ಪವನ್ 
ರಾಜ್ಯ

ಮಂಡ್ಯ: ನಾಪತ್ತೆಯಾಗಿದ್ದ ಪ್ರಥಮ ದರ್ಜೆ ಕಂಟ್ರಾಕ್ಟರ್ ಶವ ಪತ್ತೆ!

ಪವನ್ ಕೋಟ್ಯಾಂತರ ರೂಪಾಯಿ ಮೌಲ್ಯದ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದ ಕಂಟ್ರಾಕ್ಟರ್ ಆಗಿದ್ದು, ನಾಲ್ಕು ದಿನಗಳ ಹಿಂದೆ ಕೆಲಸ ಇದೆ, ಇಂದು ಮನೆಗೆ ಬರುವುದಿಲ್ಲ ಎಂದು ಕುಟುಂಬಕ್ಕೆ ತಿಳಿಸಿ ಹೊರಟಿದ್ದ.

ಮಂಡ್ಯ: ನಾಲ್ಕು ದಿನಗಳ ಹಿಂದೆ ಕಾಣೆಯಾಗಿದ್ದ ಪ್ರಥಮ ದರ್ಜೆ ಗುತ್ತಿಗೆದಾರ ಅನುಮಾನಾಸ್ಪದ ರೀತಿಯಲ್ಲಿ ಕಾವೇರಿ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ.

ಶ್ರೀರಂಗಪಟ್ಟಣ ತಾಲೂಕಿನ ಹುಣಸನ ಹಳ್ಳಿಯ ನಿವಾಸಿ ಪವನ್ (27) ಎಂಬ ಯುವಕನ ಶವ ಕಾವೇರಿ ನದಿಯಲ್ಲಿ ಪತ್ತೆಯಾಗಿದ್ದು, ಈ ಪ್ರಕರಣ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಪವನ್ ಕೋಟ್ಯಾಂತರ ರೂಪಾಯಿ ಮೌಲ್ಯದ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದ ಕಾಂಟ್ರಾಕ್ಟರ್ ಆಗಿದ್ದು, ನಾಲ್ಕು ದಿನಗಳ ಹಿಂದೆ ಕೆಲಸ ಇದೆ, ಇಂದು ಮನೆಗೆ ಬರುವುದಿಲ್ಲ ಎಂದು ಕುಟುಂಬಕ್ಕೆ ತಿಳಿಸಿ ಹೊರಟಿದ್ದ.

ನಂತರ ಆತ ಮನೆಗೆ ವಾಪಸ್ ಆಗಿಲ್ಲ. ಅವನ ಮೊಬೈಲ್ ಸ್ವಿಚ್ ಆಫ್ ಆಗಿರುವುದರ ಜೊತೆಗೆ ಸಾಮಾಜಿಕ ಜಾಲತಾಣ ಖಾತೆಗಳೂ ಡಿ-ಆಕ್ಟಿವ್ ಆಗಿದ್ದವು. ಇದರಿಂದ ಆತಂಕಗೊಂಡ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಶ್ರೀರಂಗಪಟ್ಟಣ ತಾಲೂಕಿನ ಕಾವೇರಿ ನದಿಯಲ್ಲಿ ಪವನ್ ಅವರ ಮೃತದೇಹ ಪತ್ತೆಯಾಗಿದ್ದು, ದೇಹದ ಮೇಲೆ ಗಾಯಗಳಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮತ್ತು ಆಪ್ತರು ಇದು ಕೊಲೆ ಆಗಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಪವನ್ ಸಾವಿನ ಸತ್ಯಾಸತ್ಯತೆ ಕುರಿತು ಸಮಗ್ರ ತನಿಖೆ ನಡೆಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಪ್ರಕರಣ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮತ್ತೆ ಏರಿದ ಇಂಧನ ದರ: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಹೆಚ್ಚಳ; 2 ವಾರಗಳಲ್ಲಿ ರೂ. 7.5 ಏರಿಕೆ, ತೈಲ ಕಂಪನಿಗಳಿಂದ ವಾಹನ ಸವಾರರಿಗೆ ಮತ್ತೆ ಶಾಕ್..!

ಕುರ್ಚಿ ಕದನಕ್ಕೆ ಕೊನೆಗೂ climax? ಸಿಎಂ ಡಿಸಿಎಂ ಗೆ ಹೈಕಮಾಂಡ್ ಬುಲಾವ್; ರಾಜ್ಯ ರಾಜಕೀಯದಲ್ಲಿ ಸಂಚಲನ!

I Love India, I Love Modi: ಭಾರತ ನನ್ನನ್ನ 100% ನಂಬಬಹುದು- ಡೊನಾಲ್ಡ್ ಟ್ರಂಪ್

ಕದನ ವಿರಾಮ, ಹಾರ್ಮುಜ್ ಜಲಸಂಧಿ ತೆರೆಯಲು ಒಪ್ಪಂದಕ್ಕೆ ಇರಾನ್-ಯುಎಸ್ ಹತ್ತಿರ: 'ಆತುರ ಬೇಡ'- ಟ್ರಂಪ್ ಹೊಸ ವರಸೆ!

ಇರಾನ್-ಅಮೆರಿಕಾ ಕದನ ವಿರಾಮ ನಡುವೆ ಯುಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ; ರಾಜಧಾನಿಗೆ ಅಪ್ಪಳಿಸಿದ ಹೊಸ ಹೈಪರ್ಸಾನಿಕ್ ಕ್ಷಿಪಣಿ; Video

SCROLL FOR NEXT