ಬೆಂಗಳೂರು: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ ಉದ್ಯೋಗ ಕಡಿತದ ವಿರುದ್ಧ ಐಟಿ-ಯೂನಿಯನ್, ನಾಸೆಂಟ್ ಇನ್ಫರ್ಮೇಷನ್ ಟೆಕ್ನಾಲಜಿ ಎಂಪ್ಲಾಯೀಸ್ ಸೆನೆಟ್(NITES) ಸೋಮವಾರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆಅಧಿಕೃತವಾಗಿ ದೂರು ದಾಖಲಿಸಿದೆ.
ಭಾನುವಾರ, TCS ಆಡಳಿತ ಮಂಡಳಿಯು ಸುಮಾರು 12,000 ಖಾಯಂ ಉದ್ಯೋಗಿಗಳ ವಜಾಗೊಳಿಸುವಿಕೆಯನ್ನು ದೃಢೀಕರಿಸುವ ಆಂತರಿಕ ಇಮೇಲ್ ಉದ್ಯೋಗಿಗಳ ಆತಂಕಕ್ಕೆ ಕಾರಣವಾಗಿದೆ.
ಈ ಬೆಳವಣಿಗೆಯನ್ನು ತಕ್ಷಣ ಗಮನದಲ್ಲಿಟ್ಟುಕೊಂಡು TCSಗೆ ವಿವರಣೆ ಕೋರಿ ನೋಟಿಸ್ ನೀಡಬೇಕೆಂದು ಮತ್ತು TCS ನಿಂದ ಬಲವಂತದ ವಜಾಗೊಳಿಸುವಿಕೆ, ವಿಳಂಬಿತ ಆನ್‌ಬೋರ್ಡಿಂಗ್ ಮತ್ತು ಕಾನೂನುಬಾಹಿರ ವಜಾಗೊಳಿಸುವಿಕೆಯ ವ್ಯವಸ್ಥಿತ ಮಾದರಿಯ ಬಗ್ಗೆ ತನಿಖೆ ನಡೆಸಬೇಕೆಂದು NITES ಸಚಿವಾಲಯವನ್ನು ಒತ್ತಾಯಿಸಿದೆ.
"ಕೆಲಸ ಕಳೆದುಕೊಳ್ಳುತ್ತಿರುವವರಲ್ಲಿ ಹೆಚ್ಚಿನವರು 10 ರಿಂದ 20 ವರ್ಷಗಳ ಕಾಲ ಕಂಪನಿಗೆ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ಮಧ್ಯಮ ಮತ್ತು ಹಿರಿಯ ಮಟ್ಟದ ವೃತ್ತಿಪರರು ಇದ್ದಾರೆ. ಭಾನುವಾರ ಸಂಜೆ ಯಾವುದೇ ಪೂರ್ವ ಸೂಚನೆ ಅಥವಾ ಯಾವುದೇ ಔಪಚಾರಿಕ ಸಂವಹನ ಪ್ರಕ್ರಿಯೆಯಿಲ್ಲದೆ ಇಮೇಲ್ ಅನ್ನು ನಿರ್ದಯವಾಗಿ ಕಳುಹಿಸಲಾಗಿದೆ. ಈ ಸಾಮೂಹಿಕ ವಜಾಗೊಳಿಸುವಿಕೆಯು ಅನೈತಿಕ ಮತ್ತು ಅಮಾನವೀಯ ಮಾತ್ರವಲ್ಲ; ಇದು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ ಎಂದು ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ.