ಆರ್ ಅಶೋಕ್  
ರಾಜ್ಯ

ಎಥೆನಾಲ್ ಮಿಶ್ರಣದಿಂದಲ್ಲ, ಬೆಂಗಳೂರಿನ ರಸ್ತೆ ಗುಂಡಿಗಳಿಂದ ವಾಹನಗಳ ಮೈಲೇಜ್ ಕಡಿಮೆ ಆಗ್ತಿದೆ: ಆರ್ ಅಶೋಕ್

ರಾಜ್ಯದಲ್ಲಿ ದರ ಏರಿಕೆ ವಿರುದ್ಧ ಜನಾಕ್ರೋಶ ಇದೆ. ಇದನ್ನು ಡೈವರ್ಟ್ ಮಾಡಲು ಎಥೆನಾಲ್ ವಿಚಾರ ತಂದು ಡಿಕೆ ಶಿವಕುಮಾರ್ ಟ್ರಿಕ್ಸ್ ಮಾಡಿದ್ದಾರೆ. ಬೇರೆ ರಾಜ್ಯಗಳಲ್ಲಿ ಇಲ್ಲದ ಸಮಸ್ಯೆ ಕರ್ನಾಟಕದಲ್ಲಷ್ಟೇ ಏಕಿದೆ?

ಬೆಂಗಳೂರು: ವಾಹನಗಳ ಮೈಲೇಜ್ ಕಡಿಮೆ ಆಗ್ತಿರೋದು ಎಥೆನಾಲ್ ಮಿಶ್ರಣದಿಂದಲ್ಲ ಬದಲಾಗಿ ಬೆಂಗಳೂರಿನ ರಸ್ತೆಗುಂಡಿಗಳಿಂದ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ವಾಹನಗಳ ಮೈಲೇಜ್ ಎಥೆನಾಲ್‌ನಿಂದ ಕಮ್ಮಿ ಆಗಿಲ್ಲ. ರಸ್ತೆಗುಂಡಿಗಳಿಂದ ವಾಹನಗಳ ಮೈಲೇಜ್ ಕಡಿಮೆ ಆಗುತ್ತಿದೆ. ಹಿಂದೆ ಬೆಂಗಳೂರಿನಲ್ಲಿ ಮೈಲೇಜ್ ಸರಾಸರಿ 18 ಕಿ.ಮೀ ಇತ್ತು, ಈಗ ರಸ್ತೆಗಳ ಗುಂಡಿಗಳಿಂದ 11 ಕಿ.ಮೀಗೆ ಇಳಿದಿದೆ ಎಂದಿದ್ದಾರೆ.

ರಾಜ್ಯದಲ್ಲಿ ದರ ಏರಿಕೆ ವಿರುದ್ಧ ಜನಾಕ್ರೋಶ ಇದೆ. ಇದನ್ನು ಡೈವರ್ಟ್ ಮಾಡಲು ಎಥೆನಾಲ್ ವಿಚಾರ ತಂದು ಡಿಕೆ ಶಿವಕುಮಾರ್ ಟ್ರಿಕ್ಸ್ ಮಾಡಿದ್ದಾರೆ. ಬೇರೆ ರಾಜ್ಯಗಳಲ್ಲಿ ಇಲ್ಲದ ಸಮಸ್ಯೆ ಕರ್ನಾಟಕದಲ್ಲಷ್ಟೇ ಏಕಿದೆ? ಪರಿಸರ ಸ್ನೇಹಿ ಹಾಗೂ ರೈತ ಸ್ನೇಹಿ ಎಥೆನಾಲ್ ಅನ್ನು ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ ವಿರೋಧಿಸುತ್ತಿದೆ. 1.60 ಲಕ್ಷ ಕೋಟಿಯಷ್ಟು ನೆರವು ಎಥೆನಾಲ್ ಮಿಶ್ರಣದಿಂದ ರೈತರಿಗೆ ಸಿಕ್ಕಿದೆ. ಎಥೆನಾಲ್ ಬಳಕೆಯಿಂದ ದೇಶದಲ್ಲಿ 350 ಟನ್ ಕಚ್ಚಾ ತೈಲ ಬಳಕೆ ಕಡಿಮೆ ಆಗಿದೆ ಎಂದು ತಿಳಿಸಿದರು.

ಇನ್ನು ಎಥೆನಾಲ್ ಪರೀಕ್ಷೆ ವೇಳೆ ರಾಜ್ಯ ಸರ್ಕಾರ ನಿಯಮ ಪಾಲನೆ ಮಾಡಿಲ್ಲ.1 ಲೀಟರ್ ನಲ್ಲಿ ಆರು ಸ್ಯಾಂಪಲ್ ಸಂಗ್ರಹ ಮಾಡಬೇಕು. ಪೆಟ್ರೋಲ್ ಬಂಕ್ ಮಾಲೀಕ, ತೈಲ ಕಂಪೆನಿ ಹಾಗೂ ಲ್ಯಾಬ್‌ಗೆ ಒಂದೊಂದು ಸ್ಯಾಂಪಲ್ ಕೊಡಬೇಕು. ಈ ನಿಯಮ ರಾಜ್ಯದಿಂದ ಪಾಲನೆ ಆಗಿಲ್ಲ. ಕೇಂದ್ರ ಸಚಿವರ ಬಳಿಯೂ ಹೋಗಿ ದೂರು ಕೊಟ್ಟಿಲ್ಲ. ಎಥೆನಾಲ್ ಬಳಕೆ ಪ್ರೋತ್ಸಾಹದಿಂದಲೇ ರಾಜ್ಯಕ್ಕೆ ಇದುವರೆಗೆ 10 ಸಾವಿರ ಕೋಟಿ ಅನುದಾನ ಬಂದಿದೆ. ಎಥೆನಾಲ್ ಬೇಡ ಅಂದ್ರೆ ಈ ಹಣ ವಾಪಸ್ ಕೊಡಲಿ ಕೇಂದ್ರಕ್ಕೆ ಎಂದು ರಾಜ್ಯ ಸರ್ಕಾರಕ್ಕೆ ಸವಾಲೆಸೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಹಿಳಾ ಮೀಸಲಾತಿ ಮಸೂದೆ: ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಕೇಂದ್ರ ಚಿಂತನೆ,15-18 ಮತಗಳ ಅಂತರದಲ್ಲಿ ಗೆಲ್ಲುವ ನಿರೀಕ್ಷೆ!

'ಜೈಲಿನಲ್ಲಿದ್ದ ಚಾರ್ಲ್ಸ್ ಶೋಭರಾಜ್ ಗರ್ಲ್​ಫ್ರೆಂಡ್ ಗೂ ಸೋನಿಯಾ ಗಾಂಧಿ ಮನೆಯೂಟ ತಂದಾಗ...': ಆತ್ಮಕಥೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ!

ಬೆನ್ನು ನೋವು ಹೇಗಿದೆ? ಇನ್ನು ಎಷ್ಟು ದಿನ ಇರಬೇಕು? ನರಕ ಆಗ್ತಿದೆ...: ಪರಸ್ಪರ ಯೋಗ ಕ್ಷೇಮ ವಿಚಾರಿಸಿಕೊಂಡ ಸುಬ್ಬಾ – ಸುಬ್ಬಿ!

ಚುನಾವಣೆ ಮಾದರಿಯಲ್ಲಿ kpsc ಪರೀಕ್ಷೆ: ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ

3ನೇ ಬಾರಿ BJP ಅಧಿಕಾರಕ್ಕೇರದಂತೆ ತಡೆಯುವುದೇ ಟಾರ್ಗೆಟ್: ಚಂದ್ರಶೇಖರ್ ಆಜಾದ್ CM ಕ್ಯಾಂಡಿಡೇಟ್; ಅಸಾದುದ್ದೀನ್ ಓವೈಸಿ ಘೋಷಣೆ