ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು: ದೇವನಹಳ್ಳಿಯಲ್ಲಿ ಹೊಸ ಮೆಗಾ ಟರ್ಮಿನಲ್‌ಗಾಗಿ ಸ್ಥಳ ಸಮೀಕ್ಷೆಗೆ ರೈಲ್ವೆ ಸಚಿವಾಲಯ ಹಸಿರು ನಿಶಾನೆ!

ಪ್ರಸ್ತುತ, ಐದನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮೆಟ್ರೋ ನಗರವಾದ ಬೆಂಗಳೂರು, ಕೇವಲ ಮೂರು ಟರ್ಮಿನಲ್‌ಗಳು ಮತ್ತು 12 ಪಿಟ್ ಲೈನ್‌ಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತದೆ.

ಬೆಂಗಳೂರು: ಬೆಂಗಳೂರಿನ ಜನದಟ್ಟಣೆಯಿಂದ ಕೂಡಿರುವ ರೈಲ್ವೆ ಜಾಲವನ್ನು ಕಡಿಮೆ ಮಾಡಲು, ದೇವನಹಳ್ಳಿ ಬಳಿಯ ಪ್ರಸ್ತಾವಿತ ಮೆಗಾ ಕೋಚಿಂಗ್ ಟರ್ಮಿನಲ್‌ಗಾಗಿ ಅಂತಿಮ ಸ್ಥಳ ಸಮೀಕ್ಷೆ (FLS)ಗೆ ರೈಲ್ವೆ ಸಚಿವಾಲಯ ಹಸಿರು ನಿಶಾನೆ ತೋರಿಸಿದೆ. ನಗರದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಗಳನ್ನು ಪೂರೈಸುವ ವಿಶಾಲ ಉಪಕ್ರಮದ ಭಾಗವಾಗಿ ಈ ಅನುಮೋದನೆ ನೀಡಲಾಗಿದೆ. ಯಲಹಂಕ-ದೇವನಹಳ್ಳಿ-ಚಿಕ್ಕಬಳ್ಳಾಪುರ ಕಾರಿಡಾರ್‌ನಲ್ಲಿ ನಡೆಸಲು ಉದ್ದೇಶಿಸಿರುವ ಈ ಸಮೀಕ್ಷೆಗೆ 1.35 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಪ್ರಸ್ತುತ, ಐದನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮೆಟ್ರೋ ನಗರವಾದ ಬೆಂಗಳೂರು, ಕೇವಲ ಮೂರು ಟರ್ಮಿನಲ್‌ಗಳು ಮತ್ತು 12 ಪಿಟ್ ಲೈನ್‌ಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತದೆ. ಪ್ರತಿದಿನ 140 ಸ್ಟಾಟಿಂಗ್ ಪಾಯಿಂಟ್, 139 ಎಂಡಿಂಗ್ ಪಾಯಿಂಟ್ ಜೊತೆಗೆ 142 ಪಾಸ್-ಥ್ರೂ ರೈಲುಗಳನ್ನು ನಿರ್ವಹಿಸುತ್ತದೆ. ಇವತ್ತಿನ ಸ್ಥಿತಿಯಲ್ಲಿ 110 ಪ್ರಾಥಮಿಕ ನಿರ್ವಹಣಾ ರೈಲುಗಳು ಈ ಮೂಲಸೌಕರ್ಯವನ್ನು ಬಳಸುತ್ತಿದ್ದು, 2024–25ರ ವೇಳೆ 103.72 ಮಿಲಿಯನ್ ಪ್ರಯಾಣಿಕರ ಉಗಮದೊಂದಿಗೆ ಒಟ್ಟು 212.06 ಮಿಲಿಯನ್ ಪ್ರಯಾಣಿಕರ ಪಾದಚಾರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆಯು ದಿನಕ್ಕೆ 210 ರೈಲುಗಳವರೆಗೆ ಏರುವ ಸಾಧ್ಯತೆ ಇದೆ. ಇದು ಈಗಿರುವ ಟರ್ಮಿನಲ್‌ಗಳ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ಸಾಕಷ್ಟು ಸ್ಟೇಬಲಿಂಗ್ ಮಾರ್ಗಗಳು ಮತ್ತು ಮೀಸಲಾದ ಸರಕು ಕಾರಿಡಾರ್ ಇಲ್ಲದಿರುವುದು ಖಾಲಿ ರೇಕ್ ಗಳ ಅತಿಯಾದ ಚಲನವಲನವಾಗುತ್ತಿದೆ. ಬೆಂಗಳೂರಿನಲ್ಲಿ ಜನದಟ್ಟಣೆ ಬೆಳೆಯುತ್ತಿರುವುದರಿಂದ ಅಸ್ತಿತ್ವದಲ್ಲಿರುವ ಟರ್ಮಿನಲ್‌ಗಳನ್ನು ವಿಸ್ತರಿಸುವುದು ಹೆಚ್ಚು ಕಷ್ಟಕರವಾಗಿದೆ. ಹೀಗಾಗಿ ದೇವನಹಳ್ಳಿಯಲ್ಲಿ ಅಥವಾ ಯಲಹಂಕ - ದೇವನಹಳ್ಳಿ - ಚಿಕ್ಕಬಳ್ಳಾಪುರ ಕಾರಿಡಾರ್‌ನ ಉದ್ದಕ್ಕೂ ಯಾವುದೇ ಸೂಕ್ತ ಸ್ಥಳದಲ್ಲಿ ಪ್ರಸ್ತಾವಿತ ಟರ್ಮಿನಲ್ ನಾಲ್ಕನೇ ಪ್ರಮುಖ ಟರ್ಮಿನಲ್ ಆಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಇದು 12 ಪಿಟ್ ಲೈನ್‌ಗಳು, ಐದು ವಾಷಿಂಗ್ ಲೈನ್‌ಗಳು, 24 ಸ್ಟೇಬಲಿಂಗ್ ಲೈನ್ ಗಳು, ಆವರಣದೊಳಗಿನ ಆರು ದುರಸ್ತಿ ಲೈನ್‌ಗಳು, ಎರಡು ಪಿಟ್ ವೀಲ್ ಲೇತ್‌ಗಳು ಮತ್ತು ಆರು ಸಿಕ್ ಲೈನ್‌ಗಳ ಜೊತೆಗೆ ಲೋಕೋ ಬೇ, 50 ಟನ್ ಸಾಮರ್ಥ್ಯದ ಬೂಟ್ ಲಾಂಡ್ರಿ, ಆಡಳಿತ ಭವನಗಳು ಮತ್ತು ಮಳಿಗೆಗಳಂತಹ ಪೂರಕ ಸೌಲಭ್ಯಗಳು ಒಳಗೊಂಡಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

SCROLL FOR NEXT