ಹುಂಡಿ ಎಣಿಕೆ 
ರಾಜ್ಯ

ದಾಖಲೆ ಬರೆದ ಹಾಸನಾಂಬ ದರ್ಶನೋತ್ಸವ: 30 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ; ₹29 ಕೋಟಿ ಆದಾಯ ಸಂಗ್ರಹ!

ಕಳೆದ ವರ್ಷ 13 ದಿನಗಳಲ್ಲಿ 25 ಲಕ್ಷ ಭಕ್ತರು ದರ್ಶನ ಪಡೆದಿದ್ದು, 1,000, 300 ರೂ. ವಿಶೇಷ ದರ್ಶನ ಟಿಕೆಟ್, ಲಾಡು ಪ್ರಸಾದ ಹಾಗೂ ಹುಂಡಿ ಕಾಣಿಕೆ ಸೇರಿ 25.59 ಕೋಟಿ ರೂ. ಸಂಗ್ರಹವಾಗಿತ್ತು.

ಹಾಸನ: 14 ದಿನಗಳ ಕಾಲ ನಡೆದ ಪ್ರಸಿದ್ಧ ಹಾಸನಾಂಬೆ ದೇವಿ ದರ್ಶನೋತ್ಸವ ಈ ಬಾರಿ ಹೊಸ ದಾಖಲೆ ಬರೆದಿದೆ. ಒಟ್ಟು 30,06,000 ಭಕ್ತರು ಈ ಬಾರಿ ದೇವಿಯ ದರ್ಶನ ಪಡೆದಿದ್ದು, ಎಲ್ಲಾ ಮೂಲಗಳಿಂದ ಒಟ್ಟು 29,55,27,852 ರೂ. ಆದಾಯ ಸಂಗ್ರಹವಾಗಿದೆ ಎಂದು ಹಾಸನಾಂಬ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಧಿಕಾರಿ ಜಗದೀಶ್ ಗಂಗಣ್ಣನವರ್ ತಿಳಿಸಿದ್ದಾರೆ.

ಕಳೆದ ವರ್ಷ 13 ದಿನಗಳಲ್ಲಿ 25 ಲಕ್ಷ ಭಕ್ತರು ದರ್ಶನ ಪಡೆದಿದ್ದು, 1,000, 300 ರೂ. ವಿಶೇಷ ದರ್ಶನ ಟಿಕೆಟ್, ಲಾಡು ಪ್ರಸಾದ ಹಾಗೂ ಹುಂಡಿ ಕಾಣಿಕೆ ಸೇರಿ 25.59 ಕೋಟಿ ರೂ. ಸಂಗ್ರಹವಾಗಿತ್ತು.

ಈ ಬಾರಿ ಅಕ್ಟೋಬರ್ 29 ರಂದು ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲು ತೆರೆದಿದ್ದು, ಅಂದು ಸಾರ್ವಜನಿಕರಿಗೆ ದರ್ಶನ ಇಲ್ಲದಿದ್ದರೂ, ಈ ವೇಳೆ ನೆರೆದಿದ್ದವರಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, 5,600 ಮಂದಿ ದೇವಿ ದರ್ಶನ ಪಡೆದಿದ್ದರು.

ಅಕ್ಟೋಬರ್ 30 ರಿಂದ ನವೆಂಬರ್ 10 ರವರೆಗೆ ಒಟ್ಟು 12 ದಿನಗಳು ಕಾಲ ದೇಶ, ರಾಜ್ಯ, ಹೊರ ರಾಜ್ಯ, ಜಿಲ್ಲೆ, ಹೊರ ಜಿಲ್ಲೆಗಳಿಂದ 30,06,000 ಭಕ್ತರು ದೇವಿ ದರ್ಶನ ಪಡೆದಿದ್ದಾರೆ ಎಂದು ಗಂಗಣ್ಣನವರ್ ಮಾಹಿತಿ ನೀಡಿದ್ದಾರೆ.

ಹಾಸನಾಂಬ ದೇವಿ ಹಾಗೂ ಶ್ರೀ ಸಿದ್ದೇಶ್ವರಸ್ವಾಮಿ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, 1,000 ರೂ.ನ ವಿಶೇಷ ದರ್ಶನ ಟಿಕೆಟ್ ಮಾರಾಟದಿಂದ 16,98,11,257 ರೂಪಾಯಿ, 300 ರೂ.ನ ವಿಶೇಷ ದರ್ಶನ ಟಿಕೆಟ್ ಮಾರಾಟದಿಂದ 7,24,14,000 ರೂಪಾಯಿ, ಲಾಡು ಮಾರಾಟದಿಂದ 1,35,99,156 ರೂಪಾಯಿ, ದೇಣಿಗೆಯಾಗಿ 5,91,228 ರೂ, ಇ-ಹುಂಡಿಯಿಂದ 13,13,264 ರೂ, ಜಾಹೀರಾತಿನಿಂದ 5,74,000 ರೂಪಾಯಿ ಸೇರಿ ಒಟ್ಟು 25,82,88,199 ರೂಪಾಯಿಗಳು ಸಂಗ್ರಹವಾಗಿದೆ ಎಂದರು.

ಭಕ್ತರು ಕಾಣಿಕೆ ರೂಪದಲ್ಲಿ 3,71,63,933 ರೂಪಾಯಿ ಹುಂಡಿಯಲ್ಲಿ ಹಾಕಿದ್ದು ಎಲ್ಲಾ ಸೇರಿ ಒಟ್ಟು 29,55,27,852 ರೂಪಾಯಿ ಆದಾಯ ಸಂಗ್ರಹವಾಗಿದ್ದು, ಕಳೆದ ವರ್ಷಕ್ಕಿಂತ 4 ಕೋಟಿ ಹೆಚ್ಚಿನ ಆದಾಯ ಬಂದಿದೆ. 43.170 ಗ್ರಾಂ ಚಿನ್ನ ಹಾಗೂ 1.255 ಕೆಜಿ ಬೆಳ್ಳಿ ಕಾಣಿಕೆ ರೂಪದಲ್ಲಿ ಭಕ್ತರು ನೀಡಿದ್ದಾರೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

PM Modi visit to Bengaluru | ಕನ್ನಡ ವರನಟ ಡಾ ರಾಜ್ ಕುಮಾರ್ ಯೋಗಾಭ್ಯಾಸದಲ್ಲಿ ಮಾದರಿ: ಪ್ರಧಾನಿ ಮೋದಿ

ಮೈದಾನದಲ್ಲೇ ಬ್ರಾರ್ - ಟಿಮ್ ನಡುವೆ ಮತ್ತೆ ಜಗಳ: ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ ವಿರಾಟ್ ಕೊಹ್ಲಿ; Video

ಜಾಗತಿಕ ಮಟ್ಟದಲ್ಲಿ Microsoft Outlook ಸ್ಥಗಿತ: ಆರಂಭಿಕ ದುರಸ್ತಿ ಕ್ರಮಗಳು ವಿಫಲ, ಸರಿಪಡಿಸಲು ಎಂಜಿನಿಯರ್‌ಗಳ ಪರದಾಟ..!

ರಾಷ್ಟ್ರ ರಾಜಧಾನಿಯಲ್ಲಿ ಅಪಾಯದ ಮಟ್ಟ ಮೀರಿದ ವಾಯುಮಾಲಿನ್ಯ: 494ರ ಗಡಿ ತಲುಪಿದ AQI; ದೆಹಲಿಯಲ್ಲಿ ಉಸಿರಾಡುವುದೇ ಕಷ್ಟ..!

ಇತಿಹಾಸದಲ್ಲೇ ಮೊದಲ ಬಾರಿ ಬ್ರಿಟಿಷ್ ಸಂಸತ್ತಿನಲ್ಲಿ ಹನುಮಾನ್ ಚಾಲೀಸಾ ಪಠಣ; ವಿಡಿಯೋ ವೈರಲ್!