ಮೈಸೂರು: ಇಂದು ಬೆಳಗಿನ ಜಾವ ಟ್ರಕ್ ಮತ್ತು ಬಸ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 12 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ . ಮೈಸೂರು-ಮಡಿಕೇರಿ ರಸ್ತೆಯ ಹುಣಸೂರು ತಾಲ್ಲೂಕಿನ ಜಡಗನಕೊಪ್ಪಲು ಬಳಿ ಬೆಳಗಿನ ಜಾವ 4.30 ರ ಸುಮಾರಿಗೆ ಈ ಅಪಘಾತ ಸಂಭವಿಸಿತ್ತು. ಮೃತರನ್ನು ಬಸ್ ಚಾಲಕ ಶಂಶಾದ್ ಮತ್ತು ಕ್ಲೀನರ್ ದಿನೇಶ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಖಾಸಗಿ ಬಸ್ ಮೈಸೂರು ಕಡೆಗೆ ಹೋಗುತ್ತಿದ್ದು ಸಿಮೆಂಟ್ ಚೀಲಗಳನ್ನು ತುಂಬಿದ ಟ್ರಕ್ ಹುಣಸೂರು ಕಡೆಗೆ ಹೋಗುತ್ತಿತ್ತು. ಪೊಲೀಸರು ಪ್ರಕರಣ ದಾಖಲಿಸಲಾಗಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.