ಸಿಟಿ ರವಿ 
ರಾಜ್ಯ

ಮಾಡೋಕೆ ಕೆಲಸ ಇಲ್ಲದವ್ನು ಅದೇನೋ ಕೆತ್ತಿದ್ನಂತೆ ಹಾಗ್ಯಾಕೆ ನೀವು ಮಾಡ್ತಿದ್ದೀರಿ: ಪ್ರಿಯಾಂಕ್ ಖರ್ಗೆಗೆ ಸಿಟಿ ರವಿ ತಪರಾಕಿ!

ತಮ್ಮ ಇರುವಿಕೆಯನ್ನು ಜನರಿಗೆ ನೆನಪಿಸಲು ಈಥರ ಪದೇ ಪದೆ ಮಾತಾಡ್ತಿದ್ದಾರೆ. ಆರ್​ಎಸ್​ಎಸ್​ ಎಲ್ಲದಕ್ಕೂ ಅನುಮತಿ ಪಡೆದೇ ಪಥಸಂಚಲನ ಮಾಡೋದು. ಗೃಹ ಸಚಿವರಿಗೆ ಮಾಡಲು ಬೇಕಾದಷ್ಟು ಕೆಲಸ ಇದೆ. ಆ ಕಡೆ ಗಮನ ಹರಿಸಲಿ.

ಬೆಂಗಳೂರು: ಮಾಡೋಕೆ ಕೆಲಸ ಇಲ್ಲದವ್ನು ಅದೇನೋ ಕೆತ್ತಿದ್ನಂತೆ ಹಾಗ್ಯಾಕೆ ನೀವು ಮಾಡ್ತಿದ್ದೀರಿ ಎಂದು ಬಿಜೆಪಿ ನಾಯಕ ಸಿಟಿ ರವಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಪ್ರಶ್ನಿಸಿದ್ದಾರೆ.

ಅನುಮತಿ ಪಡೆದೇ ಆರ್​ಎಸ್​ಎಸ್​ ಪಥ ಸಂಚಲನ ಮಾಡಬೇಕು ಎಂಬ ಗೃಹ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿ, ಜನ ಗೃಹ ಸಚಿವರನ್ನು ಮರೆಯಬಾರದು ಎಂದು ಆರ್​ಎಸ್​ಎಸ್​ ವಿಚಾರ ಮಾತಾಡ್ತಿದ್ದಾರೆ ಪ್ರಿಯಾಂಕ್ ಖರ್ಗೆ.

ತಮ್ಮ ಇರುವಿಕೆಯನ್ನು ಜನರಿಗೆ ನೆನಪಿಸಲು ಈಥರ ಪದೇ ಪದೆ ಮಾತಾಡ್ತಿದ್ದಾರೆ. ಆರ್​ಎಸ್​ಎಸ್​ ಎಲ್ಲದಕ್ಕೂ ಅನುಮತಿ ಪಡೆದೇ ಪಥಸಂಚಲನ ಮಾಡೋದು. ಗೃಹ ಸಚಿವರಿಗೆ ಮಾಡಲು ಬೇಕಾದಷ್ಟು ಕೆಲಸ ಇದೆ. ಆ ಕಡೆ ಗಮನ ಹರಿಸಲಿ ಎಂದು ತಿರುಗೇಟು ನೀಡಿದರು.

ಹಿಂದೂ ಪರ ಕಾರ್ಯಕರ್ತ ತೇಜಸ್ ಗೌಡ ಗೃಹ ಸಚಿವರ ವಿರುದ್ಧ ಕೇಸ್ ಹಾಕಿದ್ದು, ಅಷ್ಟಕ್ಕೇ ಗೃಹ ಸಚಿವರು ಆತನ ಮನೆಗೆ ಕೆಲವರನ್ನು ಕಳಿಸಿ ಕೇಸ್ ವಾಪಸ್ ಪಡೆಯಲು ಬೆದರಿಕೆ ಹಾಕಿದ್ದಾರೆ. ನಿಮಗ್ಯಾಕೆ ಭಯ?. ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ಬೆದರಿಕೆ ಯಾಕೆ ಹಾಕ್ತೀರಿ?. ಬೆದರಿಕೆಗೆಲ್ಲ ಹೆದರೋದಿಲ್ಲ, ಅದು ಶೋಭೆಯೂ ತರಲ್ಲ ಎಂದು ವಾಗ್ದಾಳಿ ನಡೆಸಿದರು.

Greenland ಮೇಲೆ ಮತ್ತೆ ಟ್ರಂಪ್ ಕಣ್ಣು: NATOದಲ್ಲಿ ಶತಕೋಟಿ ಡಾಲರ್ ಶಸ್ತ್ರಾಸ್ತ್ರ ಒಪ್ಪಂದ, ಟರ್ಕಿಗೆ F-35 ಮಾರಾಟಕ್ಕೂ ಒಪ್ಪಿಗೆ..!

ಶಾಸಕರ ಭವನದ ವಾಹನ ದುರ್ಬಳಕೆಗೆ ಬ್ರೇಕ್: ವಿಧಾನಸಭಾ ಸಚಿವಾಲಯದಿಂದ ಕಠಿಣ ರೂಲ್ಸ್; ಬಳಸಿದ ವಾಹನದ ಬಾಡಿಗೆ ನೇರವಾಗಿ ಶಾಸಕರ ವೇತನದಿಂದಲೇ ವಸೂಲಿ..!

'ಉಪಪಂಗಡಗಳಿಂದ ಒಡೆದಿರುವ ಲಿಂಗಾಯತ ಸಮಾಜ ಆತ್ಮಾವಲೋಕನ ಮಾಡಿಕೊಳ್ಳಬೇಕು'; ಪ್ರತ್ಯೇಕ ಧರ್ಮ ಮಾನ್ಯತೆಗೆ ಎಂ.ಬಿ. ಪಾಟೀಲ್ ಮತ್ತೆ ಆಗ್ರಹ

ಗ್ರಾಮೀಣ ವಲಸೆ ತಡೆಯಲು ಹೊಸ ಯೋಜನೆ; 2, 3ನೇ ಹಂತದ ನಗರಗಳಲ್ಲಿ ಕೈಗಾರಿಕೆ, 2 ಸಾವಿರ CSR ಶಾಲೆಗಳ ಘೋಷಣೆ..!

ದೂದ್ ಸಾಗರ್ ಗೆ ಅಕ್ರಮವಾಗಿ ಪ್ರವೇಶಿಸಿದ 39 ಟ್ರಕ್ಕರ್ ಗಳು: ದಂಡ ವಿಧಿಸಿದ RPF