ನರಸಿಂಹರಾಜು  
ರಾಜ್ಯ

ಬೆಂಗಳೂರು: ವಿವಾಹಿತೆಯೊಂದಿಗೆ ಅನೈತಿಕ ಸಂಬಂಧ; ಚಕ್ಕಂದವಾಡುವಾಗಲೇ ಸಿಕ್ಕಿಬಿದ್ದ ಜೋಡಿ; ಮಹಿಳೆ ಕುಟುಂಬಸ್ಥರಿಂದ ಥಳಿಸಿ ಹತ್ಯೆ!

ನರಸಿಂಹರಾಜು (32) ಕೊಲೆಯಾದ ಯುವಕ. ಈತ ವಿವಾಹಿತ ಮಹಿಳೆಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಆ ಮಹಿಳೆಯೂ ಆಗಾಗ ಯುವಕನ ಮನೆಗೆ ಬರುತ್ತಿದ್ದಳು.

ಬೆಂಗಳೂರು: ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಯುವಕನನ್ನು ಮಹಿಳೆಯ ಕುಟುಂಬಸ್ಥರು ಹತ್ಯೆ ಮಾಡಿದ ಘಟನೆ ಯಶವಂತಪುರದ ಮುತ್ಯಾಲಮ್ಮ ನಗರದಲ್ಲಿ ನಡೆದಿದೆ.

ನರಸಿಂಹರಾಜು (32) ಕೊಲೆಯಾದ ಯುವಕ. ಈತ ವಿವಾಹಿತ ಮಹಿಳೆಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಆ ಮಹಿಳೆಯೂ ಆಗಾಗ ಯುವಕನ ಮನೆಗೆ ಬರುತ್ತಿದ್ದಳು. ಶನಿವಾರ (ನ.22) ಆ ಮಹಿಳೆ ನರಸಿಂಹರಾಜು ಮನೆಯಲ್ಲಿ ಇದ್ದರು. ಇದನ್ನು ತಿಳಿದ ಮಹಿಳೆಯ ಮನೆಯವರು ಬಂದಿದ್ದಾರೆ.

ಬಳಿಕ ಮನೆಯಲ್ಲಿದ್ದ ನರಸಿಂಹರಾಜುನನ್ನು ಮನೆಯಿಂದ ಹೊರಗಡೆ ಎಳೆದುಕೊಂಡು ಬಂದು ರಸ್ತೆಯಲ್ಲಿ ನಾಲ್ಕೈದು ಜನ ಮನಸ್ಸೋ ಇಚ್ಚೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಬಿಡಿಸಲು ಬಂದ ನರಸಿಂಹರಾಜು ತಾಯಿಯ ಮೇಲೂ ಹಲ್ಲೆ ಮಾಡಲಾಗಿದೆ.

ಹಲ್ಲೆಯಿಂದ ಅಸ್ವಸ್ಥನಾಗಿದ್ದ ನರಸಿಂಹರಾಜುನನ್ನು ಕೂಡಲೇ ಕೆ.ಸಿ ಜನರಲ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಆಸ್ಪತ್ರೆಯಲ್ಲಿ ಯುವಕ ಸಾವನ್ನಪ್ಪಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

FIFA World Cup 2026: ಉದ್ಘಾಟನಾ ಪಂದ್ಯದಲ್ಲಿ ಮೂರು ರೆಡ್ ಕಾರ್ಡ್ ಗಳು; 2-0 ಅಂತರದಿಂದ ದಕ್ಷಿಣ ಆಫ್ರಿಕಾ ಮಣಿಸಿದ ಮೆಕ್ಸಿಕೊ

ಇರಾನ್‌ ಜೊತೆ ಯುದ್ಧ ಅಂತ್ಯಗೊಂಡಿದೆ, ವಾರಾಂತ್ಯದಲ್ಲಿ ಯುರೋಪಿನಲ್ಲಿ ಶಾಂತಿ ಒಪ್ಪಂದ: ಡೊನಾಲ್ಡ್ ಟ್ರಂಪ್ ಘೋಷಣೆ

ಇಂಧನ ಸಂಗ್ರಹಣೆ-ಕಾಳಸಂತೆ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ: ಪೆಟ್ರೋಲ್ ಬಂಕ್‌ಗಳಲ್ಲಿ Bulk ಇಂಧನ ಖರೀದಿಗೆ ನಿಷೇಧ..!

US-Iran war: 'ಒಪ್ಪಂದಕ್ಕೆ ಒಪ್ಪಿಗೆ ಸಿಕ್ಕಿದೆ’ ಎಂದ ಟ್ರಂಪ್‌; ‘ಇನ್ನೂ ನಿರ್ಧಾರವೇ ಆಗಿಲ್ಲ’ ಎಂದ ಇರಾನ್‌ - ಶಾಂತಿ ಒಪ್ಪಂದದ ಸುತ್ತ ಹೆಚ್ಚಿದ ಅನಿಶ್ಚಿತತೆ..!

ಸರ್ಕಾರಿ ನೌಕರರ ಮೇಲೆ ಡಿಜಿಟಲ್ ಕಣ್ಗಾವಲು; ಜಿಯೋ-ಟ್ಯಾಗ್‌ ಹಾಜರಾತಿ ವ್ಯವಸ್ಥೆ ಜಾರಿ, ಇನ್ನು 10 ಗಂಟೆ ಬಳಿಕ ಹಾಜರಾತಿಗೆ ಅವಕಾಶವಿಲ್ಲ..!

SCROLL FOR NEXT