ಡೆಲಿವರಿ ಬಾಯ್ - ಛಲವಾದಿ ನಾರಾಯಣಸ್ವಾಮಿ 
ರಾಜ್ಯ

'ತುಂಡು ತುಂಡಾಗಿ ಕತ್ತರಿಸುತ್ತಾರೆ' ಹೇಳಿಕೆ: ಛಲವಾದಿ ನಾರಾಯಣಸ್ವಾಮಿ ಮನೆಗೆ ಚಾಕು, ಚೂರಿ ಆರ್ಡರ್; ಡೆಲಿವರಿ ಬಾಯ್ಸ್ ಬಂದಾಗ ಹೈಡ್ರಾಮಾ!

ಬ್ಲಿಂಕಿಟ್ ಮೂಲಕ ಛಲವಾದಿ ನಾರಾಯಣಸ್ವಾಮಿ ಅವರ ಮನೆಗೆ ಚಾಕು, ಚೂರಿ ಆರ್ಡರ್ ಮಾಡಲಾಗಿದ್ದು, ಅದನ್ನು ತಲುಪಿಸಲು ಡೆಲಿವರಿ ಬಾಯ್ಸ್ ಹಾಗೂ ಎನ್‌ಎಸ್‌ಯುಐ ಕಾರ್ಯಕರ್ತರ ಆಗಮನದಿಂದ ನಿವಾಸದ ಬಳಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಬೆಂಗಳೂರು: ಇತ್ತೀಚಿಗೆ ಕೋಲಾರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ವಿರುದ್ಧ ಪ್ರತಿಭಟನೆ ನಡೆಸಿರುವ ಕಾಂಗ್ರೆಸ್, ಬ್ಲಿಂಕಿಟ್​ನಿಂದ ಅವರ ಮನೆಗೆ ಚಾಕು, ಚೂರಿ ಆರ್ಡರ್ ಮಾಡಿ ಆಕ್ರೋಶ ಹೊರ ಹಾಕಿದೆ.

ಇಂದು ಬೆಂಗಳೂರಿನ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್ ಬಳಿಯಿರುವ ಛಲವಾದಿ ನಾರಾಯಣಸ್ವಾಮಿ ಅವರ ಸರ್ಕಾರಿ ನಿವಾಸಕ್ಕೆ ಚಾಕು-ಚೂರಿ ಇರುವ ಪೋಸ್ಟ್ ಕವರ್‌ಗಳನ್ನ ತಲುಪಿಸುವ ವಿಚಾರವಾಗಿ ಕೆಲಕಾಲ ಹೈಡ್ರಾಮಾ ನಡೆದಿದೆ.

ಬ್ಲಿಂಕಿಟ್ ಮೂಲಕ ಛಲವಾದಿ ನಾರಾಯಣಸ್ವಾಮಿ ಅವರ ಮನೆಗೆ ಚಾಕು, ಚೂರಿ ಆರ್ಡರ್ ಮಾಡಲಾಗಿದ್ದು, ಅದನ್ನು ತಲುಪಿಸಲು ಡೆಲಿವರಿ ಬಾಯ್ಸ್ ಹಾಗೂ ಎನ್‌ಎಸ್‌ಯುಐ ಕಾರ್ಯಕರ್ತರ ಆಗಮನದಿಂದ ನಿವಾಸದ ಬಳಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ನಾಲ್ಕು ಬೈಕ್‌ಗಳಲ್ಲಿ ಬಂದ ಡೆಲಿವರಿ ಬಾಯ್ಸ್ ಪೋಸ್ಟ್ ಕವರ್‌ಗಳನ್ನ ತಂದಿದ್ದರು. ಈ ವೇಳೆ ನಿವಾಸದ ಭದ್ರತಾ ಪೊಲೀಸರು ಡೆಲಿವರಿ ಬಾಯ್ಸ್‌ಗಳನ್ನ ತಡೆದು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಡೆಲಿವರಿ ಬಾಯ್ಸ್ ಜೊತೆ ಬಂದಿದ್ದ ಇಬ್ಬರು NSUI ಕಾರ್ಯಕರ್ತರು ಕೂಡ ಸ್ಥಳದಲ್ಲಿ ಕಾಣಿಸಿಕೊಂಡಿದ್ದಾರೆ.

ಪೋಸ್ಟ್ ಕವರ್‌ಗಳನ್ನ ಛಲವಾದಿ ನಾರಾಯಣಸ್ವಾಮಿ ಅವರಿಗೆ ನೀಡುವಂತೆ ಡೆಲಿವರಿ ಬಾಯ್ಸ್‌ಗಳಿಗೆ ಒತ್ತಾಯಿಸಿದ್ದಾರೆ. ಆದ್ರೆ, ಡೆಲಿವರಿ ಬಾಯ್ಸ್‌ಗಳು ಕವರ್‌ಗಳನ್ನು ನೀಡದೆ ವಾಪಸ್ ತೆರಳಲು ಮುಂದಾಗಿದ್ದಾರೆ. ಆದಾಗ್ಯೂ ಅವರನ್ನ ಹಿಂದಿರುಗಿ ಹೋಗಿ ಅವುಗಳನ್ನ ತಲುಪಿಸುವಂತೆ ಎನ್‌ಎಸ್‌ಯುಐ ಕಾರ್ಯಕರ್ತರು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಡೆಲಿವರಿ ಬಾಯ್ಸ್‌ಗಳನ್ನ ವಿಚಾರಣೆ ನಡೆಸಿದ ಪೊಲೀಸರು, ಅವರನ್ನುತರಾಟೆಗೆ ತೆಗೆದುಕೊಂಡು ಅಲ್ಲಿಂದ ಕಳುಹಿಸಿದ್ದಾರೆ.

ಇನ್ನೂ ಘಟನೆ ಕುರಿತು ಮಾತನಾಡಿರುವ ಛಲವಾದಿ ನಾರಾಯಣಸ್ವಾಮಿ ಅವರು, ಹೋಗ್ಲಿ ದುಡ್ಡು ಕೊಟ್ಟಾದ್ರೂ ಆರ್ಡರ್ ಮಾಡಿದ್ದಾರಾ..? ದುಡ್ಡು ಕೊಡದೇ ನನ್ನ ನಂಬರ್ ಕೊಟ್ಟು ಆರ್ಡರ್ ಮಾಡಿದ್ದಾರೆ. ಆನ್‌ಲೈನ್‌ ಡೆಲಿವರಿಬಾಯ್ಸ್‌ ಜೊತೆಗೆ ಎನ್‌ಎಸ್‌ಯುಐ ಹುಡುಗರು ಬಂದಿದ್ದಾರೆ. ದುಡ್ಡು ಕೊಟ್ಟಾದ್ರೂ ಕಳ್ಸಿದ್ರೆ ತರಕಾರಿ ಕಟ್ ಮಾಡಲು ಇಟ್ಕೊಳ್ತಿದ್ದೆ. ನಿಮ್ಮ ಚಾಕು ಚೂರಿಗೆ ನಾನು ಹೆದರಲ್ಲ. ನನ್ನದು ನಕಲಿ ದಲಿತ ರಕ್ತ ಅಲ್ಲ, ಅಂಬೇಡ್ಕರ್ ರಕ್ತ ಎಂದು ಗುಡುಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'E20 ಈಗ 420 ಆಗಿದೆ': ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣ ಹೆಚ್ಚಾಗಿದೆ, ಲಾಭ ಯಾರಿಗೆ?; ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ

ವಿಜಯಪುರ ಕೊಲೆ ಪ್ರಕರಣ: ಪ್ರಮುಖ ಆರೋಪಿ ಸಮೀರ್ ಮುಲ್ಲಾನ ಕಾಲಿಗೆ ಗುಂಡಿಕ್ಕಿ ಬಂಧನ, ಪೊಲೀಸ್ ಸಿಬ್ಬಂದಿಗೆ ಗಾಯ!

SBI ಬ್ಯಾಂಕ್‌ಗೆ ₹12,668 ಕೋಟಿ ಸಾಲ ಬಾಕಿ: ಮಾಜಿ ವೀಡಿಯೊಕಾನ್ ಮುಖ್ಯಸ್ಥ ವೇಣುಗೋಪಾಲ್ ಧೂತ್ ದಿವಾಳಿ ಎಂದ NCLT

ಗಾಜಿಯಾಬಾದ್ ಪೊಲೀಸ್ ಔಟ್ ಪೋಸ್ಟ್ ಸ್ಫೋಟ: ಹೊಣೆ ಹೊತ್ತ 'ತೆಹ್ರೀಕ್-ಉಲ್-ಮುಜಾಹಿದ್ದೀನ್' ಉಗ್ರ ಸಂಘಟನೆ, ATS ತನಿಖೆ ಶುರು!

'ಪಾರದರ್ಶಕವಾಗಿ ಜಂಟಿ ಪರೀಕ್ಷೆ ಮಾಡೋಣ': ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಆರೋಪ ತಳ್ಳಿಹಾಕಿದ ತೈಲ ಕಂಪೆನಿಗಳು