ತಹಶೀಲ್ದಾರ್ ಮಲ್ಲಣ್ಣ ಯಲಗೋಡ 
ರಾಜ್ಯ

ಸಭೆಯಲ್ಲೇ ಸಿಬ್ಬಂದಿಯಿಂದ ಲಂಚಕ್ಕೆ ಬೇಡಿಕೆಯಿಟ್ಟ ಜೇವರ್ಗಿ ತಹಶೀಲ್ದಾರ್​​​​: ಆಡಿಯೋ ವೈರಲ್​​

ಜೇವರ್ಗಿ ತಹಶೀಲ್ದಾರ್ ಮಲ್ಲಣ್ಣ ಯಲಗೋಡ ವಿರುದ್ಧ ಸಭೆಯಲ್ಲಿಯೇ ಸಿಬ್ಬಂದಿಯಿಂದ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ. ಮಲ್ಲಣ್ಣ ಯಲಗೋಡ ಹಾಗೂ ಸಿಬ್ಬಂದಿ ನಡುವಿನ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ.

ಕಲಬುರಗಿ: ಜೇವರ್ಗಿ ತಹಶೀಲ್ದಾರ್ ಮಲ್ಲಣ್ಣ ಯಲಗೋಡ ವಿರುದ್ಧ ಸಭೆಯಲ್ಲಿಯೇ ಸಿಬ್ಬಂದಿಯಿಂದ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ. ಮಲ್ಲಣ್ಣ ಯಲಗೋಡ ಹಾಗೂ ಸಿಬ್ಬಂದಿ ನಡುವಿನ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ. ತಹಶಿಲ್ದಾರ್ ಕಾಟಕ್ಕೆ ಬೇಸತ್ತ ಸಿಬ್ಬಂದಿ ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ. ವೈರಲ್ ಆಗಿರುವ ಆಡಿಯೋದಲ್ಲಿ ತಹಶಿಲ್ದಾರ್ ಮಲ್ಲಣ್ಣ, ನನ್ನ ಹೆಸರಲ್ಲಿ ನೀವು ಹಣ ಮಾಡುತ್ತೀರಿ. ಹಾಗಾಗಿ ನನಗೂ ಹಣ ನೀಡಿ ಎಂದು ಸಿಬ್ಬಂದಿಗಳಿಗೆ ಧಮ್ಕಿ ಹಾಕಿದ್ದಾರೆ. ಆಡಿಯೋ ವೈರಲ್ ಆಗುತ್ತಿದ್ದಂತೆ ತಹಶಿಲ್ದಾರ್ ಮಲ್ಲಣ್ಣ, ಆರು ತಿಂಗಳ ಹಿಂದೆ ಕನ್ನಡ ಭವನದಲ್ಲಿ ನಡೆದಿದ್ದ ಕಾರ್ಯಕ್ರಮದ ವಿಚಾರವಾಗಿ ನಾನು ಸಿಬ್ಬಂದಿಗಳ ಸಭೆ ನಡೆಸಿ ಚರ್ಚಿಸಿದ್ದೆ ಹೊರತು ನಾನು ಯಾರ ಬಳಿಯೂ ಹಣ ಕೇಳಿಲ್ಲ. ನನ್ನ ವಿರುದ್ಧದ ಆರೋಪ ಸುಳ್ಳು ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್‌ ದಾಳಿ; ಭಾರತೀಯ ಸೇರಿ ನಾಲ್ವರಿಗೆ ಗಾಯ

ಬೆಂಗಳೂರಿನಲ್ಲಿ ಗೃಹಬಳಕೆ ಎಲ್‌ಪಿಜಿಯಲ್ಲೂ ಕೊರತೆ: ಬುಕಿಂಗ್ ನಂಬರ್ ಸ್ವಿಚ್ ಆಫ್; ಹೆಚ್ಚಿದ ಆತಂಕ

IPL 2026: ವಿರಾಟ್ ಕೊಹ್ಲಿ ನೆಟ್​​ನಲ್ಲಿ ಕಠಿಣ ಅಭ್ಯಾಸ! Video ವೈರಲ್

ರಾಜ್ಯದಲ್ಲಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಸಮಸ್ಯೆ ಇಲ್ಲ: ಸಚಿವ ಕೆ.ಹೆಚ್. ಮುನಿಯಪ್ಪ ಸ್ಪಷ್ಟನೆ

ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು: ಗಾಜಿಯಾಬಾದ್‌ನ ಹರೀಶ್ ರಾಣಾ ದಯಾಮರಣಕ್ಕೆ ಅನುಮತಿ! ಏನಿದು ಪ್ರಕರಣ?

SCROLL FOR NEXT