ಚಿಕ್ಕಮಗಳೂರು: ಎರಡು ಗುಂಪುಗಳ ನಡುವೆ ಪರಸ್ಪರ ಕಲ್ಲು ತೂರಾಟ; ತಪ್ಪಿದ ಕೋಮು ಸಂಘರ್ಷ, FIR ದಾಖಲು

ಶಾಂತಿ ಕದಡುವ ಮತ್ತು ಮಾರಕ ಆಯುಧಗಳಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ವಿಶ್ವ ಹಿಂದೂ ಪರಿಷತ್ ನಾಯಕ ಸಂತೋಷ್ ಕೋಟ್ಯಾನ್ ಮತ್ತು ಬಜರಂಗದಳ ನಾಯಕ ಶ್ಯಾಮ್ ವಿ ಗೌಡ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
Two groups pelt stones at each other in Vijayapura Extension, communal clash averted
ಸಾಂದರ್ಭಿಕ ಚಿತ್ರ
Updated on

ಚಿಕ್ಕಮಗಳೂರು: ಚಿಕ್ಕಮಗಳೂರಿನ ವಿಜಯಪುರ ಎಕ್ಸ್ಟೆನ್ಷನ್‌ನಲ್ಲಿ ಸೋಮವಾರ ರಾತ್ರಿ ಮುಸ್ಲಿಂ ಸಮುದಾಯದ ಯುವಕರು, ಹಿಂದೂ ವ್ಯಕ್ತಿಯೊಬ್ಬರ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಿದ ನಂತರ ಘಟನೆ ಕೋಮು ಘರ್ಷಣೆಗೆ ತಿರುಗುವ ಸಾಧ್ಯತೆ ಇತ್ತು. ಆದರೆ ಎರಡೂ ಸಮುದಾಯದವರ ವಿರುದ್ಧ ಕೇಸ್ ದಾಖಲಿಸಿರುವುದರಿಂದ ಪರಿಸ್ಥಿತಿ ತಿಳಿಯಾಗಿದೆ.

ಸಮುದಾಯಗಳ ನಡುವೆ ಪರಸ್ಪರ ಅನುಮಾನವಿದ್ದು, ಎರಡೂ ಸಮುದಾಯಗಳ ನೂರಾರು ಯುವಕರು ಬಸವನಹಳ್ಳಿ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ, ಆಕ್ರೋಶ ವ್ಯಕ್ತಪಡಿಸಿದ್ದರು.

ಸುಧಾ ಎಂಬುವವರ ಮನೆಯ ಮೇಲೆ ಕಲ್ಲು ಎಸೆದ ಆರೋಪದ ಮೇಲೆ ಹುಸೇನ್ ಮತ್ತು ಹಫ್ಸಾದ್ ಎಂದು ಗುರುತಿಸಲಾದ ಅಪ್ರಾಪ್ತರ ಮೇಲೆ ಹಲ್ಲೆ ನಡೆಸಲಾಗಿದ್ದು, ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

Two groups pelt stones at each other in Vijayapura Extension, communal clash averted
ಹಿಂದೂ ಮನೆ ಮೇಲೆ ನಿರಂತರ ಕಲ್ಲು ತೂರಾಟ: ಚಿಕ್ಕಮಗಳೂರಿನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣ, ಭದ್ರತೆ ಹೆಚ್ಚಳ

ಶಾಂತಿ ಕದಡುವ ಮತ್ತು ಮಾರಕ ಆಯುಧಗಳಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ವಿಶ್ವ ಹಿಂದೂ ಪರಿಷತ್ ನಾಯಕ ಸಂತೋಷ್ ಕೋಟ್ಯಾನ್ ಮತ್ತು ಬಜರಂಗದಳ ನಾಯಕ ಶ್ಯಾಮ್ ವಿ ಗೌಡ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಇನ್ನು ಹಫ್ಸಾದ್ ಹಾಗೂ ಹುಸೇನ್ ಮೇಲೆ BNS ಕಾಯ್ದೆಯ ವಿವಿಧ ಕಲಂಗಳ ಅಡಿ ಹಾಗೂ ಎಸ್​ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್​​ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಮತ್ತೊಂದೆಡೆ ಶಾಮ್ ಮತ್ತು ಸಂತೋಷ್ ವಿರುದ್ಧವೂ BNS ವಿವಿಧ ಕಲಂಗಳಡಿ ಕೇಸ್ ದಾಖಲಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com