ನಂದಿನಿ ತುಪ್ಪ, ಬೆಣ್ಣೆ ಹಾಗೂ ಪನೀರ್ ಬೆಲೆಯಲ್ಲಿ ಭಾರಿ ಏರಿಕೆ Online Desk
ರಾಜ್ಯ

ಕೆಎಂಎಫ್‌ನಿಂದ ಮತ್ತೊಂದು ಬೆಲೆ ಏರಿಕೆ ಬಿಸಿ: ಹಾಲು, ಮೊಸರಿನ ನಂತರ ನಂದಿನಿ ತುಪ್ಪ, ಬೆಣ್ಣೆ ಹಾಗೂ ಪನೀರ್ ಬೆಲೆಯಲ್ಲಿ ಭಾರಿ ಏರಿಕೆ!

ಕರ್ನಾಟಕದ ಗ್ರಾಹಕರಿಗೆ ದೀಪಾವಳಿ ಹಬ್ಬದ ಬೆನ್ನಲ್ಲೇ ಮತ್ತೊಂದು ದೊಡ್ಡ ಶಾಕ್ ನೀಡಿದೆ. ಇತ್ತೀಚೆಗಷ್ಟೇ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಹೆಚ್ಚಳ ಮಾಡಿದ್ದ ಕೆಎಂಎಫ್, ಈಗ ನಂದಿನಿ ತುಪ್ಪ, ಬೆಣ್ಣೆ ಹಾಗೂ ಪನೀರ್ ದರಗಳನ್ನು ಸಹ ಏರಿಕೆ ಮಾಡಿದೆ. ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ದಿನ ಬಳಕೆಯ ಹಾಲು ಮತ್ತು ಮೊಸರಿನ ಬೆಲೆ ಏರಿಕೆಯ ಬೆನ್ನಲ್ಲೇ ಕರ್ನಾಟಕ ಹಾಲು ಮಹಾಮಂಡಳಿಯು (ಕೆಎಂಎಫ್) ರಾಜ್ಯದ ಜನತೆಗೆ ಮತ್ತೊಂದು ಆಘಾತ ನೀಡಿದೆ. ಹೌದು, ಜನಸಾಮಾನ್ಯರ ಅಡುಗೆ ಮನೆಗೆ ಅನಿವಾರ್ಯವಾಗಿರುವ ನಂದಿನಿ ತುಪ್ಪ, ಬೆಣ್ಣೆ ಹಾಗೂ ಪನೀರ್ ದರಗಳನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದ್ದು, ಮಧ್ಯಮ ವರ್ಗದವರ ಹಾಗೂ ಹೋಟೆಲ್ ಉದ್ಯಮಿಗಳ ಜೇಬಿಗೆ ಮತ್ತಷ್ಟು ಕತ್ತರಿ ಬೀಳುವಂತಾಗಿದೆ. ನವೆಂಬರ್ 4 ರಿಂದಲೇ ಜಾರಿಗೆ ಬರುವಂತೆ ಈ ಹೊಸ ಪರಿಷ್ಕೃತ ದರಗಳನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಪ್ರಮುಖವಾಗಿ ನಂದಿನಿ ತುಪ್ಪದ ಬೆಲೆ ಲೀಟರ್‌ಗೆ 135 ರೂಪಾಯಿ ಹೆಚ್ಚಳವಾಗಿದೆ. ಆ ಕುರಿತ ವರದಿ ಇಲ್ಲಿದೆ:

ನಂದಿನಿ ತುಪ್ಪ:
ತುಪ್ಪದ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ₹100 ರಿಂದ ₹135 ರವರೆಗೆ ಭಾರಿ ಹೆಚ್ಚಳವಾಗಿದೆ.

  • 1 ಲೀಟರ್ ಸ್ಯಾಚೆಟ್: ಹಳೆಯ ಬೆಲೆ ₹715 ಇದ್ದದ್ದು, ಈಗ ₹850 ಕ್ಕೆ ಏರಿಕೆಯಾಗಿದೆ (₹135 ಹೆಚ್ಚಳ).

  • 1 ಲೀಟರ್ ಪೆಟ್ ಜಾರ್: ಹಳೆಯ ಬೆಲೆ ₹735 ಇದ್ದದ್ದು, ಈಗ ₹870 ಕ್ಕೆ ಏರಿಕೆಯಾಗಿದೆ (₹135 ಹೆಚ್ಚಳ).

  • 15 ಕೆಜಿ ಟಿನ್: ಹಳೆಯ ಬೆಲೆ ₹11,625 ಇದ್ದದ್ದು, ಈಗ ಬರೋಬ್ಬರಿ ₹14,100 ತಲುಪಿದೆ.

  • 200 ಮಿ.ಲೀ ಸ್ಯಾಚೆಟ್: ಹೊಸ ಬೆಲೆ ₹95.

ನಂದಿನಿ ಬೆಣ್ಣೆ:
ಬೆಣ್ಣೆಯ ಬೆಲೆಯಲ್ಲಿ ಪ್ರತಿ ಕೆಜಿಗೆ ಸುಮಾರು ₹80 ರಷ್ಟು ಏರಿಕೆಯಾಗಿದೆ.

  • 500 ಗ್ರಾಂ ಉಪ್ಪಿಲ್ಲದ ಬೆಣ್ಣೆ: ಹಳೆಯ ಬೆಲೆ ₹285 ಇದ್ದದ್ದು, ಈಗ ₹390 ಕ್ಕೆ ಏರಿಕೆಯಾಗಿದೆ.

  • 500 ಗ್ರಾಂ ಉಪ್ಪು ಸಹಿತ ಬೆಣ್ಣೆ: ಹೊಸ ಬೆಲೆ ₹380.

  • 100 ಗ್ರಾಂ ಉಪ್ಪು ಸಹಿತ ಬೆಣ್ಣೆ: ಹೊಸ ಬೆಲೆ ₹90.

  • 200 ಗ್ರಾಂ ಉಪ್ಪಿಲ್ಲದ ಬೆಣ್ಣೆ: ಹೊಸ ಬೆಲೆ ₹160.

ನಂದಿನಿ ಪನೀರ್:
ಪನೀರ್ ಬೆಲೆಯಲ್ಲಿ ಪ್ರತಿ ಕೆಜಿಗೆ ₹77 ರಷ್ಟು ಹೆಚ್ಚಳವಾಗಿದೆ.

  • 1 ಕೆಜಿ ಪ್ಯಾಕ್: ಹಳೆಯ ಬೆಲೆ ₹408 ಇದ್ದದ್ದು, ಈಗ ₹485 ಕ್ಕೆ ಏರಿಕೆಯಾಗಿದೆ.

  • 500 ಗ್ರಾಂ ಪ್ಯಾಕ್: ಹೊಸ ಬೆಲೆ ₹260.

  • 200 ಗ್ರಾಂ ಪ್ಯಾಕ್: ಹಳೆಯ ಬೆಲೆ ₹96 ಇದ್ದದ್ದು, ಈಗ ₹115 ಕ್ಕೆ ಏರಿಕೆಯಾಗಿದೆ.

  • 200 ಗ್ರಾಂ ಮೀಡಿಯಂ ಫ್ಯಾಟ್ ಪನೀರ್: ಹೊಸ ಬೆಲೆ ₹110.

ಇದರೊಂದಿಗೆ ತೃಪ್ತಿ ಹಾಲಿನ ದರದಲ್ಲೂ ಬದಲಾವಣೆಯಾಗಿದ್ದು, 135 ಎಂಎಲ್‌ಗೆ ₹11 ಹಾಗೂ 450 ಎಂಎಲ್‌ಗೆ ₹33 ನಿಗದಿಪಡಿಸಲಾಗಿದೆ. ಒಟ್ಟಾರಿಯಾಗಿ, ಹಬ್ಬಗಳ ಸರಣಿಯ ಬೆನ್ನಲ್ಲೇ ಗ್ರಾಹಕರಿಗೆ ಕೆಎಂಎಫ್ ಸರಣಿ ಶಾಕ್ ನೀಡಿದಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಉಸಿರುಗಟ್ಟಿಸುವ ವಾತಾವರಣ: 482ಕ್ಕೆ ತಲುಪಿದ ವಾಯು ಗುಣಮಟ್ಟ ಸೂಚಿ, ಪರಿಸ್ಥಿತಿ ಮತ್ತಷ್ಟು ಗಂಭೀರ..!

'ಬಹುಮಟ್ಟಿಗೆ ನಿಜ': ಮಧ್ಯಂತರ ಚುನಾವಣೆ ಮೇಲೆ ಇರಾನ್ ಯುದ್ಧ ಪರಿಣಾಮ ಬೀರಿದೆ, ಆದರೆ ಅನಿವಾರ್ಯವಾಗಿತ್ತು': ಡೊನಾಲ್ಡ್ ಟ್ರಂಪ್

ಕರ್ನಾಟಕದ ಬರ ಪರಿಸ್ಥಿತಿ ಬಗ್ಗೆ ತೀವ್ರ ಕಳವಳ: ಜಲ ಸಂರಕ್ಷಣೆ, ಬರ ನಿರ್ವಹಣೆಗೆ ಕೇಂದ್ರ-ರಾಜ್ಯ ಒಗ್ಗೂಡಿ ಕೆಲಸ ಮಾಡೋಣ: ಸಿಎಂ ಡಿಕೆಶಿಗೆ ಪ್ರಧಾನಿ ಮೋದಿ ಪತ್ರ..!

ಆಡಳಿತ ವ್ಯವಸ್ಥೆ ನಿದ್ದೆಗೆ ಜಾರಿದೆಯೇ..? ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ರಸ್ತೆಗಿಳಿದ ವಿದ್ಯಾರ್ಥಿಗಳು; ಕೈಯಲ್ಲಿ ಸಲಿಕೆ ಹಿಡಿದು ತಾವೇ ಗುಂಡಿ ಮುಚ್ಚಿದ ಮಕ್ಕಳು..!

ಹಾಲಿನ ದರ ಏರಿಕೆಯ ₹8ರಲ್ಲಿ ₹7 ರೈತರಿಗೇ ಸಿಗಲಿದೆ, ರೈತರ ಹಿತಕ್ಕಾಗಿ ಬೆಲೆ ಏರಿಕೆ ಅನಿವಾರ್ಯ: ಬೆಲೆ ಏರಿಕೆ ಸಮರ್ಥಿಸಿಕೊಂಡ ಡಿಕೆ ಸುರೇಶ್