ಉಪ ಲೋಕಾಯಕ್ತ ಕೆ.ಎನ್ ಫಣೀಂದ್ರ 
ರಾಜ್ಯ

The New Indian Express ವರದಿ ಫಲಶೃತಿ: ಚನ್ನಪಟ್ಟಣ ರೈತರ ಜಮೀನು ಸಮಸ್ಯೆ; ಉಪ ಲೋಕಾಯುಕ್ತರಿಂದ ಸ್ವಯಂ ಪ್ರೇರಿತ ತನಿಖೆ

ಹೆಚ್ಚಿನ ಭೂಮಿಯನ್ನು 1928 ರಲ್ಲಿ ಹರಾಜಿನಲ್ಲಿ ಖರೀದಿಸಲಾಗಿತ್ತು, ಕೆಲವು ಭೂಮಿಯನ್ನು ಸರ್ಕಾರವು ದೀನದಲಿತರಿಗೆ ಅಥವಾ ಭೂಹೀನರಿಗೆ ಯೋಜನೆಗಳ ಅಡಿಯಲ್ಲಿ ನೀಡಿದೆ ಎಂದು ಹೇಳುವ ರೈತರು, ತಮ್ಮ ಹೆಸರುಗಳು ಆರ್‌ಟಿಸಿಗಳಲ್ಲಿ ಕಾಣಿಸುತ್ತದೆ.

ಬೆಂಗಳೂರು: ಅಕ್ಟೋಬರ್ 18 ರಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ‘Farmers deprived of dividing land among siblings' ಶೀರ್ಷಿಕೆಯಡಿ ವರದಿ ಪ್ರಕಟವಾದ ನಂತರ ಸ್ವಯಂಪ್ರೇರಿತವಾಗಿ ತನಿಖೆ ಆರಂಭಿಸಿರುವ ಉಪ ಲೋಕಾಯುಕ್ತ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣದ ತಹಶೀಲ್ದಾರ್ ಮತ್ತು ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಚನ್ನಪಟ್ಟಣ ತಾಲ್ಲೂಕಿನ ಮೂರು ಹಳ್ಳಿಗಳಲ್ಲಿ ಸುಮಾರು 140 ಎಕರೆ ಭೂಮಿಯನ್ನು ಸಾಗುವಳಿ ಮಾಡುತ್ತಿರುವ ಹಲವಾರು ರೈತರು ತಮ್ಮ ಪೂರ್ವಜರ ಕಾಲದಿಂದಲೂ ಆಸ್ತಿಗಳ 'ಫೋಡಿ ಮತ್ತು ದುರಸ್ಥ'ವನ್ನು ಪಡೆಯಲು ಸಾಧ್ಯವಾಗದ ಕಾರಣ, ತಮ್ಮ ಭೂಮಿಯನ್ನು ಕಾನೂನುಬದ್ಧ ಉತ್ತರಾಧಿಕಾರಿಗಳ ನಡುವೆ ವಿಭಜಿಸಲು, ಆ ಭೂಮಿಯನ್ನು ವರ್ಗಾಯಿಸಲು ಅಥವಾ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಮಾಡಲಾಗಿತ್ತು.

ಹೆಚ್ಚಿನ ಭೂಮಿಯನ್ನು 1928 ರಲ್ಲಿ ಹರಾಜಿನಲ್ಲಿ ಖರೀದಿಸಲಾಗಿತ್ತು, ಕೆಲವು ಭೂಮಿಯನ್ನು ಸರ್ಕಾರವು ದೀನದಲಿತರಿಗೆ ಅಥವಾ ಭೂಹೀನರಿಗೆ ಯೋಜನೆಗಳ ಅಡಿಯಲ್ಲಿ ನೀಡಿದೆ ಎಂದು ಹೇಳುವ ರೈತರು, ತಮ್ಮ ಹೆಸರುಗಳು ಆರ್‌ಟಿಸಿಗಳಲ್ಲಿ ಕಾಣಿಸುತ್ತದೆ. ಭೂಮಿಯ ಸಂಪೂರ್ಣ ಭಾಗವನ್ನು 'ಪೌತಿ ಖಾತಾ'ದಲ್ಲಿ ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸಲಾಗುತ್ತದೆ ಆದರೆ 'ಫೋಡಿ ಮತ್ತು ದುರಸ್ಥ' ಕೊರತೆಯಿಂದಾಗಿ ಜಮೀನನ್ನು ಕುಟುಂಬ ಸದಸ್ಯರಲ್ಲಿ ವಿಭಜಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾರೆ.

TNIE ಮತ್ತು www.kannadaprabha.com ವರದಿಯನ್ನು ಉಲ್ಲೇಖಿಸಿ ರುವ ನ್ಯಾಯಮೂರ್ತಿ ಫಣೀಂದ್ರ, ಸಂವಿಧಾನದ 300A ವಿಧಿಯ ಪ್ರಕಾರ ಪ್ರತಿಯೊಬ್ಬ ನಾಗರಿಕನಿಗೆ ಆಸ್ತಿಯನ್ನು ಹೊಂದಲು, ವರ್ಗಾಯಿಸಲು ಮತ್ತು ಮಾರಾಟ ಮಾಡಲು ಹಕ್ಕಿದೆ ಎಂದು ಹೇಳಿದರು. ಇದು ಮೂಲಭೂತ ಹಕ್ಕಲ್ಲದಿದ್ದರೂ, ನಾಗರಿಕನ ಅಂತಹ ಹಕ್ಕನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಅಲ್ಲದೆ, ಅಂತಹ ಹಕ್ಕನ್ನು ಕಾನೂನುಬದ್ಧವಾಗಿ ಕಸಿದುಕೊಳ್ಳಬಹುದು, ಆದರೆ ಬಲವಂತವಾಗಿ ಅಲ್ಲ ಎಂದಿದ್ದಾರೆ.

ಚನ್ನಪಟ್ಟಣ ತಾಲ್ಲೂಕಿನ ಮತ್ತಿಕೆರೆ, ಸಂಕಲಗೆರೆ ಮತ್ತು ಬೆಳಕೆರೆಯಲ್ಲಿ ಹಲವಾರು ರೈತರು ಕಂದಾಯ ಇಲಾಖೆಯಲ್ಲಿ ಯಾವುದೇ ಮೂಲ ದಾಖಲೆಗಳು ಲಭ್ಯವಿಲ್ಲದ ಕಾರಣ, ಅವರು ಕಾನೂನುಬದ್ಧ ಮಾಲೀಕರಾಗಿದ್ದರೂ, ಸುಮಾರು 140 ಎಕರೆಗಳನ್ನು ವಿಭಜನೆ, ಮಾರಾಟ ಅಥವಾ ವರ್ಗಾಯಿಸುವ ಹಕ್ಕಿನಿಂದ ವಂಚಿತರಾಗಿದ್ದಾರೆ. ಆದ್ದರಿಂದ, ರೈತರು ಹೊಂದಿರುವ ಭೂಮಿಯನ್ನು 'ಫೋಡಿ ಮತ್ತು ದುರಸ್ಥಿ' ಮಾಡಲು ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ಕ್ರಮ ಕೈಗೊಳ್ಳುವುದು ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಸೂಚಿಸಿದ್ದಾರೆ.

ಇದಲ್ಲದೆ, ರೈತರು ಅಧಿಕಾರಿಗಳನ್ನು ಸಂಪರ್ಕಿಸಿದ್ದರೂ, ಅಧಿಕಾರಿಗಳು ತಮ್ಮ ಸಮಸ್ಯೆಗಳನ್ನು ಪರಿಹರಿಸಲು ವಿಫಲರಾಗಿದ್ದಾರೆ, ಇದು ಕರ್ತವ್ಯ ಲೋಪವನ್ನು ತೋರಿಸುತ್ತದೆ ಎಂದು ಅವರು ಹೇಳಿದರು. ಅಧಿಕಾರಿಗಳ ಕಡೆಯಿಂದ ಕರ್ತವ್ಯ ಲೋಪವಾಗಿದೆಯೇ ಎಂದು ಪರಿಶೀಲಿಸಲು ಸ್ವಯಂಪ್ರೇರಿತ ಪ್ರಕರಣ ದಾಖಲಿಸಲು ನಾನು ಆದೇಶ ಹೊರಡಿಸುತ್ತಿದ್ದೇನೆ. ಅದರಂತೆ, ಚನ್ನಪಟ್ಟಣ ತಾಲ್ಲೂಕಿನ ತಹಶೀಲ್ದಾರ್ ಗಿರೀಶ್ ಮತ್ತು ಭೂ ದಾಖಲೆಗಳ ಸಹಾಯಕ ನಿರ್ದೇಶಕ ಪ್ರಖ್ಯಾತ್‌ಕುಮಾರ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲು ನಾನು ನಿರ್ದೇಶನಗಳನ್ನು ನೀಡಿದ್ದೇನೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸ್ಫೋಟ ಸಂತ್ರಸ್ತರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ, ಸಂಜೆ 5.30ಕ್ಕೆ CCS ತುರ್ತು ಸಭೆ!

Delhi Blast: 'ಬಿಹಾರ ಚುನಾವಣೆ ಸಮಯದಲ್ಲೇ ಏಕೆ ಸ್ಫೋಟ ನಡೆಯಿತು..? ಯಾರೂ ಗೂಟ ಹೊಡೆದು ಇರಲ್ಲ': ಸಚಿವ ಜಮೀರ್ ವಿಚಿತ್ರ ಪ್ರಶ್ನೆ

Cricket: 'ಯಾರೂ ನಮ್ಮನ್ನ ಕ್ಷಮಿಸೊಲ್ಲ.. ನಾವೇನೂ ರೊಬೋಟ್ ಗಳಲ್ಲ..': ಪಾಕಿಸ್ತಾನ ವೇಗಿ ಹ್ಯಾರಿಸ್ ರೌಫ್ ಆಕ್ರೋಶ!

Delhi Blast: 'ಆರೋಪಿಗಳ ಜೊತೆ ಯಾವುದೇ ಸಂಬಂಧವಿಲ್ಲ, ರಾಸಾಯನಿಕಗಳ ಸಂಗ್ರಹಿಸಿಲ್ಲ': Al-Falah ವಿವಿ ಸ್ಪಷ್ಟನೆ

Delhi blast: ಬಂಧಿತ ವೈದ್ಯರು ಜನವರಿ ತಿಂಗಳಲ್ಲಿ ಹಲವು ಬಾರಿ ಕೆಂಪು ಕೋಟೆ ಪ್ರದೇಶಕ್ಕೆ ಭೇಟಿ ನೀಡಿದ್ದರು!

SCROLL FOR NEXT