ಸಂಗ್ರಹ ಚಿತ್ರ 
ರಾಜ್ಯ

Nice road Toll: ವಾಹನ ಸವಾರರೇ ಗಮನಿಸಿ...; ನೈಸ್ ರಸ್ತೆ ಟೋಲ್ ಶುಲ್ಕ ಹೆಚ್ಚಳ, ಹೊಸ ದರಗಳ ಬಗ್ಗೆ ಇಲ್ಲಿದೆ ಮಾಹಿತಿ

ಈ ಕುರಿತಾಗಿ ಸಾರ್ವಜನಿಕ ಪ್ರಕಟಣೆ ಹೊರಡಿಸಿರುವ ನಂದಿ ಎಕನಾಮಿಕಲ್ ಕಾರಿಡಾರ್ ಎಂಟರ್​​ಪ್ರೈಸಸ್ (NICE), ಪರಿಷ್ಕೃತ ದರ ಜುಲೈ 1ರಿಂದಲೇ ಅನ್ವಯ ಆಗಲಿದೆ ಎಂದು ಹೇಳಿದೆ.

ಬೆಂಗಳೂರು: ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ನೈಸ್ ರಸ್ತೆಯ ಟೋಲ್ ದರಗಳು ಜುಲೈ.1ರ ಮಧ್ಯರಾತ್ರಿಯಿಂದಲೇ ಏರಿಕೆಯಾಗಿವೆ.

ಈ ಕುರಿತಾಗಿ ಸಾರ್ವಜನಿಕ ಪ್ರಕಟಣೆ ಹೊರಡಿಸಿರುವ ನಂದಿ ಎಕನಾಮಿಕಲ್ ಕಾರಿಡಾರ್ ಎಂಟರ್​​ಪ್ರೈಸಸ್ (NICE), ಪರಿಷ್ಕೃತ ದರ ಜುಲೈ 1ರಿಂದಲೇ ಅನ್ವಯ ಆಗಲಿದೆ ಎಂದು ಹೇಳಿದೆ.

ಕೇವಲ ನೈಸ್ ರಸ್ತೆಯಷ್ಟೇ ಅಲ್ಲದೆ, ನಂದಿ ಏಕನಾಮಿಕಲ್ ಕಾರಿಡಾರ್ ಎಂಟರ್ಪ್ರೈಸಸ್ ಅಧೀನಕ್ಕೆ ಒಳಪಡುವ ಒಟ್ಟು 8 ಟೋಲ್ ಪ್ಲಾಜಾಗಳಲ್ಲೂ ದರ ಏರಿಕೆ ಅನ್ವಯ ಆಗಲಿದೆ.

ಹೊಸೂರು ರಸ್ತೆ. ಬನ್ನೇರುಘಟ್ಟ ರಸ್ತೆ. ಕನಕಪುರ ರಸ್ತೆ, ಕ್ಲೋವರ್ ಲೀಫ್ ಜಂಕ್ಷನ್, ಮೈಸೂರು ರಸ್ತೆ, ತುಮಕೂರು ರಸ್ತೆ, ಲಿಂಕ್ ರಸ್ತೆಗಳನ್ನು ಬಳಕೆ ಮಾಡುವ ವಾಹನ ಸವಾರರಿಗೆ ಹೊಸ ಟೋಲ್ ದರದ ಬಿಸಿ ಮುಟ್ಟಲಿದೆ.

ನೈಸ್ ರಸ್ತೆಯಲ್ಲಿ ಬೈಕ್ ಸವಾರರು ಕೂಡ ಟೋಲ್ ಪಾವತಿ ಮಾಡುತ್ತಾ ಇದ್ದು, ದರ ಏರಿಕೆಗೆ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟೋಲ್ ಪ್ಲಾಜಾ ಯೋಜನೆಯ ವೆಚ್ಚ ಮತ್ತು ಇಲ್ಲಿಯವರೆಗೆ ಸಂಗ್ರಹಿಸಿದ ಟೋಲ್ ಶುಲ್ಕವನ್ನು ಪ್ರದರ್ಶಿಸಬೇಕು. ಹೂಡಿಕೆ ಮಾಡಿದ ಹಣವನ್ನು ಮರುಪಡೆದ ನಂತರ ರಸ್ತೆಗಳನ್ನು ಸರ್ಕಾರಕ್ಕೆ ಹಸ್ತಾಂತರಿಸಬೇಕು. ನಿರ್ವಹಣಾ ಶುಲ್ಕವನ್ನು ಮಾತ್ರ ಸಂಗ್ರಹಿಸಬೇಕು. ಆದರೆ, ಹಗಲು ದರೋಡೆ ನಡೆಸಲಾಗುತ್ತಿದೆ ಎಂದು ರಸ್ತೆ ಬಳಕೆದಾರರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್ ಬಳಸುವ ದ್ವಿಚಕ್ರ ಸವಾರರಿಗೆ ಟೋಲ್ ಶುಲ್ಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅವರು ಒಂದೇ ಟ್ರಿಪ್‌ಗೆ 25 ರೂ ಮತ್ತು ಬಹು ಟ್ರಿಪ್‌ಗಳಿಗೆ 40 ರೂ. ಪಾವತಿಸಬೇಕಾಗುತ್ತದೆ. ಇನ್ನು ಕಾಲುಗ ಶುಲ್ಕವನ್ನು 5 ರೂ. ಹೆಚ್ಚಿಸಲಾಗಿದೆ.

  • ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಫ್ಲೈಓವರ್‌ನಲ್ಲಿ ಒಂದೇ ಟ್ರಿಪ್‌ಗೆ ಕಾರುಗಳು, ಜೀಪ್‌ಗಳು ಮತ್ತು ವ್ಯಾನ್‌ಗಳಿಗೆ 65 ರೂ ಮತ್ತು ಬಹು ಟ್ರಿಪ್‌ಗಳಿಗೆ 95 ರೂ. ನಿಗದಿಪಡಿಸಲಾಗಿದೆ. ಮಾಸಿಕ ಪಾಸ್ ಶುಲ್ಕವನ್ನು 1,885 ರೂ.ಗೆ ಹೆಚ್ಚಿಸಲಾಗಿದೆ.

  • ಅತ್ತಿಬೆಲೆ ರಸ್ತೆ ಬಳಸುವ ಕಾರುಗಳು, ಜೀಪ್‌ಗಳು ಮತ್ತು ವ್ಯಾನ್‌ಗಳಿಗೆ ಒಂದು ಟ್ರಿಪ್‌ಗೆ 40 ರೂ ಮತ್ತು ಬಹು ಟ್ರಿಪ್‌ಗಳಿಗೆ 55 ರೂ. ಮಾಸಿಕ ಪಾಸ್ ಶುಲ್ಕವನ್ನು 1,130 ರೂ. ನಿಗದಿುಪಡಿಸಲಾಗಿದೆ.

  • ನೈಸ್ ರಸ್ತೆಯನ್ನು ಬಳಸುವ ದ್ವಿಚಕ್ರ ವಾಹನಗಳು ಮತ್ತು ಕಾರುಗಳು ಪ್ರಯಾಣಿಸುವ ದೂರವನ್ನು ಆಧಾರಿಸಿ, ಪ್ರತಿ ಪ್ರಯಾಣಕ್ಕೆ 5 ರೂಪಾಯಿಗಳಷ್ಟು ಹೆಚ್ಚುವರಿ ಶುಲ್ಕವನ್ನು ವಾಹನ ಸವಾರರು ಪಾವತಿ ಮಾಡಬೇಕಾಗುತ್ತದೆ. ಇನ್ನು ಬಸ್‌ಗಳ ಟೋಲ್ ದರವು 10 ರಿಂದ 25 ರೂಪಾಯಿಗಳವರೆಗೆ ಹೆಚ್ಚಳವಾಗಿದೆ.

  • ಹೂಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆಗೆ ಹೋಗುವ ವಾಹನಗಳಿಗೆ ಕಾರು 65 ರೂ. ಬಸ್ 195 ರೂ, ಟ್ರಕ್ 128 ರೂ ದ್ವಿಚಕ್ರ ವಾಹನಗಳಿಗೆ 30 ರೂ ಶುಲ್ಕಗಳು ಇವೆ.

  • ಕನಕಪುರ ರಸ್ತೆಯಿಂದ ಕ್ಲೋವರ್‌ಲೀಫ್ ಜಂಕ್ಷನ್‌ಗೆ ಕಾರು 35 ರೂ, ಬಸ್ 95 ರೂ. ಟ್ರಕ್ 60 ರೂ. ದ್ವಿಚಕ್ರ ವಾಹನಗಳಿಗೆ 10 ರೂ ಶುಲ್ಕಗಳು ಇವೆ.

  • ಬನ್ನೇರುಘಟ್ಟ ರಸ್ತೆಯಿಂದ ಕನಕಪುರ ರಸ್ತೆಗೆ ಕಾರು 48 ರೂ. ಬಸ್ 155 ರೂ, ಟ್ರಕ್ 98 ರೂ ದ್ವಿಚಕ್ರ ವಾಹನಗಳಿಗೆ 98 ರೂ ಶುಲ್ಕಗಳು ಇವೆಯ

  • ಕ್ಲೋವರ್‌ಲೀಫ್ ಜಂಕ್ಷನ್‌ನಿಂದ ಮೈಸೂರು ಕಡಗೆ ಸಂಚಾರ ಮಾಡುವ ವಾಹನಗಳಿಗೆ ಕಾರು 33 ರೂ. ಬಸ್ 85 ರೂ, ಟ್ರಕ್ 50 ರೂ ದ್ವಿಚಕ್ರ ವಾಹನಗಳಿಗೆ 10 ರೂ ಶುಲ್ಕಗಳು ಇವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT