ಸಾಂದರ್ಭಿಕ ಚಿತ್ರ 
ರಾಜ್ಯ

ಸಕ್ಕರೆ ನಾಡಿನಲ್ಲಿ ಕುಸಿಯುತ್ತಿರುವ ಕೋಮು ಸಾಮರಸ್ಯ: ರಾಜ್ಯದ ಒಟ್ಟು 70 ಪ್ರಕರಣಗಳಲ್ಲಿ 34 ಕೇಸ್ ಮಂಡ್ಯ ಜಿಲ್ಲೆಯಲ್ಲಿ ದಾಖಲು!

ಸಾಂಪ್ರದಾಯಿಕವಾಗಿ ಕೃಷಿ ಪ್ರಧಾನ ಪ್ರದೇಶವಾದ ಮಂಡ್ಯ ಶಾಂತಿಯುತ ಸಹಬಾಳ್ವೆಗೆ ಹೆಸರುವಾಸಿಯಾಗಿದ್ದು, ವಿವಿಧ ಧರ್ಮಗಳ ಜನರು ಕೃಷಿಯಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ.

ಮಂಡ್ಯ: ಕರ್ನಾಟಕದ ಸಕ್ಕರೆ ಬಟ್ಟಲು ಎಂದೇ ಖ್ಯಾತಿ ಪಡೆದಿರುವ ಮಂಡ್ಯದಲ್ಲಿ ಕೋಮು ಸಾಮರಸ್ಯದ ದೀರ್ಘಕಾಲೀನ ಪರಂಪರೆ ಕುಸಿಯುತ್ತಿದೆ. ಗಣೇಶ ಹಬ್ಬದ ಸಂದರ್ಭದಲ್ಲಿ ನಡೆದ ಕೋಮು ಘರ್ಷಣೆಗಳಿಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ದಾಖಲಾಗಿರುವ 70 ಪ್ರಕರಣಗಳಲ್ಲಿ 34 ಪ್ರಕರಣಗಳು (48.57%) ಮಂಡ್ಯ ಜಿಲ್ಲೆಯಿಂದ ವರದಿಯಾಗಿವೆ.

ಇತ್ತೀಚಿನ ವಿಧಾನಮಂಡಲ ಅಧಿವೇಶನದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರಿಗೆ ವಿಧಾನ ಪರಿಷತ್ತಿನಲ್ಲಿ ಎಂಎಲ್‌ಸಿ ಮಧು ಜಿ. ಮಾದೇಗೌಡ ಅವರು ಕೇಳಿದ ಪ್ರಶ್ನೆಯಿಂದ ಈ ಮಾಹಿತಿ ಬಯಲಾಗಿದೆ.

ಸಾಂಪ್ರದಾಯಿಕವಾಗಿ ಕೃಷಿ ಪ್ರಧಾನ ಪ್ರದೇಶವಾದ ಮಂಡ್ಯ ಶಾಂತಿಯುತ ಸಹಬಾಳ್ವೆಗೆ ಹೆಸರುವಾಸಿಯಾಗಿದ್ದು, ವಿವಿಧ ಧರ್ಮಗಳ ಜನರು ಕೃಷಿಯಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಕೋಮು ರಾಜಕೀಯದ ಪ್ರವೇಶವು ಸಾಮಾಜಿಕ ಮತ್ತು ಧಾರ್ಮಿಕ ಧ್ರುವೀಕರಣವನ್ನು ಹೆಚ್ಚಿಸಲು ಕಾರಣವಾಗಿದೆ, ಇದರ ಪರಿಣಾಮವಾಗಿ ಗುಂಪುಗಳ ನಡುವೆ ಘರ್ಷಣೆಗಳು ಸಂಭವಿಸಿವೆ.

ಶ್ರೀರಂಗಪಟ್ಟಣದಲ್ಲಿ ಹಿಂದೂ ಗುಂಪುಗಳು ಆಯೋಜಿಸುವ ವಾರ್ಷಿಕ ಸಂಕೀರ್ತನ ಯಾತ್ರೆಯು ಒಂದು ಘರ್ಷಣಾ ಕೇಂದ್ರವಾಗಿದೆ. ಕೆರಗೋಡು ಗ್ರಾಮದಲ್ಲಿ ಹನುಮಾನ್ ಧ್ವಜಾರೋಹಣ ವಿಷಯ ಜಿಲ್ಲೆಯಾದ್ಯಂತ ವ್ಯಾಪಕ ಅಶಾಂತಿಗೆ ಕಾರಣವಾಗಿತ್ತು.

ನಾಗಮಂಗಲ ತಾಲೂಕಿನಲ್ಲಿ ಗಣೇಶ ಮೆರವಣಿಗೆಯ ಸಂದರ್ಭದಲ್ಲಿ ಕೋಮು ಘರ್ಷಣೆ, ನಂತರ ಮದ್ದೂರು ತಾಲೂಕಿನಲ್ಲಿ ಗಣೇಶ ಮೂರ್ತಿ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ಹಾಗೂ ಹಿಂಸಾಚಾರದ ಘಟನೆಗಳು ನಡೆದವು. ಈ ಘಟನೆಗಳು ಜಿಲ್ಲೆಯಾದ್ಯಂತ ಉದ್ವಿಗ್ನತೆ ಹೆಚ್ಚಿಸಿದವು. 2024 ರಲ್ಲಿ, ನಾಗಮಂಗಲದಲ್ಲಿ ಒಟ್ಟು 24 ಪ್ರಕರಣಗಳು ದಾಖಲಾಗಿದ್ದರೆ, 2025 ರಲ್ಲಿ ಮದ್ದೂರು ಪೊಲೀಸರು 10 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಹೆಚ್ಚುತ್ತಿರುವ ಕೋಮು ಘಟನೆಗಳಿಗೆ ಪ್ರತಿಕ್ರಿಯೆಯಾಗಿ, ಮಂಡ್ಯ ಜಿಲ್ಲೆಯಲ್ಲಿ ವಿಶೇಷ ಕಾರ್ಯಪಡೆ (SAF)ರಚಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ರಾಜ್ಯ ಮಟ್ಟದ ವಿಶಾಲ ಯೋಜನೆಯ ಭಾಗವಾಗಿ ಮೇ 28, 2025 ರಂದು ಹೊರಡಿಸಲಾದ ಆದೇಶದ ನಂತರ SAF ಸ್ಫಾಪಿಸಲಾಗಿದೆ.

ನಾಗಮಂಗಲ ಪಟ್ಟಣದಲ್ಲಿ ಗಣೇಶ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ, ಡಿವೈಎಸ್ಪಿ ಡಾ. ಸುಮಿತ್ ಎ.ಆರ್, ಪೊಲೀಸ್ ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್, ಪಿಎಸ್‌ಐ ರವಿ ಬಿ.ಜೆ ಮತ್ತು ಹೆಡ್ ಕಾನ್ಸ್‌ಟೇಬಲ್ ಎಂ. ರಮೇಶ್ ಸೇರಿದಂತೆ ಹಲವಾರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ಅವರ ವಿರುದ್ಧ ಜಂಟಿ ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ.

ಅದೇ ರೀತಿ, ಸೆಪ್ಟೆಂಬರ್ 8, 2025 ರಂದು ನಡೆದ ಗಣೇಶ ಮೆರವಣಿಗೆಯನ್ನು ನಿರ್ವಹಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಮದ್ದೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶಿವಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ. ಅವರ ವಿರುದ್ಧ ಇಲಾಖಾ ತನಿಖೆಗೂ ಆದೇಶಿಸಲಾಗಿದೆ.

ರಾಜ್ಯ ಮಟ್ಟದಲ್ಲಿ, ಎಸ್‌ಎಎಫ್‌ನ ಪ್ರಧಾನ ಕಚೇರಿ ಮಂಗಳೂರಿನಲ್ಲಿದ್ದು, ಜೂನ್ 11, 2025 ರಂದು ಉಡುಪಿ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮೂರು ಕಚೇರಿ ಸ್ಥಾಪಿಸಲಾಗಿದೆ. ತರುವಾಯ, ಮಂಡ್ಯ ಜಿಲ್ಲೆಯಲ್ಲಿ ಸ್ಥಾಪಿಸಲಾಯಿತು. ಎಸ್‌ಎಎಫ್ ಘಟಕಗಳು ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತವೆ.

ವಿಶೇಷ ಕ್ರಿಯಾ ಪಡೆ ಅಡಿಯಲ್ಲಿ, ದ್ವೇಷ ಭಾಷಣ ಮತ್ತು ಪ್ರಚೋದನಕಾರಿ ವಿಷಯಗಳಿಗಾಗಿ ಮಾಧ್ಯಮ, ಸಾಮಾಜಿಕ ಮಾಧ್ಯಮ ಮತ್ತು ಇತರ ವಿಷಯಗಳನ್ನು ಮೇಲ್ವಿಚಾರಣೆ ಮಾಡಲು ತಾಂತ್ರಿಕ ಕೋಶವನ್ನು ಹೊಂದಿರುವ ಗುಪ್ತಚರ ಘಟಕವನ್ನು ರಚಿಸಲಾಗಿದೆ.

ಸಂಭಾವ್ಯ ಕೋಮು ಅಶಾಂತಿಯ ಬಗ್ಗೆ ಮುನ್ನೆಚ್ಚರಿಕೆಗಳನ್ನು ನೀಡಲು ಮಾನವ ಗುಪ್ತಚರ ಜೊತೆಗೆ ಕಣ್ಗಾವಲು ವ್ಯವಸ್ಥೆಗಳನ್ನು ಬಲಪಡಿಸಲಾಗಿದೆ. ಪ್ರದೇಶ ಪ್ರಾಬಲ್ಯ ಸೇರಿದಂತೆ ವಿಶ್ವಾಸ ವೃದ್ಧಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ, ವಲಯ ಐಜಿಪಿಗಳು ಸೂಕ್ಷ್ಮ ಸಂದರ್ಭಗಳಲ್ಲಿ ಎಸ್‌ಎಎಫ್ ಸಿಬ್ಬಂದಿಯನ್ನು ನಿಯೋಜಿಸುತ್ತಿದ್ದಾರೆ, ಕೋಮು ಹಿಂಸಾಚಾರದ ಘಟನೆಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುತ್ತಿರುವುದಾಗಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಡ್ರೋನ್ ದಾಳಿ: UAE ಕೈಗಾರಿಕಾ ಪ್ರದೇಶದಲ್ಲಿ ಭಾರೀ ಬೆಂಕಿ: ಐವರು ಭಾರತೀಯರಿಗೆ ಗಾಯ

ಭಾರತ ವಿರೋಧಿ ಉಗ್ರರಿಗೆ ಪಾಕ್ 'ಸುರಕ್ಷಿತ ಸ್ವರ್ಗ'; ಉಗ್ರಸಂಘಟನೆಗಳನ್ನು ಪೋಷಿಸುವುದನ್ನು Pak ನಿಲ್ಲಿಸಿಲ್ಲ: ಅಮೆರಿಕ ಸ್ಫೋಟಕ ವರದಿ

West Asia Conflict: ಪ್ರಧಾನಿ ಮೋದಿ-ಟ್ರಂಪ್ ದೂರವಾಣಿ ಮಾತುಕತೆ; ಎಲಾನ್ ಮಸ್ಕ್ ಎಂಟ್ರಿ, ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆ

ಪತ್ನಿ ಕೊಲೆ ಕೇಸ್ ಅಲ್ಲಿ ಪತಿ ಜೈಲುಪಾಲು, ಲವರ್ ಮನೆಯಲ್ಲಿ ಸಿಕ್ಕಿಬಿದ್ದ ಹೆಂಡತಿ.. ಪೊಲೀಸರೇ ಬೇಸ್ತು! Video

Murshidabad ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 144 ಸೆಕ್ಷನ್ ಜಾರಿ, ಹಲವರಿಗೆ ಗಾಯ

SCROLL FOR NEXT