ಡಿಕೆ ಶಿವಕುಮಾರ್- ಸೋನಿಯಾ ಗಾಂಧಿ- ರಾಹುಲ್ ಗಾಂಧಿ online desk
ರಾಜ್ಯ

ಪದಗ್ರಹಣಕ್ಕೂ ಮುನ್ನ ಗಾಂಧಿ ಕುಟುಂಬದ ಬೆಂಬಲ ಪ್ರೋತ್ಸಾಹ ಸ್ಮರಿಸಿದ ಡಿಕೆ ಶಿವಕುಮಾರ್; ಧನ್ಯವಾದ ಅರ್ಪಣೆ

ಮಂಗಳವಾರ ಎಕ್ಸ್ ಖಾತೆಯಲ್ಲಿ ಬರೆದಿರುವ ಡಿಕೆ ಶಿವಕುಮಾರ್, ತಮ್ಮ ರಾಜಕೀಯ ಪ್ರಯಾಣದಲ್ಲಿ ಗಾಂಧಿ ಕುಟುಂಬದ ಪಾತ್ರ ಮತ್ತು ಜೀವನದ ವಿವಿಧ ಹಂತಗಳಲ್ಲಿ ಅವರು ತಮ್ಮ ಮೇಲೆ ಇಟ್ಟಿದ್ದ ನಂಬಿಕೆಯನ್ನು ಸ್ಮರಿಸಿದ್ದಾರೆ.

ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪದಗ್ರಹಣಕ್ಕೂ ಮೊದಲು ಗಾಂಧಿ ಕುಟುಂಬಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಮಂಗಳವಾರ ಎಕ್ಸ್ ಖಾತೆಯಲ್ಲಿ ಬರೆದಿರುವ ಡಿಕೆ ಶಿವಕುಮಾರ್, ತಮ್ಮ ರಾಜಕೀಯ ಪ್ರಯಾಣದಲ್ಲಿ ಗಾಂಧಿ ಕುಟುಂಬದ ಪಾತ್ರ ಮತ್ತು ಜೀವನದ ವಿವಿಧ ಹಂತಗಳಲ್ಲಿ ಅವರು ತಮ್ಮ ಮೇಲೆ ಇಟ್ಟಿದ್ದ ನಂಬಿಕೆಯನ್ನು ಸ್ಮರಿಸಿದ್ದಾರೆ.

ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಶಿವಕುಮಾರ್, ರಾಜ್ಯದ ಜನರ ಆಶೀರ್ವಾದದೊಂದಿಗೆ, ಮೌಲ್ಯಯುತ, ಪ್ರಗತಿಪರ ನಿಲುವು ಹೊಂದಿರುವ, ಎಲ್ಲರನ್ನೂ ಒಳಗೊಂಡ ಮತ್ತು ಸಮೃದ್ಧ ಕರ್ನಾಟಕವನ್ನು ನಿರ್ಮಿಸಲು ಪ್ರಾಮಾಣಿಕತೆ ಮತ್ತು ಬದ್ಧತೆಯೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ ಎಂದು ಹೇಳಿದರು.

ಮೇ 30 ರಂದು ಕರ್ನಾಟಕದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ಜೂನ್ 3 ರಂದು ಸಂಜೆ 4.05 ಕ್ಕೆ ಲೋಕಭವನದ ಆವರಣದಲ್ಲಿ ಸಚಿವ ಸಂಪುಟದ ಕೆಲವು ಸದಸ್ಯರೊಂದಿಗೆ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

"ಗಾಂಧಿ ಕುಟುಂಬ ನನ್ನ ರಾಜಕೀಯ ಪ್ರಯಾಣದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ, ಕೇವಲ ನಾಯಕತ್ವದ ಮೂಲಕವಲ್ಲ, ಆದರೆ ನನ್ನ ಜೀವನದ ವಿವಿಧ ಹಂತಗಳಲ್ಲಿ ಅವರು ನನ್ನ ಮೇಲೆ ಇಟ್ಟಿರುವ ನಂಬಿಕೆಯ ಮೂಲಕ ನಿರ್ಣಾಯಕ ಪಾತ್ರ ವಹಿಸಿದೆ," ಎಂದು ಶಿವಕುಮಾರ್ X ನಲ್ಲಿ ಪೋಸ್ಟ್ ಮಾಡಿದ್ದಾರೆ.

"ನಾನು ಆಗಾಗ್ಗೆ ರಾಜೀವ್ ಗಾಂಧಿಯವರ ಬಗ್ಗೆ ಯೋಚಿಸುತ್ತೇನೆ, ನಾನು ನನ್ನ ಸಾಮರ್ಥ್ಯವನ್ನು ಅರಿಯುವ ಮೊದಲೇ ಅವರು ನನ್ನಲ್ಲಿದ್ದ ಸಾಮರ್ಥ್ಯವನ್ನು ಕಂಡರು. ಅವರ ಪ್ರೋತ್ಸಾಹ ನನಗೆ ದೊಡ್ಡ ಕನಸು ಕಾಣಲು ಮತ್ತು ಸಾರ್ವಜನಿಕ ಸೇವೆಗೆ ನನ್ನನ್ನು ಅರ್ಪಿಸಿಕೊಳ್ಳಲು ಆತ್ಮವಿಶ್ವಾಸವನ್ನು ನೀಡಿತು" ಎಂದು ಅವರು ಹೇಳಿದರು.

"ಇತರರಲ್ಲಿನ ಸಾಧ್ಯತೆಗಳನ್ನು ಗುರುತಿಸುವವರು ಮತ್ತು ಅವರ ಸ್ವಂತ ನಿರೀಕ್ಷೆಗಳನ್ನು ಮೀರಿ ಮೇಲೇರಲು ಪ್ರೇರೇಪಿಸುವವರು ಶ್ರೇಷ್ಠ ನಾಯಕರು. ರಾಜೀವ್ ಗಾಂಧಿ ನನ್ನ ವಿಷಯದಲ್ಲಿ ಅದನ್ನೇ ಮಾಡಿದರು" ಎಂದು ಅವರು ಹೇಳಿದರು.

ಮಾಜಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನಾಯಕತ್ವದ ಮತ್ತೊಂದು ಪ್ರಮುಖ ಪಾಠವನ್ನು ಕಲಿಸಿದ್ದಾರೆ ಎಂದು ಗಮನಿಸಿದ ಶಿವಕುಮಾರ್, "ನಿಜವಾದ ನಾಯಕರು ಯಶಸ್ಸಿನ ಕ್ಷಣಗಳಲ್ಲಿ ಮಾತ್ರ ನಿಮ್ಮೊಂದಿಗೆ ನಿಲ್ಲುವುದಿಲ್ಲ; ಅವರು ನಿಮ್ಮ ಅತ್ಯಂತ ಕಷ್ಟದ ಸಮಯದಲ್ಲಿ ನಿಮ್ಮೊಂದಿಗೆ ನಿಲ್ಲುತ್ತಾರೆ, ಶಕ್ತಿ, ಪ್ರೋತ್ಸಾಹ ಮತ್ತು ಅಚಲ ಬೆಂಬಲವನ್ನು ನೀಡುತ್ತಾರೆ" ಎಂದು ಹೇಳಿದರು.

ರಾಹುಲ್ ಗಾಂಧಿ ಮಾರ್ಗದರ್ಶನ ಮತ್ತು ಸ್ಫೂರ್ತಿಯ ನಿರಂತರ ಮೂಲವಾಗಿದ್ದರು ಎಂದು ಹೇಳಿರುವ, ನಿಯೋಜಿತ ಮುಖ್ಯಮಂತ್ರಿ, ಅವರು ಕೇಳುವ ಇಚ್ಛೆ, ಪ್ರಜಾಪ್ರಭುತ್ವ ಮೌಲ್ಯಗಳಲ್ಲಿ ದೃಢನಿಶ್ಚಯ ಹೊಂದಿದ್ದಾರೆ. ಸಮಗ್ರ ಮತ್ತು ಸಹಾನುಭೂತಿಯ ಭಾರತಕ್ಕಾಗಿ ಅವರ ದೃಷ್ಟಿಕೋನ ನನ್ನಂತಹ ನಾಯಕರನ್ನು ಪ್ರೇರೇಪಿಸುತ್ತಲೇ ಇರುತ್ತದೆ ಎಂದು ಹೇಳಿದ್ದಾರೆ.

"ಅವರ ಬೆಂಬಲ ನನ್ನ ಸಾರ್ವಜನಿಕ ಜೀವನದುದ್ದಕ್ಕೂ ಬಲವಾದ ಆಧಾರಸ್ತಂಭವಾಗಿದೆ" ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಪ್ರಿಯಾಂಕಾ ಗಾಂಧಿ ಯಾವಾಗಲೂ ಸುಲಭವಾಗಿ ಸಂಪರ್ಕಿಸಬಹುದಾದವರು, ಆತ್ಮೀಯರು ಮತ್ತು ಪ್ರೋತ್ಸಾಹಿಸುವವರಾಗಿದ್ದಾರೆ ಎಂದು ಶಿವಕುಮಾರ್ ಇದೇ ವೇಳೆ ಸ್ಮರಿಸಿದ್ದಾರೆ.

"ಅವರು ಪ್ರತಿಯೊಬ್ಬ ಕೆಲಸಗಾರನನ್ನು ಗೌರವ ಮತ್ತು ಘನತೆಯಿಂದ ನಡೆಸಿಕೊಂಡಿದ್ದಾರೆ, ರಾಜಕೀಯ ಅಂತಿಮವಾಗಿ ಜನರೊಂದಿಗೆ ಸಂಪರ್ಕ ಸಾಧಿಸುವುದು ಮತ್ತು ಅವರ ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳುವುದು ಎಂದು ನಮಗೆ ನೆನಪಿಸುತ್ತದೆ. ಅವರ ಮಾರ್ಗದರ್ಶನ ಮತ್ತು ಪ್ರೋತ್ಸಾಹವನ್ನು ಯಾವಾಗಲೂ ಆಳವಾಗಿ ಮೌಲ್ಯೀಕರಿಸಲಾಗಿದೆ" ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಶಿವಕುಮಾರ್ ಅವರ ಪ್ರಕಾರ, ಗಾಂಧಿ ಕುಟುಂಬ ನಾಯಕತ್ವದ ಸಾಮರ್ಥ್ಯವನ್ನು ಗುರುತಿಸುವುದು, ಕಷ್ಟದ ಸಮಯದಲ್ಲಿ ಜನರೊಂದಿಗೆ ನಿಲ್ಲುವುದು, ಸಹಾನುಭೂತಿಯಿಂದ ಆಲಿಸುವುದು ಮತ್ತು ದೃಢನಿಶ್ಚಯ ಮತ್ತು ಸೇವೆಯ ಮೂಲಕ ಇತರರಿಗೆ ಸ್ಫೂರ್ತಿ ನೀಡುವ ವಿಭಿನ್ನ ಆಯಾಮಗಳನ್ನು ಪ್ರತಿನಿಧಿಸುತ್ತದೆ.

"ತಳಮಟ್ಟದ ಕಾರ್ಯಕರ್ತನಾಗಿ ಪ್ರಾರಂಭವಾಗಿ ಇಂದು ಕರ್ನಾಟಕವನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವ್ಯಕ್ತಿಯಾಗಿ, ಅವರ ನಂಬಿಕೆ ಮತ್ತು ಪ್ರೋತ್ಸಾಹಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ" ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭವಿಷ್ಯ ಕಾಣುತ್ತಿಲ್ಲ'; ಬಿಜೆಪಿ ನಾಯಕತ್ವ ಭೇಟಿ ಮಾಡಿದ Annamalai; ಸ್ವತಂತ್ರ ರಾಜಕೀಯ ಪಯಣದ ಸುಳಿವು!

ಸ್ವಾಮೀಜಿ, ಫಾದರ್, ಮೌಲ್ವಿ ಸಮ್ಮುಖದಲ್ಲಿ ಮುಖ್ಯಮಂತ್ರಿಯಾಗಿ ಡಿಕೆಶಿ ಪ್ರಮಾಣವಚನ; ರಾಜ್ಯದ ಇತಿಹಾಸದಲ್ಲೇ ಮೊದಲು!

‘Kala Hiran’ ತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದ ಸಲ್ಮಾನ್ ಖಾನ್ ! ಬೆದರಿಸುವ ತಂತ್ರ ಎಂದ ನಿರ್ಮಾಪಕರು ಏನಿದು ವಿವಾದ?

ಮಹಾರಾಷ್ಟ್ರ: ಪಶ್ಚಾತ್ತಾಪ ಪಡುತ್ತಿದ್ದರೆ ಉದ್ಧವ್ ಠಾಕ್ರೆ ನೇತೃತ್ವದ ಪಕ್ಷಕ್ಕೆ ಮರಳಿ: ಶಿಂಧೆ ಬಣದ ನಾಯಕರಿಗೆ ರಾವತ್ ಆಹ್ವಾನ!

ಇನ್ನೂ 114 ರಾಫೆಲ್ ಜೆಟ್ ಖರೀದಿಗೆ ಭಾರತ ಮುಂದು; ಫ್ರಾನ್ಸ್ ಗೆ ವಾಯುಪಡೆ ಮುಖ್ಯಸ್ಥರ ಭೇಟಿ

SCROLL FOR NEXT