ತಡಿಯಾಂಡಮೋಳ್ ಟ್ರೆಕ್ಕಿಂಗ್  
ರಾಜ್ಯ

ಕೂರ್ಗ್ ತಡಿಯಾಂಡಮೋಳ್ ಘಟನೆ: ಸೋಲೋ ಟ್ರೆಕ್ಕಿಂಗ್ ಸುರಕ್ಷತೆ ಕುರಿತು ಕಳವಳ ಶುರು, ಭದ್ರತಾ ವ್ಯವಸ್ಥೆ ಬಲಪಡಿಸಲು ಅರಣ್ಯ ಇಲಾಖೆ ಮುಂದು..!

ಕೊಡಗು ಜಿಲ್ಲೆಯ ಇತರ ಜನಪ್ರಿಯ ಟ್ರೆಕ್ ಮಾರ್ಗಗಳು, ಉದಾಹರಣೆಗೆ ಕುಮಾರ ಪರ್ವತ ಕೂಡ ದಟ್ಟ ಕಾಡು ಪ್ರದೇಶಗಳ ಮೂಲಕ ಸಾಗುತ್ತವೆ. ಇವುಗಳಲ್ಲಿ ಕೆಲವು ಮಾರ್ಗಗಳು ಸ್ಪಷ್ಟವಾಗಿದ್ದರೂ, ಅಜ್ಞಾತ ಪ್ರದೇಶಗಳಲ್ಲಿ ಸೋಲೋ ಟ್ರೆಕ್ಕಿಂಗ್ ಮಾಡುವುದು ಅಪಾಯಕಾರಿಯಾಗಿದೆ ಎಂಬುದು ತಜ್ಞರ ಅಭಿಪ್ರಾಯ.

ಮಡಿಕೇರಿ: ಕೊಡಗು ಜಿಲ್ಲೆಯ ತಡಿಯಾಂಡಮೋಳ್ ಟ್ರೆಕ್ಕಿಂಗ್ ಮಾರ್ಗದಲ್ಲಿ ನಡೆದ ಘಟನೆಯು ರಾಜ್ಯದಾದ್ಯಂತ ಸೋಲೋ ಟ್ರೆಕ್ಕಿಂಗ್ ಸುರಕ್ಷತೆ ಕುರಿತ ಹೊಸ ಚರ್ಚೆಗಳನ್ನು ಹುಟ್ಟು ಹಾಕಿದೆ.

ಕೇರಳದ ಮಹಿಳಾ ಟ್ರೆಕ್ಕರ್ ಒಬ್ಬರು ನಾಲ್ಕು ದಿನಗಳ ಕಾಲ ನಾಪತ್ತೆಯಾಗಿದ್ದರು, ನಂತರ ರಕ್ಷಣೆ ಮಾಡಲಾಗಿದ್ದು, ಈ ಘಟನೆ ಗಂಭೀರ ಆತಂಕವನ್ನು ಉಂಟುಮಾಡಿದೆ.

ಈ ಘಟನೆಯ ಹಿನ್ನೆಲೆ, ಮಡಿಕೇರಿಯ ಅರಣ್ಯ ಇಲಾಖೆ ತಾತ್ಕಾಲಿಕವಾಗಿ ತಡಿಯಾಂಡಮೋಳ್ ಟ್ರೆಕ್ಕಿಂಗ್ ಮಾರ್ಗವನ್ನು ಏಪ್ರಿಲ್ 11ರವರೆಗೆ ಬಂದ್ ಮಾಡಿದೆ.

ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಅವರು ಮಾತನಾಡಿ, ಟ್ರೆಕ್ಕಿಂಗ್ ಮಾರ್ಗಗಳಲ್ಲಿ ಸ್ಪಷ್ಟ ಗುರುತುಗಳನ್ನು ಅಳವಡಿಸುವುದು, ದಿಕ್ಕು ಸೂಚನೆಗಳನ್ನು ಸುಧಾರಿಸುವುದು ಹಾಗೂ ನೆಲಮಟ್ಟದ ಭದ್ರತಾ ವ್ಯವಸ್ಥೆಗಳನ್ನು ಬಲಪಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ಇತರ ಜನಪ್ರಿಯ ಟ್ರೆಕ್ ಮಾರ್ಗಗಳು, ಉದಾಹರಣೆಗೆ ಕುಮಾರ ಪರ್ವತ ಕೂಡ ದಟ್ಟ ಕಾಡು ಪ್ರದೇಶಗಳ ಮೂಲಕ ಸಾಗುತ್ತವೆ. ಇವುಗಳಲ್ಲಿ ಕೆಲವು ಮಾರ್ಗಗಳು ಸ್ಪಷ್ಟವಾಗಿದ್ದರೂ, ಅಜ್ಞಾತ ಪ್ರದೇಶಗಳಲ್ಲಿ ಸೋಲೋ ಟ್ರೆಕ್ಕಿಂಗ್ ಮಾಡುವುದು ಅಪಾಯಕಾರಿಯಾಗಿದೆ ಎಂಬುದು ತಜ್ಞರ ಅಭಿಪ್ರಾಯ. ಈ ನಡುವೆ ಟ್ರೆಕ್ಕಿಂಗ್ ತಜ್ಞರು ಮತ್ತು ಅನುಭವಿಗಳು ಸೋಲೋ ಟ್ರೆಕ್ಕಿಂಗ್ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

Trek n Tales ಸಂಸ್ಥೆಯ ಸಹ-ಸ್ಥಾಪಕಿ ಮೆಘನಾ ಕುಶಾಲಪ್ಪ ಅವರು ಮಾತನಾಡಿ, “ಅನುಭವ ಇದ್ದರೂ ಸಹ ಪರಿಚಯವಿಲ್ಲದ ಮಾರ್ಗಗಳಲ್ಲಿ ಒಬ್ಬರೇ ಟ್ರೆಕ್ಕಿಂಗ್ ಹೋಗುವುದು ಸೂಕ್ತವಲ್ಲ” ಎಂದು ಹೇಳಿದ್ದಾರೆ.

ಟ್ರೆಕ್ಕಿಂಗ್ ಮೊದಲು ಮಾರ್ಗದ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಬೇಕು, ಅಗತ್ಯವಿದ್ದರೆ ತಂಡದೊಂದಿಗೆ ತೆರಳಬೇಕು ಎಂದು ಸಲಹೆ ನೀಡಿದ್ದಾರೆ. ಇದೇ ವೇಳೆ, ಆಧುನಿಕ ತಂತ್ರಜ್ಞಾನವನ್ನು ಬಳಸುವಂತೆ ಕೂಡ ಸಲಹೆ ನೀಡಿದ್ದಾರೆ.

Wikiloc, Maps.me, Strava (ಪ್ರೀಮಿಯಂ ಆವೃತ್ತಿಗಳು) ನಂತರ ನಾವಿಗೇಶನ್ ಆ್ಯಪ್‌ಗಳು ಪೂರ್ವನಿರ್ಧರಿತ ಮಾರ್ಗಗಳನ್ನು ತೋರಿಸುತ್ತವೆ. ಇದರಿಂದ ದಾರಿ ತಪ್ಪುವ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಹೇಳಿದ್ದಾರೆ.

ಟ್ರೆಕ್ಕರ್‌ಗಳು ತಮ್ಮ ಜೊತೆ ಅಗತ್ಯ ವಸ್ತುಗಳನ್ನು ಕಡ್ಡಾಯವಾಗಿ ತೆಗೆದುಕೊಂಡಿರಬೇಕು. ಟಾರ್ಚ್ ಲೈಟ್, ಕುಡಿಯುವ ನೀರು, ಆಹಾರ, ಶಿಳ್ಳೆ (whistle), ಪೋರ್ಟಬಲ್ ಚಾರ್ಜರ್ ಮತ್ತು ಪ್ರಥಮ ಚಿಕಿತ್ಸಾ ಕಿಟ್ ಸೇರಿದಂತೆ ಅಗತ್ಯ ಸಾಧನಗಳನ್ನು ತೆಗೆದುಕೊಂಡಿರಬೇಕು. ತುರ್ತು ಪರಿಸ್ಥಿತಿಯಲ್ಲಿ ಇವು ಜೀವ ಉಳಿಸುವ ಮಟ್ಟಿಗೆ ಸಹಾಯಕವಾಗುತ್ತವೆ ಎಂದು ತಿಳಿಸಿದ್ದಾರೆ.

ಈ ನಡುವೆ ಕೊಡಗು ಆಧಾರಿತ ‘KA 12 Miles’ ಟ್ರೆಕ್ಕಿಂಗ್ ಗುಂಪು ಅಧಿಕಾರಿಗಳಿಗೆ ಹಲವು ಸಲಹೆಗಳನ್ನು ನೀಡಿದೆ. ಪ್ರಮುಖವಾಗಿ ಟ್ರೆಕ್ ಮಾರ್ಗಗಳಲ್ಲಿ ಎಚ್ಚರಿಕೆ ಫಲಕಗಳು, ದಿಕ್ಕು ಸೂಚನೆಗಳು, ಸಂವಹನ ಪಾಯಿಂಟ್‌ಗಳು, ವಿಶ್ರಾಂತಿ ಶೆಡ್‌ಗಳು, ರಕ್ಷಣಾ ತಂಡಗಳು ಮತ್ತು ಬೇಸ್ ಕ್ಯಾಂಪ್‌ಗಳಲ್ಲಿ ಆರೋಗ್ಯ ಸೇವೆಗಳ ವ್ಯವಸ್ಥೆ ಇರಬೇಕು ಎಂದು ಸಲಹೆ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: 'ಬೇಜವಾಬ್ದಾರಿಯುತ ಬೆದರಿಕೆ'ಗಳಿಗೆ ತಲೆಬಾಗಲ್ಲ: ಟ್ರಂಪ್'ಗೆ ಇರಾನ್ ತಿರುಗೇಟು, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನ

West-Asia war: ಇರಾನ್'ನಿಂದ ಡ್ರೋನ್-ಮಿಸೈಲ್ ದಾಳಿ; ಸೌದಿ ಅರೇಬಿಯಾದ ಅಲ್ ಜುಬೈಲ್ ಕೈಗಾರಿಕಾ ನಗರದಲ್ಲಿ ಭಾರೀ ಅಗ್ನಿ ಅವಘಡ, ಹೆಚ್ಚಿದ ಭೀತಿ

ಗ್ರೀನ್‌ಲ್ಯಾಂಡ್'ಗೆ ಅಮೆರಿಕಾ ಪಟ್ಟು: ಇರಾನ್ ವಿಚಾರದಲ್ಲಿ ಸಹಕರಿಸದ್ದಕ್ಕೆ NATOನ್ನು ‘ಪೇಪರ್ ಟೈಗರ್’ ಎಂದು ಟೀಕಿಸಿದ ಟ್ರಂಪ್, ಮಿತ್ರರಾಷ್ಟ್ರಗಳ ನಡುವೆ ಭಾರೀ ಬಿರುಕು..!

ಇಡೀ ಇರಾನ್ ಅನ್ನು ಒಂದೇ ರಾತ್ರಿಯಲ್ಲಿ ನಾಶ ಮಾಡುತ್ತೇವೆ; ಬಹುಶಃ ಆ ರಾತ್ರಿ ಇಂದೇ ಆಗಿರಬಹುದು: ಟ್ರಂಪ್ ಕೊನೇಯ ಎಚ್ಚರಿಕೆ

IPL 2026: ಮಳೆಯಿಂದಾಗಿ KKR ಮತ್ತು PBKS ಪಂದ್ಯ ರದ್ದು, ಉಭಯ ತಂಡಗಳಿಗೆ ತಲಾ 1 ಅಂಕ!

SCROLL FOR NEXT