ಸಾಂದರ್ಭಿಕ ಚಿತ್ರ 
ರಾಜ್ಯ

ಕನಕಪುರ: ಮಗುವಿಗೆ ಚಾಕುವಿನಿಂದ ಬರೆ, ಡೈಪರ್ ಗೆ ಖಾರದಪುಡಿ ಹಾಕಿ ಅಂಗನವಾಡಿ ಸಹಾಯಕಿ ಕ್ರೌರ್ಯ

ಅಂಗನವಾಡಿ ಮುಗಿದ ಮೇಲೆ ಮಗನನ್ನು ಕರೆ ತರಲು ದೀಕ್ಷಿತ್ ತಾಯಿ ಚೈತ್ರಬಾಯಿ ಅಂಗನವಾಡಿ ಬಳಿ ಹೋದಾಗ ಮಗು ಅಳುತ್ತಿರುವುದನ್ನು ಗಮನಿಸಿ ವಿಚಾರಿಸಿದಾಗ, ಕೈ ಮೇಲೆ ಬರೆ ಹಾಕಿರುವುದು ಹಾಗೂ ಡೈಪರ್‌ಗೆ ಖಾರದಪುಡಿ ತುಂಬಿರುವುದು ಕಂಡು ಬಂದಿದೆ.

ಕನಕಪುರ: ಎರಡೂವರೆ ವರ್ಷದ ಮಗುವಿಗೆ ಅಂಗನವಾಡಿ ಸಹಾಯಕಿ ಒಬ್ಬರು ಚಾಕುವಿನಿಂದ ಬರೆ ಹಾಕಿ ಡೈಪರ್ ಗೆ ಖಾರದಪುಡಿ ಹಾಕಿ ಕ್ರೌರ್ಯ ಮೆರೆದಿರುವ ಆರೋಪ ಕೇಳಿಬಂದಿದೆ.

ನಗರದ ಮಹಾರಾಜರಕಟ್ಟೆಯ ಅಂಗನವಾಡಿ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಜ್ಯೋತಿ ಮತ್ತು ರಮೇಶ್ ನಾಯ್ಕ್ ಅವರ ಮಗ ದೀಕ್ಷಿತ್ (2.5) ಸಂತ್ರಸ್ತ ಬಾಲಕ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೀಕ್ಷಿತ್ ಎಂಬ ಮಗುವಿನ ಮೇಲೆ ಅಮಾನವೀಯತೆಯಿಂದ ಕೈ ಮೇಲೆ ಕಾದ ಚಾಕುವಿನಿಂದ ಬರೆ ಹಾಕಿದ್ದಲ್ಲದೆ ಡೈಪರ್ ಗೆ ಖಾರದಪುಡಿ ಹಾಕಿದ್ದಾಳೆ.

ಮಂಗಳವಾರ ಅಂಗನವಾಡಿ ಮುಗಿದ ಮೇಲೆ ಮಗನನ್ನು ಕರೆ ತರಲು ದೀಕ್ಷಿತ್ ತಾಯಿ ಚೈತ್ರಬಾಯಿ ಅಂಗನವಾಡಿ ಬಳಿ ಹೋದಾಗ ಮಗು ಅಳುತ್ತಿರುವುದನ್ನು ಗಮನಿಸಿ ವಿಚಾರಿಸಿದಾಗ, ಕೈ ಮೇಲೆ ಬರೆ ಹಾಕಿರುವುದು ಹಾಗೂ ಡೈಪರ್‌ಗೆ ಖಾರದಪುಡಿ ತುಂಬಿರುವುದು ಕಂಡು ಬಂದಿದೆ ಎಂದು ದೂರಲಾಗಿದೆ.

ಕೃತ್ಯ ಎಸಗಿದ ಅಂಗನವಾಡಿ ಸಹಾಯಕಿ ಮೇಲೆ ಶಿಸ್ತು ಕ್ರಮಕೈಗೊಳ್ಳುವಂತೆ ಮೇಲಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ಸಿಡಿಪಿಒ ವಿ.ನಾರಾಯಣ್‌ ತಿಳಿಸಿದ್ದಾರೆ. ಯಾವ ಕಾರಣಕ್ಕೆ ಈ ರೀತಿ ಮಾಡಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಚಂದ್ರಮ್ಮ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಮ್ಮ ಮನೆಯಲ್ಲಿನ ಒತ್ತಡದಿಂದ ಮಗುವಿಗೆ ಈ ರೀತಿ ಮಾಡಿದ್ದಾರೆ ಎಂದು ಪೋಷಕರು ದೂರಿದ್ದಾರೆ. ಅಂಗನವಾಡಿ ಸಹಾಯಕಿಯ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು: ಗಾಜಿಯಾಬಾದ್‌ನ ಹರೀಶ್ ರಾಣಾ ದಯಾಮರಣಕ್ಕೆ ಅನುಮತಿ! ಏನಿದು ಪ್ರಕರಣ?

ದೇಶಾದ್ಯಂತ 'ಗ್ಯಾಸ್ ಟ್ರಬಲ್': ಪ್ರಮುಖ ನಗರಗಳಲ್ಲಿ LPG ಕೊರತೆಯ ಭೀತಿ; ಸಮಸ್ಯೆ ಬಗೆಹರಿಸಲು ಅಗತ್ಯ ಸರಕುಗಳ ಕಾಯ್ದೆ ಬಳಸಿದ ಕೇಂದ್ರ!

ರಿಲಯನ್ಸ್ ಇಂಡಸ್ಟ್ರೀಸ್ ಜೊತೆ ಅಮೆರಿಕದ ತೈಲ ಶುದ್ಧೀಕರಣ ಘಟಕ ಒಪ್ಪಂದ: Donald Trump ಘೋಷಣೆ

KPCC ಅಧ್ಯಕ್ಷರಾಗಿ ಆರು ವರ್ಷ: ಡಿ ಕೆ ಶಿವಕುಮಾರ್ ಔತಣಕೂಟ ಆಯೋಜನೆ; ಸಿಎಂ ಸೇರಿ ಸಚಿವರು, ಶಾಸಕರು ಭಾಗಿ, ನಾಯಕತ್ವ ಬದಲಾವಣೆ ಚರ್ಚೆ ಮತ್ತೆ ತೀವ್ರ

'ನಮ್ಮ ಮಕ್ಕಳಿಗೆ ವಿಷ ನೀಡುತ್ತಿದ್ದೀರಿ': ಬಣ್ಣ ಕಳೆದುಕೊಂಡ ನೀರಿನ ಬಾಟಲಿ ಪ್ರದರ್ಶಿಸಿದ ಜೆಡಿಎಸ್ ಶಾಸಕ; ರಣಾಂಗಣವಾದ ಸದನ!

SCROLL FOR NEXT