ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ 
ರಾಜ್ಯ

ಪಾಪದ ಹಣದಿಂದ ರಾಜಕೀಯ ಮಾಡಲ್ಲ: ಮನೆಯಿಂದ ಹಣ ತಂದು ರಾಜಕಾರಣ ಮಾಡೋಗುತ್ತಾ; ಆಲೂಗೆಡ್ಡೆ ಬೆಳೆದ ದುಡ್ಡಲ್ಲಿ ಪಕ್ಷ ನಡೆಸೋಕಾಗುತ್ತಾ?

ಚುನಾವಣೆ ಸಂದರ್ಭದಲ್ಲಿ ಮನೆಯಿಂದ ಹಣ ತಂದು ರಾಜಕಾರಣ ಮಾಡುವುದಕ್ಕಾಗುತ್ತಾ, ಆಲೂಗೆಡ್ಡೆ ಬೆಳೆದ ದುಡ್ಡಲ್ಲಿ ಪಕ್ಷವನ್ನು ನಡೆಸಲಿಕ್ಕಾಗುತ್ತಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಮೈಸೂರು: ‘ಮುಖ್ಯಮಂತ್ರಿ ಆಗಿದ್ದಾಗ ಸಹಿ ಮಾರಾಟಕ್ಕೆ ಇಟ್ಟಿರಲಿಲ್ಲ. ಈಗಲೂ ಕೇಂದ್ರದಲ್ಲಿ ಸಚಿವನಾಗಿದ್ದೇನೆ, ಎರಡು ಇಲಾಖೆಗಳನ್ನು ವಿಶ್ವಾಸದಿಂದ ನಡೆಸಿಕೊಂಡು ಹೋಗುತ್ತಿದ್ದೇನೆ. ಅಲ್ಲೂ ನನ್ನ ಸಹಿಯನ್ನು ಮಾರಾಟಕ್ಕಿಟ್ಟಿಲ್ಲ ಎಂದು ಕೇಂದ್ರ ಸಚಿವ ಕುಮಮಾರಸ್ವಾಮಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ನನ್ನ ವಿರುದ್ಧ ಆರೋಪಿಸುವವರಿಂದ ನಾನು ಪ್ರಮಾಣಪತ್ರ ಪಡೆದುಕೊಳ್ಳಬೇಕಿಲ್ಲ’ ಎಂದು ಹೇಳಿದರು. ನಮ್ಮೊಂದಿಗೇ ಇದ್ದು ಈಗ ಕಾಂಗ್ರೆಸ್‌ನಲ್ಲಿರುವವರು, ನನ್ನ ಬಂಡವಾಳವನ್ನೆಲ್ಲಾ ಬಿಚ್ಚಿಡುತ್ತೇನೆ ಎಂದು ಹೇಳಿದ್ದಾರೆ, ಬಿಚ್ಚಿಡಲಿ’ ಎಂದು ಸವಾಲು ಹಾಕಿದರು.

ಚುನಾವಣೆ ಸಂದರ್ಭದಲ್ಲಿ ಮನೆಯಿಂದ ಹಣ ತಂದು ರಾಜಕಾರಣ ಮಾಡುವುದಕ್ಕಾಗುತ್ತಾ, ಆಲೂಗೆಡ್ಡೆ ಬೆಳೆದ ದುಡ್ಡಲ್ಲಿ ಪಕ್ಷವನ್ನು ನಡೆಸಲಿಕ್ಕಾಗುತ್ತಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ರಾಜ್ಯದಲ್ಲಿ ಲಾಟರಿ ನಿಷೇಧಿಸದಂತೆ ಕೋಟ್ಯಂತರ ರೂಪಾಯಿ ಸುರಿಯಲು ಬಂದಿದ್ದರು. ಪಾಪದ ಹಣದಿಂದ ರಾಜಕೀಯ ಮಾಡುವುದಿಲ್ಲ ಎಂದು ಅಧಿಕಾರಿಗೆ ಬೈದು ಕಳಿಸಿದ್ದೆ.

ಆದರೆ, ವಿಧಾನಪರಿಷತ್‌, ರಾಜ್ಯಸಭಾ ಚುನಾವಣೆಗಳ ಸಂದರ್ಭದಲ್ಲಿ ಟಿಕೆಟ್ ಕೊಡುವಾಗ ಪಕ್ಷಕ್ಕೆ ದೇಣಿಗೆ ತೆಗೆದುಕೊಂಡಿದ್ದೇನೆ. ಅದನ್ನು ಪಕ್ಷ ನಡೆಸಲು ಬಳಸಿದ್ದೇನೆ. ಅದನ್ನೇನೂ ನನ್ನ ಸ್ವಂತಕ್ಕೆ ಬಳಸಿಕೊಂಡಿಲ್ಲ’ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಸ್ರೇಲ್ ವೈಮಾನಿಕ ದಾಳಿಗೆ ತತ್ತರಿಸಿದ ಲೆಬನಾನ್: 16 ಮಂದಿ ಬಲಿ; ಅಮೆರಿಕ-ಇರಾನ್ ಶಾಂತಿ ಮಾತುಕತೆ ಮುಂದೂಡಿಕೆ, ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ..!

NEET ಭದ್ರತೆಗೆ ಆದ್ಯತೆ; ದೇಶಾದ್ಯಂತ Telegram app ತಾತ್ಕಾಲಿಕ ನಿಷೇಧ, ಕೇಂದ್ರದ ಆದೇಶ ಎತ್ತಿಹಿಡಿದ Delhi ಹೈಕೋರ್ಟ್..!

ಚಿಕ್ಕಮಗಳೂರು: ನಡು ರಸ್ತೆಯಲ್ಲಿ ಲಾಂಗ್​ನಿಂದ ಕೇಕ್‌ ಕತ್ತರಿಸಿ ಬರ್ತಡೇ ಸೆಲೆಬ್ರೇಷನ್‌; ಪುಡಾರಿ ವಿರುದ್ಧ FIR

NEET UG 2026ಗೆ ಮತ್ತೊಂದು ಬಲಿ; ಮರು ಪರೀಕ್ಷೆಗೂ ಮುನ್ನ 17 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ

US-Iran ಒಪ್ಪಂದ ಬೆನ್ನಲ್ಲೇ Hormuzನಲ್ಲಿ ತೈಲ ಸಾಗಣೆ ಪುನರಾರಂಭ: ಲೆಬನಾನ್'ನಲ್ಲಿ ಮುಂದುವರೆದ ಉದ್ವಿಗ್ನತೆ, ಮಧ್ಯಪ್ರಾಚ್ಯ ಶಾಂತಿಗೆ ಕಂಟಕ..!