ಹುಬ್ಬಳ್ಳಿ: ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಅವರ ಕಾರು ಚಾಲಕ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. 45 ವರ್ಷದ ಮಂಜುನಾಥ್ ಹೂಗಾರ್ ಮೃತ ಕಾರು ಚಾಲಕ. ಹುಬ್ಬಳ್ಳಿಯ ನೂಲ್ವಿ ಮೂಲದ ಮಂಜುನಾಥ್ ನಿನ್ನೆ ರಾತ್ರಿ ಬೈಕ್ ನಲ್ಲಿ ತಮ್ಮ ಗ್ರಾಮಕ್ಕೆ ಹೋಗುತ್ತಿದರು. ಈ ವೇಳೆ ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದು ಸ್ಥಳದಲ್ಲೇ ಮಂಜುನಾಥ್ ಹೂಗಾರ್ ಮೃತಪಟ್ಟಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನು ತಮ್ಮ ಕಾರು ಚಾಲಕ ಮಂಜುನಾಥ್ ಸಾವಿಗೆ ಶಾಸಕ ಮಹೇಶ್ ಟೆಂಗಿನ ಕಾಯಿ ತೀವ್ರ ಸಂತಾಪ ಸೂಚಿಸಿದ್ದಾರೆ.