ಬಂಧಿತ ಆರೋಪಿಗಳಿಂದ ಚಿನ್ನಾಭರಣ ವಶ 
ರಾಜ್ಯ

ಬೆಂಗಳೂರು: ಬೀಗ ಹಾಕಿದ ಮನೆಗಳೇ ಟಾರ್ಗೆಟ್; ಪುರುಷರ ವೇಷದಲ್ಲಿ ಕಳ್ಳತನ; ಆಟೋರಿಕ್ಷಾ ಚಾಲಕಿ ಸೇರಿ ಇಬ್ಬರು ಮಹಿಳೆಯರ ಬಂಧನ

ಆಟೋ ಚಾಲಕಿ ಬೀಗ ಹಾಕಿದ ಮನೆಗಳನ್ನು ಹುಡುಕುತ್ತಾ ಓಡಾಡುತ್ತಿದ್ದಳು. ಮನೆಯನ್ನು ಆಯ್ಕೆ ಮಾಡಿದ ನಂತರ, ಅವಳು ತನ್ನ ಪಾರ್ಟನರ್ ಜೊತೆ ಸೇರಿ ಕಳ್ಳತನ ಮಾಡುತ್ತಿದ್ದಳು.

ಬೆಂಗಳೂರು: ಬೆಂಗಳೂರು: ಸರಣಿ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೊಮ್ಮನಹಳ್ಳಿ ಪೊಲೀಸರು ಆಟೋರಿಕ್ಷಾ ಚಾಲಕಿ ಸೇರಿದಂತೆ ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ.

ಬೀಗ ಹಾಕಿದ ಮನೆಗಳನ್ನು ಗುರುತಿಸಿ ಚಿನ್ನಾಭರಣ ಕಳವು ಮಾಡುತ್ತಿದ್ದ ಆಟೋರಿಕ್ಷಾ ಚಾಲಕಿ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಡಿ.ಜೆ.ಹಳ್ಳಿಯ ಶಬರೀನ್‌ ತಾಜ್‌ (38), ನೀಲಂ (22) ಬಂಧಿತರು.

ಇಬ್ಬರೂ ಆರೋಪಿಗಳು ಕಳೆದ ಎರಡು ವರ್ಷಗಳಿಂದ ಸಕ್ರಿಯರಾಗಿದ್ದರು. ಆಟೋ ಚಾಲಕಿ ಬೀಗ ಹಾಕಿದ ಮನೆಗಳನ್ನು ಹುಡುಕುತ್ತಾ ಓಡಾಡುತ್ತಿದ್ದಳು. ಮನೆಯನ್ನು ಆಯ್ಕೆ ಮಾಡಿದ ನಂತರ, ಅವಳು ತನ್ನ ಪಾರ್ಟನರ್ ಜೊತೆ ಸೇರಿ ಕಳ್ಳತನ ಮಾಡುತ್ತಿದ್ದಳು. ಇಬ್ಬರಿಂದ 11 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಬೊಮ್ಮನಹಳ್ಳಿ ಮತ್ತು ಮೈಕೊ ಲೇಔಟ್ ಪೊಲೀಸ್ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದಾರೆ. ಅವರು ಕದ್ದ ಚಿನ್ನಾಭರಣಗಳನ್ನು ಡಿಜೆ ಹಳ್ಳಿ ಮತ್ತು ಟ್ಯಾನರಿ ರಸ್ತೆಯಲ್ಲಿರುವ ಆಭರಣ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದರು, ಆರೋಪಿಗಳಿಂದ ಸುಮಾರು 130 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರೂ ಮಹಿಳೆಯರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಅಪರಾಧಕ್ಕೆ ಬಳಸಲಾಗಿದ್ದ ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿಗಳು ಗಾರ್ವೆಭಾವಿಪಾಳ್ಯದ ಮನೆಯೊಂದರಲ್ಲಿ ಮಾ.17ರಂದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಯಿತು.

ಏಪ್ರಿಲ್ 2 ರಂದು ಆಡುಗೋಡಿ ಟ್ರಾಫಿಕ್ ಸಿಗ್ನಲ್ ಬಳಿ ಇಬ್ಬರನ್ನು ಬಂಧಿಸಲಾಯಿತು. ಅವರನ್ನು ಒಂಬತ್ತು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಯಿತು. ಅವರ ಮಾಹಿತಿಯ ಆಧಾರದ ಮೇಲೆ, ಆರೋಪಿಗಳು ಮಾರಾಟ ಮಾಡಿದ್ದ ಚಿನ್ನಾಭರಣಗಳನ್ನು ಹಿಂದಿರುಗಿಸುವಂತೆ ಆಭರಣ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಲಾಗಿದೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಂಡೋ-ಪೆಸಿಫಿಕ್‌ನಲ್ಲಿ ಶಾಂತಿ, ಸ್ಥಿರತೆ-ಸಮೃದ್ಧಿಗೆ ‘ವಿಶ್ವಾಸಾರ್ಹ ಪಾಲುದಾರಿಕೆ’ ಅಗತ್ಯ: Quad ಸಭೆಯಲ್ಲಿ ಜೈಶಂಕರ್‌ ಮಹತ್ವದ ಕರೆ..!

‘ಸ್ವಯಂ ರಕ್ಷಣೆ’ ಹೆಸರಿನಲ್ಲಿ ಇರಾನ್ ಕ್ಷಿಪಣಿ ಉಡಾವಣೆ ತಾಣಗಳ ಮೇಲೆ ಅಮೆರಿಕಾ ವಾಯುದಾಳಿ: ಟ್ರಂಪ್ ದ್ವಿಮುಖ ನಡೆ ವಿರುದ್ಧ ಟೀಕೆ, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನ..!

ತಮಿಳುನಾಡು ಸರ್ಕಾರದಿಂದ ಮತ್ತೊಂದು ಮಹತ್ವದ ಘೋಷಣೆ: ಸಣ್ಣ ರೈತರ ₹50,000 ವರೆಗಿನೆ ಬೆಳೆ ಸಾಲ ಮನ್ನಾ!

ಸತತ 4ನೇ ಬಾರಿ CNG ದರ ಏರಿಕೆ: ಕೆಜಿಗೆ 2 ರೂ. ಹೆಚ್ಚಳ, ವಾಹನ ಸವಾರರಿಗೆ ಶಾಕ್‌

ಗೃಹಲಕ್ಷ್ಮಿ ಯೋಜನೆಯಲ್ಲಿ 100 ಕೋಟಿ ರೂ.ದುರ್ಬಳಕೆ: ಫಲಾನುಭವಿಗಳ ಮರುಪರಿಶೀಲನೆಗೆ ಸರ್ಕಾರ ಚಿಂತನೆ..!

SCROLL FOR NEXT