ಜಪಾನ್ ಮಹಿಳೆ ಝೋಕೊ 
ರಾಜ್ಯ

'ಮೋಹನ ಮುರುಳಿಯ ಕೊಳಲ ನಾದಕೆ...' ಗೋಕರ್ಣದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಜಪಾನ್ ಮಹಿಳೆ!

ಜಪಾನಿನ ಮಹಿಳೆಯೊಬ್ಬರು ಕೊಳಲು ನುಡಿಸುವುದನ್ನು ಕಾಣಬಹುದು. ಈಕೆ ಪ್ರತಿದಿನ ಬೆಳಿಗ್ಗೆ ಬಂದು, ಅದೇ ಸ್ಥಳದಲ್ಲಿ ಕುಳಿತು, ಶ್ರೀಕೃಷ್ಣನ ಸಣ್ಣ ಹಿತ್ತಾಳೆಯ ವಿಗ್ರಹವನ್ನು ಹೊರತೆಗೆದು ಕೊಳಲು ನುಡಿಸಲು ಪ್ರಾರಂಭಿಸುತ್ತಾರೆ.

ಗೋಕರ್ಣ: ಗೋಕರ್ಣಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಕೊಳಲಿನ ಮಧುರವಾದ ಧ್ವನಿ ಕೇಳಿಸುತ್ತದೆ. ಅದರ ಮೂಲವನ್ನು ಹುಡುಕಿ ಕೊಂಡು ಹೊರಟರೆ ಆ ಮಧುರ ಸ್ವರ ನಿಮ್ಮನ್ನು ದೇಶದ ಅತ್ಯಂತ ಹಳೆಯದೆಂದು ಪರಿಗಣಿಸಲಾದ ಮಹಾಗಣಪತಿ ದೇವಾಲಯಕ್ಕೆ ಕರೆದೊಯ್ಯುತ್ತದೆ.

ಇಲ್ಲಿ, ಜಪಾನಿನ ಮಹಿಳೆಯೊಬ್ಬರು ಕೊಳಲು ನುಡಿಸುವುದನ್ನು ಕಾಣಬಹುದು. ಈಕೆ ಪ್ರತಿದಿನ ಬೆಳಿಗ್ಗೆ ಬಂದು, ಅದೇ ಸ್ಥಳದಲ್ಲಿ ಕುಳಿತು, ಶ್ರೀಕೃಷ್ಣನ ಸಣ್ಣ ಹಿತ್ತಾಳೆಯ ವಿಗ್ರಹವನ್ನು ಹೊರತೆಗೆದು ಕೊಳಲು ನುಡಿಸಲು ಪ್ರಾರಂಭಿಸುತ್ತಾಳೆ.

ಆಕೆ ತನ್ನ ಹೆಸರನ್ನು ಝೋಕೊ ಎಂದು ಹೇಳುತ್ತಾಳೆ. ಪ್ರವಾಸಿ ವೀಸಾದಲ್ಲಿ ಇಲ್ಲಿದ್ದಾಳೆಂದು ನಮಗೆ ತಿಳಿದುಬಂದಿದೆ. ಆಕೆ ಯಾರೊಂದಿಗೂ ಮಾತನಾಡದೆ ಭಕ್ತಿಭಾವದಿಂದ ಕೊಳಲು ನುಡಿಸುವುದರಲ್ಲಿ ಮಗ್ನರಾಗುತ್ತಾರೆ. ಬೆಳಗ್ಗಿನಿಂದಲೂ ಕೊಳಲು ನುಡಿಸಿ ಸಂಜೆಯ ಹೊತ್ತಿಗೆ ಅಲ್ಲಿಂದ ಆಕೆ ಹೊರಡುತ್ತಾರೆ ಎಂದು ಸಮಾಜ ಸೇವಕ ಶ್ರೀರಾಮ್ ಸುರೇ ಹೇಳಿದ್ದಾರೆ.

ಆಕೆಯ ಈ ವರ್ತನೆಯಿಂದ ನಮಗೆ ಆಶ್ಚರ್ಯವಾಗೆ ಎಂದು ಝೋಕೊ ಕುಳಿತುಕೊಳ್ಳುವ ಮಹಾಗಣಪತಿ ದೇವಾಲಯದ ಪಕ್ಕದಲ್ಲಿರುವ ಗೋಕರ್ಣ ಮಹಾಬಲೇಶ್ವರ ದೇವಾಲಯದ ಅರ್ಚಕ ವಿನಾಯಕ ಶಾಸ್ತ್ರಿ ತಿಳಿಸಿದ್ದಾರೆ. ಆಕೆ ಭಿಕ್ಷೆ ಬೇಡುವುದಿಲ್ಲ, ಆದರೆ ಶ್ರೀಕೃಷ್ಣನ ವಿಗ್ರಹವಿರುವ ತಟ್ಟೆಯನ್ನು ಇಟ್ಟುಕೊಂಡು ಕೊಳಲು ನುಡಿಸುತ್ತಾರೆ

ಈ ಮಹಿಳೆ ಇಲ್ಲಿ ಸಾಕಷ್ಟು ಆಕರ್ಷಣೆಯಾಗಿದ್ದಾಳೆ, ಏಕೆಂದರೆ ಜನರು ಸುತ್ತಲೂ ಒಟ್ಟುಗೂಡುತ್ತಾರೆ, ಸೆಲ್ಫಿಗಳನ್ನು ತೆಗೆದುಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುತ್ತಾರೆ. ಅನೇಕರು ಉದಾರವಾಗಿ ದಾನ ಮಾಡುತ್ತಾರೆ ಎಂದು ಮಾಹಿತಿ ನೀಡಿದ್ದಾರೆ. ಅವರ ಈ ವಿಶಿಷ್ಟ ಶೈಲಿ ಗೋಕರ್ಣಕ್ಕೆ ಬರುವ ಪ್ರವಾಸಿಗರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ.

ವಿದೇಶಿ ಪ್ರಜೆಯೊಬ್ಬರು ಇಲ್ಲಿ ಭಿಕ್ಷೆ ಬೇಡುತ್ತಿರುವುದು ಇದೇ ಮೊದಲಲ್ಲ. ಕೆಲವು ವರ್ಷಗಳ ಹಿಂದೆ, ಫ್ರಾನ್ಸ್‌ನ ಮಹಿಳೆಯೊಬ್ಬರು ಗೋಕರ್ಣದ ಬೀದಿಗಳು ಮತ್ತು ಕಡಲತೀರಗಳಲ್ಲಿ ಪಿಟೀಲು ನುಡಿಸುತ್ತಾ ವಾಹನ ಚಲಾಯಿಸುತ್ತಿದ್ದುದನ್ನು ಸ್ಮರಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ-Video

ಈ ಬಾರಿ ಮೈಸೂರು ದಸರಾ ಮತ್ತಷ್ಟು ಆಕರ್ಷಕ; 146 ಕಿ.ಮೀ. ದೀಪಾಲಂಕಾರ; 3,500 ಡ್ರೋನ್‌ಗಳ ಪ್ರದರ್ಶನ

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೇತಮ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ