ಶವಗಳ ಹೂತಿಟ್ಟಿದ್ದ ಸ್ಥಳದಲ್ಲಿ ಎಸ್ ಐಟಿ ಉತ್ಖನದ ಚಿತ್ರ 
ರಾಜ್ಯ

Dharmasthala Case: ಸಾಕ್ಷ್ಯಾಧಾರಗಳ ಕೊರತೆ; 'ಷಡ್ಯಂತ್ರ' ಸೂತ್ರಧಾರರ ಕುರಿತು SIT ತನಿಖೆ!

ಹದಿಹರೆಯದ ಯುವತಿಯರು, ಮಹಿಳೆಯರು ಸೇರಿದಂತೆ 100 ಕ್ಕೂ ಹೆಚ್ಚು ಶವಗಳನ್ನು ನನ್ನಿಂದ ಹೂತು ಹಾಕಿಸಲಾಗಿತ್ತು ಎಂದು ಸುಳ್ಳು ಹೇಳಿಕೆ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ದೂರುದಾರ ಸಿಎನ್ ಚಿನ್ನಯ್ಯ ನ್ಯಾಯಾಲಯದ ಮುಂದೆ ಸತ್ಯ ಒಪ್ಪಿಕೊಂಡದ್ದು ಯಾಕೆ?

ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ, ಕೊಲೆ ಮತ್ತು ಸಾಮೂಹಿಕ ಹತ್ಯೆಗಳ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್ ಐಟಿಗೆ ಇದುವರೆಗೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ. ತಂಡ ಈಗ ಧರ್ಮಸ್ಥಳ ಹಾಗೂ ಅದರ ಆಡಳಿತ ಮಂಡಳಿಯನ್ನು ಗುರಿಯಾಗಿಟ್ಟುಕೊಂಡು ಸಂಚು ರೂಪಿಸಲಾಗಿದೆಯೇ ಎಂಬುದರತ್ತ ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಹದಿಹರೆಯದ ಯುವತಿಯರು, ಮಹಿಳೆಯರು ಸೇರಿದಂತೆ 100 ಕ್ಕೂ ಹೆಚ್ಚು ಶವಗಳನ್ನು ನನ್ನಿಂದ ಹೂತು ಹಾಕಿಸಲಾಗಿತ್ತು ಎಂದು ಸುಳ್ಳು ಹೇಳಿಕೆ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ದೂರುದಾರ ಸಿಎನ್ ಚಿನ್ನಯ್ಯ ನ್ಯಾಯಾಲಯದ ಮುಂದೆ ಸತ್ಯ ಒಪ್ಪಿಕೊಂಡದ್ದು ಯಾಕೆ? ಇಂತಹ ಗಂಭೀರ ಆರೋಪಗಳನ್ನು ಮಾಡಲು ಅವರನ್ನು ಪ್ರಚೋದಿಸಿದವರು ಯಾರು? ಎಂಬಿತ್ಯಾದಿ ಮಾಹಿತಿ ತಿಳಿಯಲು ಎಸ್ ಐಟಿ, ಸಾಮಾಜಿಕ ಕಾರ್ಯಕರ್ತರಾದ ಮಹೇಶ್ ಶೆಟ್ಟಿ ತಿಮರೋಡಿ, ಟಿ ಜಯಂತ್ ಮತ್ತು ಗಿರೀಶ್ ಮಟ್ಟಣ್ಣನವರ್ ಅವರಿಗೆ ಇಂದು ವಿಚಾರಣೆಗೆ ಹಾಜರಾಗಲು 41ಎ ನೋಟಿಸ್ ಜಾರಿ ಮಾಡಿದೆ.

1995 ರಿಂದ 2014 ರವರೆಗೆ ದೇವಸ್ಥಾನದಲ್ಲಿ ಮಾಜಿ ಸ್ವಚ್ಛತ ಕೆಲಸಗಾರನಾಗಿದ್ದ ಚಿನ್ನಯ್ಯ ಅವರು 2002 ಮತ್ತು 2014 ರ ನಡುವೆ ದೇವಾಲಯದ ಆವರಣದಲ್ಲಿ 200 ಕ್ಕೂ ಹೆಚ್ಚು ಅಪರಿಚಿತ ಶವಗಳನ್ನು ರಹಸ್ಯವಾಗಿ ಹೂತ್ತಿಟ್ಟಿರುವುದಾಗಿ ಆರೋಪಿಸಿ 2025 ಆಗಸ್ಟ್ ನಲ್ಲಿ ದೂರು ದಾಖಲಿಸಿದ್ದರು.

ನ್ಯಾಯಾಲಯದಲ್ಲಿ ಸ್ವಯಂ ಪ್ರೇರಿತ ಹೇಳಿಕೆ ನೀಡಿದ ಚಿನ್ನಯ್ಯ:

ಅಪಘಾತಗಳು, ಕೊಲೆ ಮತ್ತು ಅನುಮಾಸ್ಪಾದವಾಗಿ ಮೃತಪಟ್ಟವರನ್ನು ಮರಣೋತ್ತರ ಪರೀಕ್ಷೆ ಇಲ್ಲದೆ ಅಥವಾ ಪೊಲೀಸರ ವರದಿಯಿಲ್ಲದೆ ಹೂತು ಹಾಕಲಾಗಿದೆ ಎಂದು ಹೇಳಿದ್ದರು. ಬಳಿಕ ನ್ಯಾಯಾಲಯದಲ್ಲಿ ಸ್ವಯಂ ಪ್ರೇರಿತ ಹೇಳಿಕೆ ನೀಡಿದ್ದ ಚಿನ್ನಯ್ಯ, ತಾನು ಈ ಹಿಂದೆ ನೀಡಿದ್ದ ಹೇಳಿಕೆ ಹಾಗೂ ಸಾಕ್ಷ್ಯ ಸುಳ್ಳು ಆಗಿದ್ದು, ಕೆಲವರ ಆಜ್ಞೆಯಿಂದ ಆ ರೀತಿ ಮಾಡಿರುವುದಾಗಿ ಹೇಳಿದ್ದರು.

18 ಕಡೆಗಳಲ್ಲಿ ಎಸ್ ಐಟಿ ಉತ್ಖನನ: ತಾನೂ ಹೂತಿಟ್ಟಿದ್ದ ಸ್ಥಳದಿಂದ ತರಲಾದ ತಲೆಬುರಡೆ ಎಂದು ಹೇಳಿ ದಕ್ಷಿಣ ಕನ್ನಡ ಪೊಲೀಸರಿಗೆ ನೀಡಿದ್ದ ಚಿನ್ನಯ್ಯ, ತದನಂತರ ತನ್ನ ಹೇಳಿಕೆ ಹಿಂಪಡೆದಿದ್ದರು. ಅಕ್ಟೋಬರ್ 2012 ರಲ್ಲಿ ದಕ್ಷಿಣ ಕನ್ನಡದಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ಸೌಜನ್ಯ ಅವರ ಚಿಕ್ಕಪ್ಪ ವಿಠ್ಠಲ ಗೌಡ ತಲೆಬುರುಡೆಯನ್ನು ತನಗೆ ನೀಡಿದ್ದರು ಎಂದು ಹೇಳಿದ್ದರು. ಚಿನ್ನಯ್ಯ ಗುರುತಿಸಿದ ಸುಮಾರು 18 ಕಡೆಗಳಲ್ಲಿ ಎಸ್‌ಐಟಿ ಅಗೆದು ಪರಿಶೀಲಿಸಿದೆ. ಬಂಗ್ಲೆಗುಡ್ಡೆ ಸೇರಿದಂತೆ ಕೆಲವೆಡೆ ಮಾನವನ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ. ಅವುಗಳನ್ನು ಡಿಎನ್‌ಎ ವಿಶ್ಲೇಷಣೆ ಮತ್ತು ಫೋರೆನ್ಸಿಕ್ ಪರೀಕ್ಷೆಗೆ ಕಳುಹಿಸಲಾಗಿದೆ.

ಉಲ್ಟಾ ಹೊಡೆದ ಸುಜಾತ್ ಭಟ್:

ಈ ಹಿಂದೆ 2003ರಲ್ಲಿ ಧರ್ಮಸ್ಥಳಕ್ಕೆ ತೆರಳಿದ್ದ ಮಗಳು ಅನನ್ಯಾ ನಾಪತ್ತೆಯಾಗಿದ್ದಳು ಎಂದು ದೂರಿದ್ದ ಮತ್ತೋರ್ವ ದೂರುದಾರ ಮಹಿಳೆ ಸುಜಾತಾ ಭಟ್ ನಂತರ ಹೇಳಿಕೆ ಹಿಂಪಡೆದು ತನಗೆ ಹೆಣ್ಣು ಮಕ್ಕಳೇ ಇಲ್ಲ, ಮಟ್ಟಣ್ಣನವರ್, ಜಯಂತ್ ಹಾಗೂ ಇತರರ ಪ್ರಚೋದನೆಯಿಂದ ಸುಳ್ಳು ಹೇಳಿಕೆ ನೀಡಿರುವುದಾಗಿ ಹೇಳಿದ್ದಾರೆ. 2012ರ ಅಕ್ಟೋಬರ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ನಡೆದ 17 ವರ್ಷದ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಇನ್ನೂ ನ್ಯಾಯ ಸಿಕ್ಕದ ಹಿನ್ನೆಲೆಯಲ್ಲಿ ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ ಜುಲೈನಲ್ಲಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಲಂಚ ಪಡೆವಾಗ ಲೋಕಾಯುಕ್ತ ದಾಳಿ: ಇನ್ಸ್ ಪೆಕ್ಟರ್ ಹೈಡ್ರಾಮಾ, ಪೊಲೀಸರ ವಿರುದ್ಧವೇ ಕೂಗಾಡಿ ರಂಪಾಟ, Video Viral

ಮಂಗನ ಜ್ವರಕ್ಕೆ ಈ ವರ್ಷ ಮೊದಲ ಸಾವು: ಶಿವಮೊಗ್ಗದಲ್ಲಿ 29 ವರ್ಷದ ಯುವಕ ಬಲಿ, ಆರೋಗ್ಯ ಇಲಾಖೆಗೆ ಮುನ್ನೆಚ್ಚರಿಕೆ

ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ತಳ್ಳಿಹಾಕಿದ CBI; ಆದ್ರೆ ಕೃತಕ 'ತುಪ್ಪ' ಬಳಕೆ ಬಹಿರಂಗ

Big Boss Kannada 12 ಫಿನಾಲೆ ಎಪಿಸೋಡ್ ಗೆ ದಾಖಲೆ TRP, ಅಗ್ರಸ್ಥಾನಕ್ಕೆ ಕಲರ್ಸ್ ಕನ್ನಡ!

'ಮಿಯಾಸ್' ಜಗತ್ತನ್ನೇ ಆಳ್ತಾರೆ: ಅಸ್ಸಾಂ CM ಹಿಮಂತ ಬಿಸ್ವಾ ಶರ್ಮಾ ವಿರುದ್ಧ ಮುಗಿಬಿದ್ದ ಮುಸ್ಲಿಂ ನಾಯಕರು! Video

SCROLL FOR NEXT