ಕೆಲಸ ಕಾರ್ಯಗಳು ಮತ್ತು ತಮ್ಮ ಮಾತುಗಳಿಂದ ಸದಾ ಸುದ್ದಿಯಲ್ಲಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಕಾಲು ಮುರಿತಕ್ಕೊಳಗಾಗಿದ್ದಾರೆ.
ಕೆಲವು ದಿನಗಳ ಹಿಂದೆ ಬಿದ್ದು ಗಂಭೀರವಾಗಿ ಗಾಯವಾಗಿದ್ದು, ವೈದ್ಯರು 6 ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ ಎಂದು ಫೋಟೋವನ್ನು ಸ್ವತಃ ಶಾಸಕರೇ ಹಂಚಿಕೊಂಡಿದ್ದಾರೆ.
ಆದರೂ ಅವರು ತಮ್ಮ ಕೆಲಸ ಕಾರ್ಯಗಳನ್ನು ನಿಲ್ಲಿಸಿಲ್ಲವಂತೆ. ಕೆಲಸ ಆಗಲೇಬೇಕು ಎಂದಾದಾಗ ಅದನ್ನು ಸಾಧಿಸಲು ದಾರಿಯೊಂದನ್ನು ಕಂಡುಕೊಳ್ಳಲೇಬೇಕು ಎಂದು ತರಗತಿಯೊಳಗೇ ಒಂದು ಹಾಸಿಗೆಯ ವ್ಯವಸ್ಥೆ ಮಾಡಿಕೊಂಡು ಅಲ್ಲಿಂದಲೇ ವಿದ್ಯಾರ್ಥಿಗಳೊಂದಿಗೆ ಸಂವಾದ ಮುಂದುವರಿಸುತ್ತಾ ಪಾಠ ಮಾಡುತ್ತಿದ್ದಾರೆ. ಜೊತೆಗೆ ಕ್ಷೇತ್ರದ ಕೆಲಸಗಳನ್ನು ಕುಳಿತಲ್ಲಿಂದಲೇ ಮಾಡುತ್ತಿದ್ದಾರೆ.
ಕಾಲಿಗೆ ಪೆಟ್ಟಾದರೂ ಕೆಲಸ ಮಾಡಬೇಕೆನ್ನುವ ನನ್ನ ಉತ್ಸಾಹ ಕುಗ್ಗಿಲ್ಲ ಎನ್ನುತ್ತಾರೆ ಶಾಸಕ ಪ್ರದೀಪ್ ಈಶ್ವರ್.