ಹೈಕೋರ್ಟ್ 
ರಾಜ್ಯ

ಮೈಸೂರಿನಲ್ಲಿ ಉಳಿಯಲು ದೀರ್ಘಾವಧಿ ವೀಸಾ ನೀಡಿ: ಹೈಕೋರ್ಟ್‌ಗೆ 3 ಪಾಕಿಸ್ತಾನಿ ಅಪ್ರಾಪ್ತರ ಮನವಿ

ತಮ್ಮ ವೀಸಾವನ್ನು ವಿಸ್ತರಿಸಿ ಅಥವಾ ದೀರ್ಘಾವಧಿಯ ವೀಸಾ ನೀಡಲು ಮೈಸೂರು ನಗರದ ಪೊಲೀಸ್ ಆಯುಕ್ತರು ಮತ್ತು ವಿದೇಶಿಯರ ನೋಂದಣಿ ಅಧಿಕಾರಿಗೆ ನಿರ್ದೇಶಿಸುವಂತೆ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ.

ಬೆಂಗಳೂರು: ಭಾರತೀಯ ತಾಯಿ ಮತ್ತು ಪಾಕಿಸ್ತಾನಿ ತಂದೆಗೆ ಜನಿಸಿದ ಮೂವರು ಅಪ್ರಾಪ್ತ ಪಾಕಿಸ್ತಾನಿ ಪ್ರಜೆಗಳು ತಮ್ಮ ತಾಯಿಯ ಮೂಲಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ತಮ್ಮ ವೀಸಾವನ್ನು ವಿಸ್ತರಿಸಿ ಅಥವಾ ದೀರ್ಘಾವಧಿಯ ವೀಸಾ ನೀಡಲು ಮೈಸೂರು ನಗರದ ಪೊಲೀಸ್ ಆಯುಕ್ತರು ಮತ್ತು ವಿದೇಶಿಯರ ನೋಂದಣಿ ಅಧಿಕಾರಿಗೆ ನಿರ್ದೇಶಿಸುವಂತೆ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ.

ಮೈಸೂರಿನ 8 ವರ್ಷದ ಬೀಬಿ ಯಾಮಿನಾ, 4 ವರ್ಷದ ಮುಹಮ್ಮದ್ ಮುದಾಸೀರ್ ಮತ್ತು 3 ವರ್ಷದ ಮುಹಮ್ಮದ್ ಯೂಸುಫ್ ಅವರ ಪರವಾಗಿ ಅವರ ತಾಯಿ ರಾಮ್ಷಾ ಜಹಾನ್ ಹಾಜರಿದ್ದರು. ಜಹಾನ್ ಅವರ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರ ರಜಾ ಪೀಠವು ಕೇಂದ್ರ ಗೃಹ ಸಚಿವಾಲಯ, ಕರ್ನಾಟಕ ಸರ್ಕಾರ ಮತ್ತು ಮೈಸೂರು ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ ಮುಂದಿನ ವಿಚಾರಣೆಯನ್ನು ಮೇ 8 ಕ್ಕೆ ಮುಂದೂಡಿತು.

ಅರ್ಜಿದಾರರು ಜನವರಿ 4, 2025 ರಂದು ವೀಸಾದಲ್ಲಿ ತಮ್ಮ ತಾಯಿಯೊಂದಿಗೆ ಭಾರತಕ್ಕೆ ಬಂದಿದ್ದಾರೆ. ಅವರ ವೀಸಾ ಜೂನ್ 18, 2025 ರಂದು ಮುಕ್ತಾಯಗೊಳ್ಳಲಿದೆ. ತಮ್ಮ ತಾಯಿಯ ಸಂಬಂಧಿಯ ಮದುವೆಯಲ್ಲಿ ಭಾಗವಹಿಸುವ ಸಲುವಾಗಿ ಭಾರತಕ್ಕೆ ಆಗಮಿಸಿದ್ದರು.

ಆದಾಗ್ಯೂ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತ ಸರ್ಕಾರವು ಎಲ್ಲಾ ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾದ ವೀಸಾವನ್ನು ರದ್ದುಗೊಳಿಸಿ, ಏಪ್ರಿಲ್ 30 ರಂದು ಅಥವಾ ಅದಕ್ಕೂ ಮೊದಲು ತಮ್ಮ ದೇಶಕ್ಕೆ ಮರಳಲು ಆದೇಶಿಸಿತು. ಅದರಂತೆ, ಅವರು ಏಪ್ರಿಲ್ 28 ರಂದು ಅಟ್ಟಾರಿ ಗಡಿಗೆ ಹೋದರು ಆದರೆ ಅವರ ತಂದೆ ಅವರನ್ನು ಸ್ವೀಕರಿಸಲು ಬರಲಿಲ್ಲ, ಮತ್ತು ಪಾಕಿಸ್ತಾನವು ತನ್ನ ಸ್ವಂತ ನಾಗರಿಕರಿಗೆ ತನ್ನ ಗಡಿಗಳನ್ನು ಮುಚ್ಚಿದ್ದರಿಂದ, ವಲಸೆ ಅಧಿಕಾರಿಗಳು ಅವರನ್ನು ಮೈಸೂರಿಗೆ ವಾಪಸ್ ಕಳುಹಿಸಿದರು.

ಅವರ ತಂದೆ ಸರ್ಕಾರಿ ಉದ್ಯೋಗಿಯಾಗಿರುವುದರಿಂದ ಅವರನ್ನು ನೋಡಿಕೊಳ್ಳಲು ಪಾಕಿಸ್ತಾನದಲ್ಲಿ ಯಾರೂ ಇಲ್ಲ. ತಾಯಿ ಭಾರತೀಯ ಪ್ರಜೆಯಾಗಿರುವುದರಿಂದ ಮತ್ತು ಕೇಂದ್ರವು ಹೊರಡಿಸಿದ ಆದೇಶವು ಪಾಕಿಸ್ತಾನಿ ಪ್ರಜೆಗಳಿಗೆ ಮಾತ್ರ ಅನ್ವಯಿಸುವುದರಿಂದ, ಅರ್ಜಿದಾರರು ತಮ್ಮದಲ್ಲದ ತಪ್ಪಿನಿಂದ ಸಮಸ್ಯೆಗೆ ಸಿಲುಕಿದ್ದಾರೆ.

ಮಾನವೀಯ ಮತ್ತು ಕರುಣಾಜನಕ ಆಧಾರದ ಮೇಲೆ ದೀರ್ಘಾವಧಿಯ ವೀಸಾ ಅಥವಾ ವೀಸಾ ವಿಸ್ತರಣೆಯನ್ನು ಕೋರಿ ಅವರು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು, ಆದರೆ ಇಂದಿಗೂ, ಆಯುಕ್ತರು ಮನವಿಯ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ.

ಆಯುಕ್ತರು ಅವರನ್ನು ತಕ್ಷಣ ಭಾರತವನ್ನು ತೊರೆಯುವಂತೆ ಒತ್ತಾಯಿಸುತ್ತಿದ್ದಾರೆ ಮತ್ತು ಇಲ್ಲದಿದ್ದರೆ, ಅವರ ವಿರುದ್ಧ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ, ಅರ್ಜಿದಾರರು ಆತಂಕಗೊಂಡಿದ್ದಾರೆ.

ಹೀಗಾಗಿ ಬೇರೆ ಯಾವುದೇ ದಾರಿಯಿಲ್ಲದೇ ಹೈಕೋರ್ಟ್‌ನ ಬಾಗಿಲು ತಟ್ಟುತ್ತಿದ್ದಾರೆ, ಏಪ್ರಿಲ್ 29 ರಂದು ತಮ್ಮ ಮನವಿಯನ್ನು ಪರಿಗಣಿಸಲು ಕೇಂದ್ರ ಮತ್ತು ಮೈಸೂರು ಪೊಲೀಸ್ ಆಯುಕ್ತರಿಗೆ ಆದೇಶ ನೀಡಬೇಕು, ಮೇ 15, 2025 ಕ್ಕೂ ಮೊದಲು ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು. ಮೇ 12 ರಂದು ನಿಗದಿಯಾಗಿರುವ ಮದುವೆಯಲ್ಲಿ ಭಾಗವಹಿಸಿದ ನಂತರ ಪಾಕಿಸ್ತಾನಕ್ಕೆ ತೆರಳುತ್ತೇವೆ, ಹೀಗಾಗಿ 15 ದಿನಗಳವರೆಗೆ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಾರ್ಥಿಸಿದ್ದಾರೆ

ಅರ್ಜಿಯ ಪ್ರಕಾರ, ಜಹಾನ್ ಅವರ ವಿವಾಹವು 2015 ರಲ್ಲಿ ಪಾಕಿಸ್ತಾನದಲ್ಲಿ ನಡೆಯಿತು. ಪಾಕಿಸ್ತಾನಿ ಪ್ರಜೆಯನ್ನು ಮದುವೆಯಾಗಿದ್ದರೂ, ಅವರು ಇನ್ನೂ ಪಾಕಿಸ್ತಾನಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿಲ್ಲ, ಆದರೆ ಇನ್ನೂ ಭಾರತೀಯ ಪೌರತ್ವವನ್ನು ಹೊಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT