ಗೃಹಜ್ಯೋತಿ ಯೋಜನೆ (ಸಾಂದರ್ಭಿಕ ಚಿತ್ರ) 
ರಾಜ್ಯ

ಬೇಸಿಗೆ ಎಫೆಕ್ಟ್: ವಿದ್ಯುತ್ ಬಳಕೆ ಗಣನೀಯ ಏರಿಕೆ; Gruha Jyothi ಪಟ್ಟಿ ಪರಿಷ್ಕರಣೆ ಸಾಧ್ಯತೆ! ಫಲಾನುಭವಿಗಳ ಸಂಖ್ಯೆ ಕಟ್?

ಕರ್ನಾಟಕ ರಾಜ್ಯ ಇಂಧನ ಇಲಾಖೆ ಅಧಿಕಾರಿಗಳು ಗ್ರಾಹಕರ ವಿದ್ಯುತ್ ಬಳಕೆ ಮಾದರಿ ಮತ್ತು ಗ್ರಾಹಕರ ವಿದ್ಯುತ್ ಬಳಕೆಯ ಮಾದರಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಬೆಂಗಳೂರು: ಬೇಸಿಗೆ ಆರಂಭವಾಗುತ್ತಿದ್ದಂತೆಯೇ ರಾಜ್ಯದಲ್ಲಿ ವಿದ್ಯುತ್ ಬಳಕೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಪರಿಣಾಮ ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಪರಿಗಣಿಸುತ್ತಿರುವ ಇಂಧನ ಇಲಾಖೆ ಅಧಿಕಾರಿಗಳು ಉಚಿತ ವಿದ್ಯುತ್ ನೀಡುವ ರಾಜ್ಯ ಸರ್ಕಾರದ ಗೃಹಜ್ಯೋತಿ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಹೌದು.. ಕರ್ನಾಟಕ ರಾಜ್ಯ ಇಂಧನ ಇಲಾಖೆ ಅಧಿಕಾರಿಗಳು ಗ್ರಾಹಕರ ವಿದ್ಯುತ್ ಬಳಕೆ ಮಾದರಿ ಮತ್ತು ಗ್ರಾಹಕರ ವಿದ್ಯುತ್ ಬಳಕೆಯ ಮಾದರಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇದು ಗೃಹ ಜ್ಯೋತಿ ಯೋಜನೆಯನ್ನು ಪಡೆಯುತ್ತಿರುವ ಗ್ರಾಹಕರ ಪಟ್ಟಿಯಲ್ಲಿ ಪರಿಷ್ಕರಣೆಗೆ ಕಾರಣವಾಗಬಹುದು.

ರಾಜ್ಯ ಸರ್ಕಾರದ ಯೋಜನೆಯ ಪ್ರಕಾರ, ಗ್ರಾಹಕರು ಸರಾಸರಿ ಬಳಕೆಯಲ್ಲಿ ಶೇಕಡಾ 10 ರಷ್ಟು ವ್ಯತ್ಯಾಸದೊಂದಿಗೆ 200 ಯೂನಿಟ್ ಉಚಿತ ವಿದ್ಯುತ್ ಪಡೆಯಲು ಅರ್ಹರಾಗಿರುತ್ತಾರೆ. ಆದರೆ ಹಾಲಿ ಬೇಸಿಗೆಯಲ್ಲಿ ಹೆಚ್ಚುತ್ತಿರುವ ತಾಪಮಾನದೊಂದಿಗೆ, ವಿದ್ಯುತ್ ಬಳಕೆ ಪ್ರಮಾಣದಲ್ಲೂ ಹೆಚ್ಚಳವಾಗಿದ್ದು, ಇದು ಗೃಹಜ್ಯೋತಿ ಬಳಕೆದಾರರ ಪಟ್ಟಿ ಪರಿಷ್ಕರಣೆಗೆ ಒತ್ತಾಯಿಸಿದೆ ಎನ್ನಲಾಗಿದೆ.

ಈ ಬಗ್ಗೆ ಮಾತನಾಡಿರುವ ಅಧಿಕಾರಿಯೊಬ್ಬರು, “ವಿದ್ಯುತ್ ಬೇಡಿಕೆ ಮತ್ತು ಬಳಕೆಯಲ್ಲಿ ಏರಿಕೆ ಕಂಡುಬಂದಿದೆ. ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ ಬರುವ ಗ್ರಾಹಕರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಮಾರ್ಚ್ 2024 ರಿಂದ ಮಾರ್ಚ್ 2025 ರವರೆಗೆ ಕಡಿಮೆಯಾದ ಗ್ರಾಹಕರ ಸಂಖ್ಯೆಯನ್ನು ಸಹ ನಾವು ನಿರ್ಣಯಿಸುತ್ತಿದ್ದೇವೆ. ಇದು ಬಳಕೆಯ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ ಮತ್ತು ಭವಿಷ್ಯದಲ್ಲಿ ಯೋಜನೆಯನ್ನು ಹೇಗೆ ನಿರ್ವಹಿಸಬೇಕು ಎಂದು ನಿರ್ಧರಿಸಲು ನೆರವಾಗುತ್ತದೆ ಎಂದು ಹೇಳಿದರು.

ಇತ್ತೀಚಿನ ರಾಜ್ಯ ಬಜೆಟ್‌ನಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಜ್ಯೋತಿ ಅಡಿಯಲ್ಲಿ ನೋಂದಾಯಿಸಲಾದ ಒಟ್ಟು ಗ್ರಾಹಕರ ಸಂಖ್ಯೆ 1.62 ಕೋಟಿ ಮತ್ತು ಕಳೆದ ಹಣಕಾಸು ವರ್ಷದಲ್ಲಿ ಇದು 9,657 ಕೋಟಿ ರೂ.ಗಳಿಗೆ ಹೋಲಿಸಿದರೆ ಈ ಹಣಕಾಸು ವರ್ಷದಲ್ಲಿ 10,100 ಕೋಟಿ ರೂ.ಗಳನ್ನು ಇಂಧನ ಸರಬರಾಜು ನಿಗಮ ಲಿಮಿಟೆಡ್ (ಎಸ್ಕಾಮ್‌ಗಳು) ಗೆ ಈ ಯೋಜನೆಗಾಗಿ ಒದಗಿಸಲಾಗುವುದು ಎಂದು ಹೇಳಿದ್ದರು.

ಇಂಧನ ಇಲಾಖೆಯ ಅಂಕಿಅಂಶಗಳ ಪ್ರಕಾರ, ಜನವರಿ 2025 ರವರೆಗೆ, ಯೋಜನೆಯಡಿಯಲ್ಲಿ ನೋಂದಾಯಿಸಲಾದ ಗ್ರಾಹಕರ ಸಂಖ್ಯೆ 1,72,79,199 ಮತ್ತು ಫಲಾನುಭವಿಗಳ ಸಂಖ್ಯೆ 1,63,20,725. ಆದಾಗ್ಯೂ, ಡಿಸೆಂಬರ್ 2024 ರಲ್ಲಿ, ನೋಂದಾಯಿತ ಗ್ರಾಹಕರ ಸಂಖ್ಯೆ 1,72,31,251 ಮತ್ತು ಫಲಾನುಭವಿಗಳು 1,63,05,498.

ಡಿಸೆಂಬರ್ 2024 ಕ್ಕೆ ಸರ್ಕಾರ ಬಿಡುಗಡೆ ಮಾಡಿದ ಸಬ್ಸಿಡಿ 779.032 ಕೋಟಿ ರೂ. ಮತ್ತು ಜನವರಿ 2025 ರಲ್ಲಿ ಇದು 785.54 ಕೋಟಿ ರೂ ಗಳಾಗಿತ್ತು. ಡಿಸೆಂಬರ್ 2024 ರವರೆಗೆ ಯೋಜನೆಯಿಂದ ಸಂಪರ್ಕ ಕಡಿತಗೊಂಡ ಒಟ್ಟು ಗ್ರಾಹಕರ ಸಂಖ್ಯೆ 2,19,886 ಆಗಿದ್ದರೆ, ಮಾರ್ಚ್ 17, 2025 ರವರೆಗೆ ಸಂಪರ್ಕ ಕಡಿತಗೊಂಡ ಒಟ್ಟು ಗ್ರಾಹಕರ ಸಂಖ್ಯೆ 2,28,111 ಆಗಿದೆ ಎಂದು ಮಾಹಿತಿ ನೀಡಿದೆ.

ಗೃಹ ಜ್ಯೋತಿ ಯೋಜನೆಗೆ ಅರ್ಹರಾಗಿರುವ ಒಟ್ಟು ಗ್ರಾಹಕರ ಸಂಖ್ಯೆ 1,95,35,846 ಎಂದು ಅಧಿಕಾರಿ ವಿವರಿಸಿದ್ದು, ಅವರು LT-1 ಮತ್ತು LT-2 ಗ್ರಾಹಕರಾಗಿದ್ದಾರೆ. ಯೋಜನೆಯನ್ನು ಪಡೆಯುತ್ತಿರುವ ಜನರ ಸಂಖ್ಯೆ ಬದಲಾಗುತ್ತಿದೆ. ಗ್ರಾಹಕರಲ್ಲಿನ ಇಳಿಕೆಯ ಲೆಕ್ಕಾಚಾರವು ಸಂಪರ್ಕ ಕಡಿತಗೊಂಡ ನಂತರ ಉಳಿದಿರುವ ಒಟ್ಟು ಗ್ರಾಹಕರನ್ನು ಆಧರಿಸಿದೆ.

ಅಲ್ಲದೆ, ಫೆಬ್ರವರಿಯಿಂದ ಬೇಸಿಗೆಯ ತಾಪಮಾನವು ಹೆಚ್ಚಾಗಲು ಪ್ರಾರಂಭವಾಗುವುದರಿಂದ, ನಿಜವಾದ ಸ್ಥಿತಿಯನ್ನು ತಿಳಿಯಲು ನಾವು ಫೆಬ್ರವರಿ ಮತ್ತು ಮಾರ್ಚ್ 2024 ಮತ್ತು ಫೆಬ್ರವರಿ ಮತ್ತು ಮಾರ್ಚ್ 2025 ರಲ್ಲಿ ಯೋಜನೆಯನ್ನು ಪಡೆಯುವ ಗ್ರಾಹಕರ ಸಂಖ್ಯೆಯನ್ನು ಲೆಕ್ಕ ಹಾಕುತ್ತಿದ್ದೇವೆ ಎಂದು ಮತ್ತೋರ್ವ ಅಧಿಕಾರಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ ಮೀಸಲಾತಿ ಮುಂದುವರೆಯಲಿ: IAS ಅಧಿಕಾರಿ ವಿವಾದಾತ್ಮಕ ಹೇಳಿಕೆ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

SCROLL FOR NEXT