ಕರ್ನಾಟಕ ಲೋಕಾಯುಕ್ತ 
ರಾಜ್ಯ

ಸ್ವಾತಂತ್ರ್ಯ ಹೋರಾಟಗಾರರ ಮಾಸಿಕ ಗೌರವಧನ ಪಾವತಿಸದ 29 ಸಹಾಯಕ ಆಯುಕ್ತರ ವಿರುದ್ಧ ಪ್ರಕರಣ

ಶುಕ್ರವಾರ ದಾಖಲಾದ ಸ್ವಯಂ ಪ್ರೇರಿತ ಪ್ರಕರಣದ ಆದೇಶದಲ್ಲಿ ಉಲ್ಲೇಖಿಸಲಾದ ಮಾಹಿತಿ ಪ್ರಕಾರ, ರಾಜ್ಯದಾದ್ಯಂತ 150 ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ. ಅವರಲ್ಲಿ ಮೂವರು ಮಹಿಳೆಯರು.

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಸಿಕ ಗೌರವಧನ ಮತ್ತು ಅವರ ಕುಟುಂಬ ಸದಸ್ಯರಿಗೆ ಮಾಸಿಕ ಪಿಂಚಣಿ ಪಾವತಿಸದಿರುವ ಬಗ್ಗೆ ಮಾಧ್ಯಮ ವರದಿಯನ್ನು ಗಮನದಲ್ಲಿಟ್ಟುಕೊಂಡು, ಉಪ ಲೋಕಾಯುಕ್ತವು ರಾಜ್ಯದ 16 ಜಿಲ್ಲೆಗಳ 29 ಸಹಾಯಕ ಆಯುಕ್ತರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದೆ.

ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಬಳ್ಳಾರಿ, ವಿಜಯನಗರ, ಬೀದರ್, ದಕ್ಷಿಣ ಕನ್ನಡ, ದಾವಣಗೆರೆ, ಹಾವೇರಿ, ಕಲಬುರಗಿ, ಕೋಲಾರ, ಕೊಪ್ಪಳ, ಮಂಡ್ಯ, ರಾಯಚೂರು, ತುಮಕೂರು ಮತ್ತು ಉಡುಪಿಯ ಸಹಾಯಕ ಆಯುಕ್ತರ ವಿರುದ್ಧ ಪ್ರಕರಣ ದಾಖಲಾಗಿದೆ.

ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಸಹಾಯಕ ಆಯುಕ್ತರು ನವೆಂಬರ್ 26 ರೊಳಗೆ ಈ ಪರಿಸ್ಥಿತಿಯ ಬಗ್ಗೆ ಪೂರಕ ದಾಖಲೆಗಳೊಂದಿಗೆ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಶುಕ್ರವಾರ ದಾಖಲಾದ ಸ್ವಯಂ ಪ್ರೇರಿತ ಪ್ರಕರಣದ ಆದೇಶದಲ್ಲಿ ಉಲ್ಲೇಖಿಸಲಾದ ಮಾಹಿತಿ ಪ್ರಕಾರ, ರಾಜ್ಯದಾದ್ಯಂತ 150 ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ. ಅವರಲ್ಲಿ ಮೂವರು ಮಹಿಳೆಯರು. ಸರ್ಕಾರವು ಅವರಿಗೆ ಗೌರವ ಧನವಾಗಿ ತಲಾ 10,000 ರೂ. ಮತ್ತು ಅವರ ವಿಧವೆ ಪತ್ನಿಯರಿಗೆ ಮಾಸಿಕ ಪಿಂಚಣಿಯಾಗಿ ತಲಾ 4,000 ರೂ.ಗಳನ್ನು 1980ರ ಸ್ವತಂತ್ರ ಸೈನಿಕ ಸಮ್ಮಾನ್ ಪಿಂಚಣಿ ಯೋಜನೆ ಅಡಿಯಲ್ಲಿ ಪಾವತಿಸುತ್ತಿದೆ.

ಆದಾಗ್ಯೂ, 27 ಜಿಲ್ಲೆಗಳಲ್ಲಿ ಕಳೆದ ಕೆಲವು ತಿಂಗಳುಗಳಿಂದ ಈ ಮಾಸಿಕ ಭತ್ಯೆಗಳನ್ನು ತಡೆಹಿಡಿಯಲಾಗಿದೆ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಅವರ ಗಮನಕ್ಕೆ ಬಂದಿದೆ.

ರಾಷ್ಟ್ರಕ್ಕಾಗಿ ಅವರ ತ್ಯಾಗವನ್ನು ಸ್ಮರಿಸುವಾಗ ಇದು ತುಂಬಾ ನಿರಾಶಾದಾಯಕ ಮತ್ತು ಅವರಿಗೆ ಮಾಡಿದ ಅವಮಾನವಾಗಿದೆ. ಇದು ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ದುರಾಡಳಿತಕ್ಕೆ ಸಮಾನವಾಗಿದೆ ಎಂದು ಗಮನಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕ್ರೈಸ್ತ ಧರ್ಮಕ್ಕೆ Hindu ಉಪಜಾತಿಗಳ ಸೇರ್ಪಡೆ ಮರುಪರಿಶೀಲಿಸುವಂತೆ ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲ ಗೆಹ್ಲೋಟ್ ಪತ್ರ!

ನಿರ್ಮಾಪಕರನ್ನು ದೋಚುವುದು ನಾಚಿಕೆಗೇಡು: 'Kalki 2' ಚಿತ್ರದಿಂದ Deepika Padukone ನಿರ್ಗಮಿಸಿದ ಬೆನ್ನಲ್ಲೇ Aamir Khan ಹೇಳಿಕೆ, Video ವೈರಲ್!

$100,000 H-1B ವೀಸಾ ಶುಲ್ಕ ಭಾರತಕ್ಕೆ ಹಿನ್ನಡೆ ಅಲ್ಲವೇ ಅಲ್ಲ: NITI ಆಯೋಗದ ಮಾಜಿ ಸಿಇಒ ಅಮಿತಾಬ್ ಕಾಂತ್ ಹೇಳೋದೇನು?

Bigg Boss Kannada 12: ಆರಂಭಕ್ಕೆ ಕ್ಷಣಗಣನೆ, ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಇಂತಿದೆ...

ಗಿರೀಶ್ ಲಿಂಗಣ್ಣ, TNIE ನೌಶಾದ್ ಗೆ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ

SCROLL FOR NEXT