ಸಂಗ್ರಹ ಚಿತ್ರ 
ರಾಜ್ಯ

ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಮದ್ಯ ಸೇವಿಸುವಂತೆ ಮಹಿಳೆಗೆ ಒತ್ತಾಯ: ಪ್ರಕರಣ ದಾಖಲು

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮಾರತ್ತಹಳ್ಳಿಯ ಪಬ್‌'ಗೆ ಮಹಿಳೆ ಮಂಗಳವಾರ ರಾತ್ರಿ ಗೆಳೆಯನೊಂದಿಗೆ ಭೇಟಿ ನೀಡಿದ್ದರು.

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಗಾಗಿ ಪಬ್'ಗೆ ಹೋಗಿದ್ದ ಮಹಿಳಯೊಬ್ಬರಿಗೆ ಯುವಕನೊಬ್ಬ ಮದ್ಯ ಸೇವಿಸುವಂತೆ ಒತ್ತಾಯಿಸಿ, ಅನುಚಿತಾಗಿ ವರ್ತನೆ ತೋರಿದ ಹಿನ್ನೆಲೆಯಲ್ಲಿ ಈ ಸಂಬಂಧ ಮಹಿಳೆ ದೂರು ದಾಖಲಿಸಿದ್ದಾರೆ.

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮಾರತ್ತಹಳ್ಳಿಯ ಪಬ್‌'ಗೆ ಮಹಿಳೆ ಮಂಗಳವಾರ ರಾತ್ರಿ ಗೆಳೆಯನೊಂದಿಗೆ ಭೇಟಿ ನೀಡಿದ್ದರು. ಈ ವೇಳೆ ಪಾನಮತ್ತನಾಗಿದ್ದ ಯುವಕ ಮಹಿಳೆ ಬಳಿ ಬಂದು ಮದ್ಯ ಸೇವಿಸುವಂತೆ ಒತ್ತಾಯಿಸಿ, ಅನುಚಿತವಾಗಿ ವರ್ತಿಸಿದ್ದಾನೆ. ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ಈ ನಡುವೆ ಸ್ಥಳಕ್ಕೆ ಬಂದ ಬೌನ್ಸರ್ ಗಳು ಯುವಕನನ್ನು ಪಬ್ ನಿಂದ ಹೊರಗೆ ಕಳುಹಿಸಿದ್ದಾರೆ. ಆದರೆ, ಮಹಿಳೆ ಆತನನ್ನು ಪಬ್ ನಿಂದ ಹೊರಗೆ ಕಳುಹಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.

ಬುಧವಾರ ಬೆಳಗ್ಗೆ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಾಗಿ ಪಬ್‌ನಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದು, ತನಿಖೆಗಳು ಆರಂಭಿಸಿದ್ದಾರೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಯೆಟ್ನಾಂ ದೋಣಿ ದುರಂತ: 15 ಭಾರತೀಯ ಪ್ರವಾಸಿಗರು ಸಾವು; ತಮಿಳುನಾಡು, ಆಂಧ್ರ ಮಂದಿ ಸಮುದ್ರಪಾಲು, Video!

INS Mahendragiri: ಪ್ರಾಜೆಕ್ಟ್ 17A, ಕೇವಲ 18 ತಿಂಗಳಲ್ಲಿ 6ನೇ ಯುದ್ಧನೌಕೆ ನೌಕಾಪಡೆ ಸೇರ್ಪಡೆ, Video

ಸರ್ಕಾರ ಉರುಳಿಸಲು BJPಯಿಂದ ಕುದುರೆ ವ್ಯಾಪಾರ: ಒಬ್ಬ ಶಾಸಕನಿಗೆ ಬರೋಬ್ಬರಿ 20-30 ಕೋಟಿ ಆಫರ್: ಸಿಎಂ ಅಬ್ದುಲ್ಲಾ ಆರೋಪ

EDಯಿಂದ ಅನಿಲ್ ಅಂಬಾನಿಗೆ ಸೇರಿದ 1,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಹೆಚ್ಚುವರಿ ಆಸ್ತಿಗಳ ಮುಟ್ಟುಗೋಲು!

ಮದುವೆಯಾದ ಎರಡು ದಿನಕ್ಕೇ ಕುಟುಂಬಸ್ಥರಿಂದಲೇ ನವವಿವಾಹಿತೆ ಕಿಡ್ನಾಪ್, Video ವೈರಲ್