ರಾಕೆಟ್ ಮರು ಬಳಕೆ: SpaceX ಬಳಿಕ ಇದೀಗ ಹೊಸ ಮೈಲುಗಲ್ಲು ತಲುಪಿದ ಚೀನಾ!

ಲಾಂಗ್ ಮಾರ್ಚ್-10B ರಾಕೆಟ್ ಅನ್ನು ದಕ್ಷಿಣ ಚೀನಾದ ಹೈನಾನ್ ಪ್ರಾಂತ್ಯದಿಂದ ಉಡಾಯಿಸಲಾಯಿತು. ಅದರ ಪೇಲೋಡ್ ಅನ್ನು ಗೊತ್ತುಪಡಿಸಿದ ಕಕ್ಷೆಗೆ ಯಶಸ್ವಿಯಾಗಿ ಇರಿಸಲಾಯಿತು ಎಂದು ಕ್ಸಿನ್ಹುವಾ ವರದಿ ಮಾಡಿದೆ.
a drone photo shows the successful capture of the returned first stage of Long March-10B carrier rocke
ಮರಳಿ ಉಡಾವಣಾ ವೇದಿಕೆಗೆ ಹಿಂದಿರುಗಿದ ರಾಕೆಟ್ ಫೋಟೋ
Updated on

ಬೀಜಿಂಗ್: ಚೀನಾ ಶುಕ್ರವಾರ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಮತ್ತೊಂದು ಮೈಲುಗಲ್ಲು ತಲುಪಿದೆ. ಚೀನಾದ ಚೊಚ್ಚಲ ಮರು ಬಳಕೆ ಮಾಡಬಹುದಾದ ರಾಕೆಟ್ ಲಾಂಗ್ ಮಾರ್ಚ್-10B ಮೇಲಕ್ಕೆ ಹಾರಿದ ಬಳಿಕ ಮರಳಿ ಉಡಾವಣಾ ವೇದಿಕೆಗೆ ಹಿಂದಿರುಗಿದೆ.

ಎಲಾನ್ ಮಸ್ಕ್ ಅವರ ಯುಎಸ್ ಮೂಲದ ಸ್ಪೇಸ್‌ಎಕ್ಸ್, ಡಿಸೆಂಬರ್ 2015 ರಲ್ಲಿ ಇಂತಹ ಸಾಧನೆ ಮಾಡಿತ್ತು. ಇದೀಗ ಆ ಸಾಲಿಗೆ ಚೀನಾ ಸೇರ್ಪಡೆಯಾಗಿದೆ. ಇದು ದೇಶದ ಮರುಬಳಕೆ ಮಾಡಬಹುದಾದ ರಾಕೆಟ್ ತಂತ್ರಜ್ಞಾನದಲ್ಲಿ ಪ್ರಮುಖ ಪ್ರಗತಿಯನ್ನು ತೋರಿಸುತ್ತದೆ ಎಂದು ಸರ್ಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಲಾಂಗ್ ಮಾರ್ಚ್-10B ರಾಕೆಟ್ ಅನ್ನು ದಕ್ಷಿಣ ಚೀನಾದ ಹೈನಾನ್ ಪ್ರಾಂತ್ಯದಿಂದ ಉಡಾಯಿಸಲಾಯಿತು. ಅದರ ಪೇಲೋಡ್ ಅನ್ನು ಗೊತ್ತುಪಡಿಸಿದ ಕಕ್ಷೆಗೆ ಯಶಸ್ವಿಯಾಗಿ ಇರಿಸಲಾಯಿತು ಎಂದು ಕ್ಸಿನ್ಹುವಾ ವರದಿ ಮಾಡಿದೆ.

ಪ್ಲೇಲೋಡ್ ನ್ನು ಕಕ್ಷೆಗೆ ಸೇರಿಸಿದ ನಂತರ ರಾಕೆಟ್ ಬೂಸ್ಟರ್ ಮರಳಿ ಉಡಾವಣಾ ವೇದಿಕೆಗೆ ಹಿಂದಿರುಗಿದೆ. ಇದೇ ರೀತಿಯಲ್ಲಿ ಕಳೆದ ಡಿಸೆಂಬರ್‌ನಲ್ಲಿ, ಚೀನಾದ ಇತರ ಎರಡು ಮರುಬಳಕೆ ಮಾಡಬಹುದಾದ ರಾಕೆಟ್‌ಗಳು ಗ್ರಿಡ್ ಫಿನ್‌ಗಳು ಮತ್ತು ಲ್ಯಾಂಡಿಂಗ್ ಲೆಗ್‌ಗಳನ್ನು ಬಳಸಿಕೊಂಡು ಸ್ಪೇಸ್‌ಎಕ್ಸ್ ಶೈಲಿಯಲ್ಲಿ ಲ್ಯಾಂಡಿಂಗ್ ಗೆ ಪ್ರಯತ್ನಿಸಿದ್ದವು. ಆದರೆ ಎರಡೂ ಪ್ರಯತ್ನ ವಿಫಲವಾಗಿತ್ತು ಎಂದು ಹಾಂಗ್ ಕಾಂಗ್ ಮೂಲದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

a drone photo shows the successful capture of the returned first stage of Long March-10B carrier rocke
ಹವಾಮಾನ ಶೇ.90ರಷ್ಟು ಅನುಕೂಲಕರ: Ax-4 mission ಬಗ್ಗೆ SpaceX ವಿಶ್ವಾಸ

ರಾಕೆಟ್‌ನ ಮೊದಲ ಮತ್ತು ಎರಡನೇ ಹಂತಗಳನ್ನು ಬೇರ್ಪಡಿಸಿದ ನಂತರ, ಮೊದಲ ಹಂತದ ಬೂಸ್ಟರ್ ಮರಳಿ ಉಡಾವಣಾ ವೇದಿಕೆಗೆ ಹಿಂದಿರುಗಿದೆ. ಲಾಂಗ್ ಮಾರ್ಚ್-10B ಮರುಬಳಕೆ ಮಾಡಬಹುದಾದ ದ್ರವ ಇಂಧನ ಚಾಲಿತ ವಾಣಿಜ್ಯ ಉಡಾವಣಾ ವಾಹನವಾಗಿದ್ದು, ಸುಮಾರು 63 ಮೀಟರ್ ಎತ್ತರ ಮತ್ತು ಐದು ಮೀಟರ್ ವ್ಯಾಸವನ್ನು ಹೊಂದಿದೆ. ಇದು ಸುಮಾರು 890 ಟನ್‌ ಕೊಂಡೊಯ್ಯಬಲ್ಲಾ ಸಾಮರ್ಥ್ಯ ಹೊಂದಿದೆ. ಅದರ ಮರುಬಳಕೆ ಮಾಡಬಹುದಾದ ಸಂರಚನೆಯಲ್ಲಿ, ಈ ರಾಕೆಟ್ 16 ಟನ್‌ಗಳ ಪೇಲೋಡ್ ಅನ್ನು ಕಕ್ಷೆಗೆ ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕ್ಸಿನ್ಹುವಾ ವರದಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com