ಪರಮೇಶ್ವರ್  
ರಾಜ್ಯ

ಮಾದಕ ದ್ರವ್ಯ ಉತ್ತೇಜಿಸುವವರು ಮನುಷ್ಯರಲ್ಲ: ಡಾ. ಜಿ.ಪರಮೇಶ್ವರ್

ಮಾದಕ ದ್ರವ್ಯಗಳನ್ನು ಉತ್ತೇಜಿಸುವವರು ಅಥವಾ ಬೆಂಬಲಿಸುವವರು ಮನುಷ್ಯರಲ್ಲ. ಇಂತಹವರು ಜನರ ಜೀವನ, ಭವಿಷ್ಯ ಮತ್ತು ಆರೋಗ್ಯವನ್ನು ನಾಶಪಡಿಸುತ್ತಾರೆ.

ಬೆಂಗಳೂರು: ಮಾದಕ ದ್ರವ್ಯಗಳ ಉತ್ತೇಜಿಸುವ ಅಥವಾ ಬೆಂಬಲಿಸುವ ವ್ಯಕ್ತಿಗಳು ಮನುಷ್ಯರಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಭಾನುವಾರ ಹೇಳಿದರು.

ಮಾದಕ ದ್ರವ್ಯಗಳ ದುರುಪಯೋಗ ಮತ್ತು ಮಾರಾಟದ ವಿರುದ್ಧ ರಾಜ್ಯದ ಹೋರಾಟವನ್ನು ಬೆಂಬಲಿಸಲು ವಿಧಾನಸೌಧದಲ್ಲಿ ಆಯೋಜಿಸಲಾದ ವಿಂಟೇಜ್ ಕಾರು ರ್ಯಾಲಿಯಲ್ಲಿ ಗೃಹ ಸಚಿವರು ಮಾತನಾಡಿದರು.

ಮಾದಕ ದ್ರವ್ಯಗಳನ್ನು ಉತ್ತೇಜಿಸುವವರು ಅಥವಾ ಬೆಂಬಲಿಸುವವರು ಮನುಷ್ಯರಲ್ಲ. ಇಂತಹವರು ಜನರ ಜೀವನ, ಭವಿಷ್ಯ ಮತ್ತು ಆರೋಗ್ಯವನ್ನು ನಾಶಪಡಿಸುತ್ತಾರೆಂದು ಕಿಡಿಕಾರಿದರು. ಇದೇ ವೇಳೆ ಕರ್ನಾಟಕವನ್ನು ಮಾದಕ ದ್ರವ್ಯ ಮುಕ್ತ ರಾಜ್ಯವಾಗಿಸಲು ಸರ್ಕಾರ ಬದ್ಧತೆಯನ್ನು ಪುನರುಚ್ಚರಿಸಿದರು.

ಬೆಂಗಳೂರು ನಗರ ಪೊಲೀಸರು ಫೆಡರೇಶನ್ ಆಫ್ ಹಿಸ್ಟಾರಿಕ್ ವೆಹಿಕಲ್ಸ್ ಆಫ್ ಇಂಡಿಯಾ (FHVI) ಮತ್ತು ಪಾಲ್ ಜಾನ್ ರೆಸಾರ್ಟ್ಸ್ ಮತ್ತು ಹೋಟೆಲ್‌ಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ವಿಧಾನಸೌಧದಿಂದ ಪ್ರಾರಂಭವಾಗಿ ಮೈಸೂರು ರಸ್ತೆಯಲ್ಲಿ ಕೊನೆಗೊಂಡ ರ್ಯಾಲಿಯಲ್ಲಿ ನೂರಾರು ವಿಂಟೇಜ್ ಕಾರುಗಳು ಮತ್ತು ದ್ವಿಚಕ್ರ ವಾಹನಗಳು ಭಾಗವಹಿಸಿದ್ದವು. ಎಂಜಿ ರಸ್ತೆ ಮೆಟ್ರೋ ನಿಲ್ದಾಣ ಮತ್ತು ಇತರ ಸ್ಥಳಗಳಲ್ಲಿಯೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಯಿತು.

ರ್ಯಾಲಿಗೆ ಚಾಲನೆ ನೀಡುವ ಮೊದಲು ಮಾತನಾಡಿದ ಪರಮೇಶ್ವರ್ ಅವರು, ಕರ್ನಾಟಕವನ್ನು ಮಾದಕ ವಸ್ತು ಮುಕ್ತಗೊಳಿಸುವ ಸರ್ಕಾರದ ಘೋಷಣೆಯನ್ನು ರಾತ್ರೋರಾತ್ರಿ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ನಾವು ಮಾದಕ ವಸ್ತು ವಿರುದ್ಧ ಯುದ್ಧವನ್ನು ಪ್ರಾರಂಭಿಸಿದ್ದೇವೆ. ಕಳೆದ ವರ್ಷದಿಂದ, 300 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಸಾವಿರಾರು ಜನರನ್ನು ಬಂಧಿಸಲಾಗಿದೆ. ದುರದೃಷ್ಟವಶಾತ್, ವಿದೇಶಗಳಿಂದ ಶಿಕ್ಷಣಕ್ಕಾಗಿ ಬರುವ ವಿದ್ಯಾರ್ಥಿಗಳು ಸಹ ಇಂತಹ ಅಪರಾಧಗಳಲ್ಲಿ ಭಾಗಿಯಾಗುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.

ಮಾದಕ ವಸ್ತು ಮಾರಾಟಗಾರರು "ಎಷ್ಟು ಅಮಾನವೀಯ"ರಾಗಿದ್ದಾರೆಂದರೆ ಅವರು ಶಾಲೆಗಳಿಗೆ ಭೇಟಿ ನೀಡಿ ಚಾಕೊಲೇಟ್‌ ಎಂದು ಹೇಳಿ ಮಾದಕ ವಸ್ತುವನ್ನು ನೀಡುತ್ತಿದ್ದಾರೆ. ಆರಂಭದಲ್ಲಿ, ಮಕ್ಕಳಿಗೆ ಉಚಿತವಾಗಿ ನೀಡುತ್ತಿದ್ದಾರೆ. ನಂತರ ವ್ಯಸನಿಗಳಾಗಿ ಮಾಡಿ, ಹಣ ಪಡೆಯುತ್ತಾರೆ. ಇದನ್ನ ನಿಯಂತ್ರಿಸಲು ಬೆಂಗಳೂರು ನಗರ ಪೊಲೀಸರು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಧಾನಸಭೆಯಲ್ಲಿ 'ಸಿಎಂ ಕುರ್ಚಿ ಕದನ' ಸದ್ದು: ಆರ್. ಅಶೋಕ್ ಮಾತಿಗೆ ಕೆರಳಿದ ಬೈರತಿ; ತೀವ್ರ ಮಾತಿನ ಚಕಮಕಿ!

ತಾಂತ್ರಿಕ ಕಾರಣಗಳಿಂದ SIR ಕುರಿತು ಸಂಸತ್ತಿನಲ್ಲಿ ಚರ್ಚಿಸಲು ಸಾಧ್ಯವಿಲ್ಲ: ಅಮಿತ್ ಶಾ

25 ವರ್ಷ ವಯಸ್ಸಿನ ಅವಿವಾಹಿತ ಮಹಿಳೆಯರು..: ಅನಿರುದ್ಧಾಚಾರ್ಯ ವಿರುದ್ಧ ಕೇಸ್ ದಾಖಲು! 'ಪೂಕಿ ಬಾಬಾ' ಹೇಳಿದ್ದೇನು ಗೊತ್ತಾ?

EVMs ಅಲ್ಲವೇ ಅಲ್ಲ, ಪ್ರಧಾನಿ ಮೋದಿ ಇದನ್ನೇ 'ಹ್ಯಾಕ್' ಮಾಡಿದ್ದಾರೆ! ಲೋಕಸಭೆಯಲ್ಲಿ ಕಂಗನಾ

Amazon: ಭಾರತದಲ್ಲಿ 3 ಲಕ್ಷ ಕೋಟಿ ರೂ ಹೆಚ್ಚುವರಿ ಹೂಡಿಕೆ; 10 ಲಕ್ಷ ಉದ್ಯೋಗ ಸೃಷ್ಟಿ!

SCROLL FOR NEXT