ಸಾಂದರ್ಭಿಕ ಚಿತ್ರ 
ರಾಜ್ಯ

ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಣೆ: ಹೋಟೆಲ್ ಗಳಲ್ಲಿ ಊಟ, ತಿಂಡಿ ಬೆಲೆಗಳಲ್ಲಿ ದುಪ್ಪಟ್ಟು ಹೆಚ್ಚಳದ ವಾರ್ನಿಂಗ್!

ರಾಜ್ಯ ಸರ್ಕಾರದಿಂದ ಈ ನಿರ್ಧಾರದಿಂದ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಊಟ, ತಿಂಡಿಗಳ ಬೆಲೆ ತೀವ್ರ ಏರಿಕೆಗೆ ಕಾರಣವಾಗಲಿದೆ ಎಂದು ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ಸೋಮವಾರ ಎಚ್ಚರಿಸಿದೆ.

ಬೆಂಗಳೂರು: ಕರ್ನಾಟಕ ಸರ್ಕಾರವು ರಾಜ್ಯದ 81 ಉದ್ಯೋಗ ವಲಯಗಳ ಕಾರ್ಮಿಕರ ಕನಿಷ್ಠ ವೇತನವನ್ನು ಗರಿಷ್ಠ ಶೇ. 60 ರಷ್ಟು ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿದೆ. ರಾಜ್ಯ ಸರ್ಕಾರದಿಂದ ಈ ನಿರ್ಧಾರದಿಂದ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಊಟ, ತಿಂಡಿಗಳ ಬೆಲೆ ತೀವ್ರ ಏರಿಕೆಗೆ ಕಾರಣವಾಗಲಿದೆ ಎಂದು ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ಸೋಮವಾರ ಎಚ್ಚರಿಸಿದೆ.

ಸರಾಸರಿ ಕನಿಷ್ಠ ವೇತನ ಹೆಚ್ಚಳವು ಪ್ರಸ್ತುತ ವೇತನಕ್ಕಿಂತ ಸುಮಾರು ಶೇ. 60 ರಷ್ಟಿದ್ದು, ರೆಸ್ಟೋರೆಂಟ್‌ಗಳ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಒಂದು ಪ್ಲೇಟ್ ಇಡ್ಲಿಯ ಬೆಲೆ 50 ರೂ.ಗಳಿಂದ 80 ರೂ.ಗಳಿಗೆ ಮತ್ತು ಮಸಾಲೆ ದೋಸೆ 80-90 ರೂ.ಗಳಿಂದ 150 ರೂ.ಗಳಿಗೆ ಏರಿಕೆಯಾಗಬಹುದು ಎಂದು ಸಂಘದ ಅಧ್ಯಕ್ಷ ಜಿ. ಕೆ. ಶೆಟ್ಟಿ ಹೇಳಿದ್ದಾರೆ.

150-200 ರೂ. ಇರುವ ಸಸ್ಯಾಹಾರಿ ಊಟವು 250-300 ರೂ.ಗಳಿಗೆ ಏರಿಕೆಯಾಗಬಹುದು ಮತ್ತು ಬೆಂಗಳೂರಿನಲ್ಲಿ ಬಿರಿಯಾನಿ ಭಕ್ಷ್ಯಗಳು 300-350 ರೂ.ಗಳಿಂದ ಸುಮಾರು 500 ರೂ.ಗಳಿಗೆ ಏರಿಕೆಯಾಗಬಹುದು. "ಇಂತಹ ಹೆಚ್ಚಳಗಳೊಂದಿಗೆ, ಸಾಮಾನ್ಯ ನಾಗರಿಕರಿಗೆ ಹೊರಗೆ ಊಟ ಮಾಡುವುದು ಹೆಚ್ಚು ದುಬಾರಿಯಾಗಲಿದೆ. ಇದು ಹೋಟೆಲ್ ಉದ್ಯಮದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ತಿಳಿಸಿದ್ದಾರೆ.

ಸಂಘಟಿತ ಮತ್ತು ಅಸಂಘಟಿತ ವಲಯಗಳಿಗೆ ಕರ್ನಾಟಕ ಹೊಸ ಕನಿಷ್ಠ ವೇತನವನ್ನು ಪ್ರಕಟಿಸಿದೆ.ಈ ಪರಿಷ್ಕೃತ ವೇತನದ ಪ್ರಕಾರ, ಕೌಶಲರಹಿತ ನೌಕರರಿಗೆ ತಿಂಗಳಿಗೆ ಕನಿಷ್ಠ ರೂ. 19,300 ಹಾಗೂ ಕೌಶಲ ನುರಿತ (Skilled) ನೌಕರರಿಗೆ ತಿಂಗಳಿಗೆ ರೂ. 31,100 ರವರೆಗೆ ನಿಗದಿಪಡಿಸಲಾಗಿದೆ. ಕನಿಷ್ಠ ವೇತನದಲ್ಲಿ ಸುಮಾರು ಶೇ.60 ರಷ್ಟು ಹೆಚ್ಚಳವು ಹೋಟೆಲ್‌ಗಳಿಗೆ, ವಿಶೇಷವಾಗಿ ಸಣ್ಣ ಮತ್ತು ಕುಟುಂಬ ನಡೆಸುವ ಸಂಸ್ಥೆಗಳಿಗೆ ನಿರ್ವಹಣಾ ವೆಚ್ಚವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಶೆಟ್ಟಿ ಹೇಳಿದರು.

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಕೆಲವೇ ತಿಂಗಳುಗಳಲ್ಲಿ 1,884 ರೂ.ಗಳಿಂದ 3,152 ರೂ.ಗಳಿಗೆ ಹೆಚ್ಚಿಸಲಾಗಿದೆ. ಎಲ್ಲಾ ದಿನಸಿ, ವಿದ್ಯುತ್ ಸುಂಕಗಳು ಮತ್ತು ಕಸದ ಸೆಸ್ ದರಗಳನ್ನು ಸಹ ಹೆಚ್ಚಿಸಲಾಗಿದ್ದು, ಇದು ಸಣ್ಣ ಹೋಟೆಲ್ ಮಾಲೀಕರ ಒತ್ತಡವನ್ನು ಹೆಚ್ಚಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ಚರ್ಚೆ ಮಧ್ಯೆ ಸಿದ್ದರಾಮಯ್ಯ ಸಂಪುಟದಲ್ಲಿ ಮಹತ್ವದ ಬದಲಾವಣೆ

ಮೇಕೆದಾಟು ಯೋಜನೆಗೆ ವಿಜಯ್ ಅಡ್ಡಗಾಲು: ಕಾನೂನು ಕ್ರಮ ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ತಮಿಳುನಾಡು ಸಿಎಂ ಸೂಚನೆ

ಶತಾವಧಾನಿ ಆರ್. ಗಣೇಶ್, ಅಂಕೇ ಗೌಡ, ಸುಶೀಲಮ್ಮಗೆ ಪದ್ಮ ಪ್ರಶಸ್ತಿ ಪ್ರದಾನ

T20ಯಲ್ಲಿ 200 ರನ್ ಬಾರಿಸುವ ಮೂಲಕ ಗೇಲ್ ದಾಖಲೆ ಮುರಿಯುವುದು ನನ್ನ ಗುರಿ: ವೈಭವ್ ಸೂರ್ಯವಂಶಿ

'ಐಶ್ವರ್ಯ ರೈ ನಿಮ್ಮನ್ನು ಮೆಚ್ಚಿಸಲು ಕೇನ್ಸ್​​ಗೆ ಹೋಗಿಲ್ಲ': ಫ್ಯಾಟ್ ಆಂಟಿ ಎಂದ ಟ್ರೋಲರ್ಸ್ ವಿರುದ್ಧ ಕಂಗನಾ ಕಿಡಿ

SCROLL FOR NEXT