ಜಂಟಿ ಸಂಸದೀಯ ಸಮಿತಿ (JPC) ಅಧ್ಯಕ್ಷ P. P. Chaudhary ಹಾಗೂ ಉಪ ಮುಖ್ಯಮಂತ್ರಿ D. K. Shivakumar ಅವರನ್ನು ಬೆಂಗಳೂರಿನಲ್ಲಿ ಭೇಟಿಯಾದರು. 
ರಾಜ್ಯ

'ಒಂದು ದೇಶ, ಒಂದು ಚುನಾವಣೆ’ ಆಡಳಿತವನ್ನು ಬಲಪಡಿಸಿ ಅನಿಶ್ಚಿತತೆ ಕಡಿಮೆ ಮಾಡುತ್ತದೆ': JPC ಮುಖ್ಯಸ್ಥ ಪಿ ಪಿ ಚೌಧರಿ

ಕೇಂದ್ರ ಸರ್ಕಾರ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಸ್ತಾವನೆ ಮುಂದಿಟ್ಟಿದೆ. ದೇಶದ ಹಿತದೃಷ್ಟಿಯಿಂದ ಎಲ್ಲಾ ರಾಜಕೀಯ ಪಕ್ಷಗಳು ಈ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಲು ಸಹಕರಿಸಬೇಕು ಎಂದು ಹೇಳಿದರು.

ಬೆಂಗಳೂರು: ಸಂವಿಧಾನ (129ನೇ ತಿದ್ದುಪಡಿ) ಮಸೂದೆ, 2024 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆ, 2024 ಕುರಿತ ಸಂಯುಕ್ತ ಸಂಸದೀಯ ಸಮಿತಿ (JPC) ಅಧ್ಯಕ್ಷ ಪಿ.ಪಿ ಚೌಧರಿ ‘ಒಂದು ದೇಶ, ಒಂದು ಚುನಾವಣೆ’ ನಡೆಸಬೇಕೆಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಸ್ತಾವನೆ ಮುಂದಿಟ್ಟಿದೆ. ದೇಶದ ಹಿತದೃಷ್ಟಿಯಿಂದ ಎಲ್ಲಾ ರಾಜಕೀಯ ಪಕ್ಷಗಳು ಈ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಲು ಸಹಕರಿಸಬೇಕು ಎಂದು ಹೇಳಿದರು.

ಪ್ರಾದೇಶಿಕ ಮಟ್ಟದ ಸಮಾಲೋಚನೆ ಮುಂದುವರಿಸುವ ಉದ್ದೇಶದಿಂದ ಜೆಪಿಸಿ ಅಧ್ಯಯನ ಪ್ರವಾಸದ ಭಾಗವಾಗಿ ಪಿ.ಪಿ ಚೌಧರಿ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ವಿಧಾನಸಭಾಧ್ಯಕ್ಷರು, ಪರಿಷತ್ ಸಭಾಪತಿ, ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖ್ಯಸ್ಥರು, ರಾಜ್ಯ ಆಡಳಿತ, ಹಣಕಾಸು ಮತ್ತು ಶಿಕ್ಷಣ ಸಂಸ್ಥೆಗಳು, ವೃತ್ತಿಪರ ಸಂಘಟನೆಗಳು ಹಾಗೂ ನಾಗರಿಕ ಸಮಾಜದ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಲಾಯಿತು.

ಈ ಮಸೂದೆ ಅಂಗೀಕರಿಸಲು ಸಂಸತ್ತಿನಲ್ಲಿ ಮೂರನೇ ಎರಡು ಭಾಗ ಬಹುಮತ ಅಗತ್ಯವಿದೆ. ಎನ್ ಡಿಎಗೆ ಇತರ ಪಕ್ಷಗಳ ಸಹಕಾರವೂ ಸಿಗಲಿದೆ ಎಂದು ನಾನು ಆಶಿಸುತ್ತೇನೆ. ಆಗ ಮಾತ್ರ ಇದು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪ್ರತ್ಯೇಕ ಚುನಾವಣೆಗಳು ವಿದೇಶಿ ನೇರ ಹೂಡಿಕೆ (FDI) ಮತ್ತು ವಿದೇಶಿ ಪೋರ್ಟ್‌ಫೋಲಿಯೊ ಹೂಡಿಕೆ (FPI) ಮೇಲೂ ಪರಿಣಾಮ ಬೀರುತ್ತವೆ ಎಂದು ಚೌಧರಿ ಅಭಿಪ್ರಾಯಪಟ್ಟರು.

ಕೇಂದ್ರ ಅಥವಾ ರಾಜ್ಯಗಳಲ್ಲಿ ಮುಂದಿನ ಸರ್ಕಾರ ಯಾವುದು ಎಂಬ ನಿರಂತರ ಅನಿಶ್ಚಿತತೆಯಿಂದ ಹೂಡಿಕೆದಾರರು ಹಿಂಜರಿಯುತ್ತಾರೆ. ಹೀಗಾಗಿ ಅವರು ತಮ್ಮ ಹೂಡಿಕೆಯನ್ನು ಭಾರತ ಬದಲು ಬೇರೆ ದೇಶಗಳಿಗೆ ವರ್ಗಾಯಿಸಬಹುದು. ಹಣಕಾಸು, ಆಡಳಿತ ಅಥವಾ ಮಕ್ಕಳ ಶಿಕ್ಷಣ ಯಾವುದೇ ದೃಷ್ಟಿಯಿಂದ ನೋಡಿದರೂ ಪ್ರತ್ಯೇಕ ಚುನಾವಣೆಗಳಿಂದ ದೇಶಕ್ಕೆ ಭಾರೀ ನಷ್ಟವಾಗುತ್ತಿದೆ ಎಂದು ಹೇಳಿದರು.

ಸರಿಯಾದ ಸಮಯದಲ್ಲಿ ಎಲ್ಲರಿಂದಲೂ ಆಕ್ಷೇಪಣೆಗಳನ್ನು ಆಹ್ವಾನಿಸುತ್ತೇವೆ. ಅವುಗಳನ್ನು ಪರಿಶೀಲಿಸಿ, ಎಲ್ಲರ ಅಭಿಪ್ರಾಯಗಳನ್ನು ಮೌಲ್ಯಮಾಪನ ಮಾಡಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಸ್ಥಳೀಯ ಸಂಸ್ಥೆಗಳ ರಾಮನಾಥ್ ಕೋವಿಂದ್ ಸಮಿತಿ ವರದಿಯನ್ನು ಉಲ್ಲೇಖಿಸಿದರು. ಸಂವಿಧಾನ ತಿದ್ದುಪಡಿಯ ಬಳಿಕ ‘Local Bodies’ ಎಂಬ ಪದವನ್ನು ‘Institutions of Self-Government’ ಎಂದು ಬದಲಿಸಲಾಗಿದೆ. ಅವು ಪಂಚಾಯತ್ ಮಟ್ಟದಲ್ಲಿರಲಿ ಅಥವಾ ನಗರಸಭೆ ಮಟ್ಟದಲ್ಲಿರಲಿ — ಲೋಕಸಭೆ ಮತ್ತು ವಿಧಾನಸಭೆಗಳ ಏಕಕಾಲದ ಚುನಾವಣೆಯ ಬಳಿಕ 100 ದಿನಗಳೊಳಗೆ ಈ ಸ್ವಯಂ ಆಡಳಿತ ಸಂಸ್ಥೆಗಳ ಚುನಾವಣೆ ನಡೆಸಬೇಕು ಎಂಬುದನ್ನು ಮಸೂದೆಯಲ್ಲಿ ಸೇರಿಸಲಾಗಿದೆ ಎಂದು ವಿವರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜನರಲ್ ದ್ವಿವೇದಿ ಹೇಳಿಕೆ 'ಪ್ರಚೋದನಕಾರಿ'; ಇದು ವಿನಾಶಕ್ಕೆ ಕಾರಣವಾಗಬಹುದು: ಭಾರತಕ್ಕೆ ಪಾಕ್ ಸೇನೆ ಎಚ್ಚರಿಕೆ

ನಿರ್ಗತಿಕರಿಗೆ ಬಡವರಿಂದ ಸಹಾಯಹಸ್ತ: 3 ಮಕ್ಕಳ ವಿಧವೆಗೆ ಮನೆ ನಿರ್ಮಿಸಿಕೊಟ್ಟ ವಿಜಯಪುರದ ದಿನಗೂಲಿ ಕಾರ್ಮಿಕರು

ಆಟೋ-ಟ್ಯಾಕ್ಸಿ ಚಾಲಕರಿಗೆ ಮತ್ತೆ ಶಾಕ್​​ ಕೊಟ್ಟ ಕೇಂದ್ರ ಸರ್ಕಾರ: 48 ಗಂಟೆಯಲ್ಲಿ 2ನೇ ಬಾರಿ CNG ದರ ಏರಿಕೆ, ಕೆಜಿಗೆ 1 ರೂ. ಹೆಚ್ಚಳ..!

ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಗುರಿಯಾಗಿಸಿ ಸಂಚಾರಕ್ಕೆ ಅಡ್ಡಿಪಡಿಸಿದರೆ ಸಹಿಸಲಾಗದು: ವಿಶ್ವಸಂಸ್ಥೆಯಲ್ಲಿ ಭಾರತ ಖಂಡನೆ

“ನಮ್ಮ ತಾಳ್ಮೆ ಪರೀಕ್ಷಿಸಬೇಡಿ; ಉಗ್ರ ಚಟುವಟಿಕೆ ನಿಲ್ಲಿಸದಿದ್ದರೆ ಭೂಪಟದಲ್ಲಿರಬೇಕಾ-ಇತಿಹಾಸದಲ್ಲಿರಬೇಕಾ ತೀರ್ಮಾನಿಸಿ”: ಪಾಕಿಸ್ತಾನಕ್ಕೆ ಭಾರತ ಖಡಕ್ ಎಚ್ಚರಿಕೆ

SCROLL FOR NEXT