ್ದ. ಕನ್ನಡಿಗರು ನೀವೇನಾದರೂ ನನ್ನ ಮುಂದೆ ಬಂದರೆ ನಿಮಗೊಂದು ಗತಿ ಕಾಣಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ಈತನ ವಿಡಿಯೋಗಳನ್ನು ಕನ್ನಡಿಗರು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್