ಸಿದ್ದರಾಮಯ್ಯ 
ರಾಜ್ಯ

ನಾನಂತೂ ಬರೋಬ್ಬರಿ 100 ವರ್ಷ ಬದುಕುತ್ತೇನೆ: ಸಿಎಂ ಸಿದ್ದರಾಮಯ್ಯ

ಗಾಂಧೀಜಿಗೆ ಒಬ್ರು ಪತ್ರ ಬರೆದು, 100 ವರ್ಷ ಬದುಕಿ ಅಂತ ಹೇಳಿದ್ದರು. ಆಗ ನಾನು 125 ವರ್ಷ ಬದುಕಬೇಕು ಅಂತಿದ್ದೇನೆ ಅಂತ ಗಾಂಧಿ ಉತ್ತರ ಕೊಟ್ಟಿದ್ದರು ಅಂತ ಸ್ಮರಿಸಿಕೊಂಡ್ರು.

ಮೈಸೂರು: ನನಗೀಗ 78 ವರ್ಷ ತುಂಬಿ, 79ನೇ ವರ್ಷ ನಡೆದಿದೆ. ನಾನಂತೂ ಕನಿಷ್ಠ ನೂರು ವರ್ಷ ಬಾಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ನನಗೆ ಈಗ 79 ವರ್ಷ 4 ತಿಂಗಳು ಆಗಿದೆ. ನಾನಂತೂ 100 ವರ್ಷ ಬದುಕುತ್ತೇನೆ. ಗಾಂಧೀಜಿಗೆ ಒಬ್ರು ಪತ್ರ ಬರೆದು, 100 ವರ್ಷ ಬದುಕಿ ಅಂತ ಹೇಳಿದ್ದರು. ಆಗ ನಾನು 125 ವರ್ಷ ಬದುಕಬೇಕು ಅಂತಿದ್ದೇನೆ ಅಂತ ಗಾಂಧಿ ಉತ್ತರ ಕೊಟ್ಟಿದ್ದರು ಅಂತ ಸ್ಮರಿಸಿಕೊಂಡ್ರು. ನಾನೂ ಕೂಡ 100 ವರ್ಷ ಬದುಕುತ್ತೇನೆ ಎಂದು ನಗುತ್ತಾ ಸಿದ್ದರಾಮಯ್ಯ ಹೇಳಿದ್ರು.

ಜನರ ಆಶೀರ್ವಾದ ಇದ್ದಾಗಲಷ್ಟೇ ನಾವು ಅಧಿಕಾರದಲ್ಲಿರಲು ಸಾಧ್ಯ. ಒಟ್ಟು 16 ಚುನಾವಣೆ ಎದುರಿಸಿದ್ದು, ನಾಲ್ಕು ಬಾರಿ ಸೋತಿದ್ದೇನೆ’ ಎಂದರು. ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಶುಕ್ರವಾರ ವಕೀಲ ರವಿವರ್ಮಕುಮಾರ್ ಅವರಿಗೆ, ‘ಡಿ.ದೇವರಾಜ ಅರಸು–ಎಲ್‌.ಜಿ. ಹಾವನೂರು’ ಪ್ರಶಸ್ತಿ ಪ್ರದಾನ ಮಾಡಿದರು.

ಹಿಂದೆ ನನ್ನ ಕಾರಿನ ಮೇಲೆ ಕಾಗೆ ಕುಳಿತಿದ್ದಕ್ಕೆ, ಕೆಲ ಜ್ಯೋತಿಷಿಗಳು ಸಿ.ಎಂ ಸ್ಥಾನವೇ ಹೋಗುತ್ತದೆ ಎಂದಿದ್ದರು. ಆಗ ಐದು ವರ್ಷ ಅಧಿಕಾರ ಪೂರೈಸಿದೆ. ಈಗ ಎರಡನೇ ಅವಧಿಯಲ್ಲಿ ಎರಡೂವರೆ ವರ್ಷ ಕಳೆದಿದೆ. ರವಿವರ್ಮಕುಮಾರ್–ಶಾರದಾ ಅಮಾವಾಸ್ಯೆ ದಿನವೇ ಮದುವೆ ಆದವರು. ನಮ್ಮಲ್ಲಿನ ಮೂಢನಂಬಿಕೆಗಳನ್ನು ಬಿಡಬೇಕು ಎಂದರು. ನೀವೇ ಐದು ವರ್ಷ ಸಿ.ಎಂ ಆಗಿರಬೇಕು ಎಂದು ಅಭಿಮಾನಿಗಳು ಕೂಗಿದರು. ಇದಕ್ಕೆ ಪ್ರತಿಕ್ರಿಯಿಸಿ, ‘ಅದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ’ ಎಂದು ಸಿದ್ದರಾಮಯ್ಯ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಂಘರ್ಷ ಅಂತ್ಯಕ್ಕೆ ಇರಾನ್ 7 ದಿನಗಳ ಯೋಜನೆ ಪ್ರಸ್ತಾಪ: ಹಾರ್ಮುಜ್ ಜಲಸಂಧಿ ಮತ್ತೆ ಮುಕ್ತ

ವಿಶ್ವಸಂಸ್ಥೆಯಲ್ಲಿ Pak ಪ್ರಧಾನಿಗೆ ಮುಖಭಂಗ: ಭಯೋತ್ಪಾದನೆ ಕುರಿತ ಪ್ರಶ್ನೆ ಎದುರಿಸಲಾಗದೆ ತಲೆತಗ್ಗಿಸಿ ನಡೆದ ಶೆಹಬಾಜ್ ಷರೀಫ್..! Video

ವಿಶ್ವಸಂಸ್ಥೆಯಲ್ಲಿ ನೆತನ್ಯಾಹುಗೆ ಬಿಗ್ ಶಾಕ್: ಭಾಷಣ ಬಹಿಷ್ಕರಿಸಿ ಹೊರನಡೆದ ಹತ್ತಾರು ದೇಶಗಳ ಪ್ರತಿನಿಧಿಗಳು,"ನೈತಿಕ ಹೇಡಿಗಳು" ಎಂದು ಕರೆದ ಇಸ್ರೇಲ್ ಪ್ರಧಾನಿ..!

ಶ್ವೇತಭವನದಲ್ಲಿ ಚೀನಾ ಅಧ್ಯಕ್ಷರಿಗೆ ಅದ್ಧೂರಿ ಸ್ವಾಗತ: ಕ್ಸಿ ಜಿನ್‌ಪಿಂಗ್‌ ಜೊತೆಗಿನ ಹಳೆಯ ನಂಟು ಸ್ಮರಿಸಿ, ‘ನಮ್ಮದು ನಿಜಕ್ಕೂ ಅದ್ಭುತ ಸ್ನೇಹ’ ಎಂದ ಟ್ರಂಪ್‌..!

'ಮೋದಿ, ಶಾ, ಜ್ಞಾನೇಶ್ ಕುಮಾರ್ ದೇಶದ್ರೋಹಿಗಳು'; ನೂರಕ್ಕೆ ನೂರರಷ್ಟು ಎಲ್ಲಾ ಚುನಾವಣೆಗಳಲ್ಲೂ ಅಕ್ರಮ; ಸಂಚುಕೋರರಿಗೆ ಶಿಕ್ಷೆಯಾಗಬೇಕು: ರಾಹುಲ್ ಗಾಂಧಿ