ಡಿಕೆ ಸುರೇಶ್ 
ರಾಜ್ಯ

ಹಾಲಿನ ದರ ಏರಿಕೆಯ ₹8ರಲ್ಲಿ ₹7 ರೈತರಿಗೇ ಸಿಗಲಿದೆ, ರೈತರ ಹಿತಕ್ಕಾಗಿ ಬೆಲೆ ಏರಿಕೆ ಅನಿವಾರ್ಯ: ಬೆಲೆ ಏರಿಕೆ ಸಮರ್ಥಿಸಿಕೊಂಡ ಡಿಕೆ ಸುರೇಶ್

ರೈತರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಸರ್ಕಾರ ಪ್ರತಿ ಲೀಟರ್ ಹಾಲಿನ ದರವನ್ನು ₹8 ಹೆಚ್ಚಿಸಲು ನಿರ್ಧರಿಸಿದೆ. ಇದರಲ್ಲಿ ₹7 ರೈತರಿಗೆ ಹಾಗೂ ₹1 ಹಾಲು ಒಕ್ಕೂಟಗಳಿಗೆ ನೀಡಲಾಗುತ್ತದೆ.

ಬೆಂಗಳೂರು: ಹಾಲಿನ ಬೆಲೆ ಹೆಚ್ಚಳ ಅನಿವಾರ್ಯವಾಗಿತ್ತು ಮತ್ತು ರೈತರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹಾಲಿನ ದರ ಏರಿಕೆಯನ್ನು ಬಮೂಲ್ ಅಧ್ಯಕ್ಷ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಬುಧವಾರ ಸಮರ್ಥಿಸಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತಾಡಿದ ಅವರು, ರೈತರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಸರ್ಕಾರ ಪ್ರತಿ ಲೀಟರ್ ಹಾಲಿನ ದರವನ್ನು ₹8 ಹೆಚ್ಚಿಸಲು ನಿರ್ಧರಿಸಿದೆ. ಇದರಲ್ಲಿ ₹7 ರೈತರಿಗೆ ಹಾಗೂ ₹1 ಹಾಲು ಒಕ್ಕೂಟಗಳಿಗೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ ದರ ಏರಿಕೆಯ ನಂತರವೂ ಕರ್ನಾಟಕದಲ್ಲಿ ಹಾಲಿನ ಬೆಲೆ ದೇಶದಲ್ಲೇ ಅತ್ಯಂತ ಕಡಿಮೆ ಇದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಬೆಲೆ ಹೆಚ್ಚಳದ ಬೆನ್ನಲ್ಲೇ ಹೆರಿಟೇಜ್, ದೊಡ್ಲಾ, ತಿರುಮಲ ಮತ್ತು ಹ್ಯಾಟ್ಸನ್ ಸೇರಿದಂತೆ ಇತರ ಹಾಲು ಉತ್ಪಾದನಾ ಸಂಸ್ಥೆಗಳೂ ತಮ್ಮ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿವೆ ಎಂದು ಹೇಳಿದ್ದಾರೆ.

ಹಾಲಿನ ದರ ಏರಿಕೆ ಘೋಷಣೆಯಾದ ಎರಡು ದಿನಗಳಲ್ಲೇ ಹಾಲು ಸಂಗ್ರಹಣೆಯ ಪ್ರಮಾಣ ಸುಮಾರು 10 ಲಕ್ಷ ಲೀಟರ್ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ರೈತರು ತೀವ್ರ ಬರಗಾಲ, ಪಶು ಆಹಾರ ಮತ್ತು ಮೇವಿನ ಬೆಲೆ ಏರಿಕೆ ಹಾಗೂ ರಾಸಾಯನಿಕ ಗೊಬ್ಬರಗಳ ವೆಚ್ಚ ಹೆಚ್ಚಳ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರೈತರ ಸಂಕಷ್ಟ ಕಡಿಮೆ ಮಾಡುವ ಉದ್ದೇಶದಿಂದ ಬೆಲೆ ಹೆಚ್ಚಳದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಅಧಿಕಾರಿಗಳ ಪ್ರಕಾರ, ಆರೋಕ್ಯ ಪ್ರತಿ ಲೀಟರ್ ಹಾಲನ್ನು ₹68ಕ್ಕೆ ಮಾರಾಟ ಮಾಡುತ್ತಿದೆ. ದೊಡ್ಲಾ ಮತ್ತು ತಿರುಮಲ ಹಾಲಿನ ದರ ₹60 ಹಾಗೂ ಅಮೂಲ್ ಹಾಲಿನ ದರ ₹66 ಇದೆ ಎಂದು ಹೇಳಿದ್ದು, ಇದೇ ವೇಳೆ ಇತರ ರಾಜ್ಯಗಳ ಹಾಲಿನ ದರವನ್ನೂ ಉಲ್ಲೇಖಿಸಿದ್ದಾರೆ.

ಕೇರಳದಲ್ಲಿ ಪ್ರತಿ ಲೀಟರ್ ಹಾಲಿನ ಬೆಲೆ ₹56, ಗುಜರಾತ್‌ನಲ್ಲಿ ₹57ರಿಂದ ₹58, ತೆಲಂಗಾಣದಲ್ಲಿ ₹62ರಿಂದ ₹64 ಹಾಗೂ ದೆಹಲಿಯಲ್ಲಿ ₹58 ಇದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ರೈತರಿಂದ ಹಾಲು ಖರೀದಿಸುವ ದರವನ್ನು ಪ್ರತಿ ಲೀಟರ್‌ಗೆ ₹35ರಿಂದ ₹42ಕ್ಕೆ ಹೆಚ್ಚಿಸಲಾಗಿದೆ. ದರ ಪರಿಷ್ಕರಣೆಯ ನಡುವೆಯೂ ರೈತರಿಗೆ ನೀಡಲಾಗುತ್ತಿದ್ದ ₹5 ಪ್ರೋತ್ಸಾಹಧನ ಮುಂದುವರಿಯಲಿದೆ. ಹೀಗಾಗಿ ರೈತರಿಗೆ ಪ್ರತಿ ಲೀಟರ್ ಹಾಲಿಗೆ ಒಟ್ಟು ₹47 ದೊರೆಯಲಿದೆ ಎಂದು ವಿವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಬಹುಮಟ್ಟಿಗೆ ನಿಜ': ಮಧ್ಯಂತರ ಚುನಾವಣೆ ಮೇಲೆ ಇರಾನ್ ಯುದ್ಧ ಪರಿಣಾಮ ಬೀರಿದೆ, ಆದರೆ ಅನಿವಾರ್ಯವಾಗಿತ್ತು': ಡೊನಾಲ್ಡ್ ಟ್ರಂಪ್

ಕರ್ನಾಟಕದ ಬರ ಪರಿಸ್ಥಿತಿ ಬಗ್ಗೆ ತೀವ್ರ ಕಳವಳ: ಜಲ ಸಂರಕ್ಷಣೆ, ಬರ ನಿರ್ವಹಣೆಗೆ ಕೇಂದ್ರ-ರಾಜ್ಯ ಒಗ್ಗೂಡಿ ಕೆಲಸ ಮಾಡೋಣ: ಸಿಎಂ ಡಿಕೆಶಿಗೆ ಪ್ರಧಾನಿ ಮೋದಿ ಪತ್ರ..!

ರೈತರು-ಸಕ್ಕರೆ ಕಾರ್ಖಾನೆಗಳ ನಡುವೆ ಸಂಘರ್ಷ ಅಂತ್ಯ: ಪ್ರತಿ ಟನ್‌ ಕಬ್ಬಿಗೆ 3600 ರೂ. ದರ ನಿಗದಿ- ಸಚಿವ ಸತೀಶ್‌ ಜಾರಕಿಹೊಳಿ

"ಗೃಹಲಕ್ಷ್ಮಿ"ಯರಿಗೆ ಸರ್ಕಾರದಿಂದ ದೀಪಾವಳಿ ಬಂಪರ್ ಗಿಫ್ಟ್: 3 ಕಂತಿನ ಹಣ ಒಂದೇ ಬಾರಿ ಬಿಡುಗಡೆ!

'ನೀವು ರಾಂಗ್ ನಂಬರ್ ಡಯಲ್ ಮಾಡಿದ್ದೀರಿ; ಇದು ಧರಣಿ, ಪ್ರತಿಭಟನೆಯ ಕಾಲ, ಅದನ್ನೇ ಮಾಡಿ': SC, ST ಕ್ಷೇತ್ರಗಳ ರೊಟೇಷನ್ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್