ಬಸನಗೌಡ ಪಾಟೀಲ್ ಯತ್ನಾಳ್ 
ರಾಜ್ಯ

ನಮ್ಮ ಸೊಸೈಟಿ ಮೇಲೆ ಯಾವುದೇ ED, IT ದಾಳಿ ನಡೆದಿಲ್ಲ; ಗ್ರಾಹಕರ ಹಣ ಸುರಕ್ಷಿತವಾಗಿದೆ: ಯತ್ನಾಳ್ ಸ್ಪಷ್ಟನೆ

ಯಾವುದೇ ಐಟಿ, ಇಡಿ ದಾಳಿಯಾಗಿಲ್ಲ, ಇದೆಲ್ಲವೂ ರಾಜಕೀಯ ವಿರೋಧಿಗಳ ಸುಳ್ಳು ವದಂತಿ ಎಂದು ಯತ್ನಾಳ್ ಅವರು ತಳ್ಳಿಹಾಕಿದ್ದು, ತಮ್ಮ ಮೇಲೆ ಭ್ರಷ್ಟಾಚಾರ ಸಾಬೀತು ಮಾಡಿದರೆ 1 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಸವಾಲು ಹಾಕಿದ್ದಾರೆ.

ವಿಜಯಪುರ: ನಮ್ಮ ಸೊಸೈಟಿ ಮೇಲೆ ಯಾವುದೇ ಇಡಿ ಅಥವಾ ಐಟಿ ದಾಳಿ ನಡೆದಿಲ್ಲ. ಗ್ರಾಹಕರ ಹಣ ಸುರಕ್ಷಿತವಾಗಿದೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಭಾನುವಾರ ಸ್ಪಷ್ಟಪಡಿಸಿದ್ದಾರೆ.

ತಮ್ಮ ಪುತ್ರ ರಾಮನಗೌಡ ಪಾಟೀಲ್ ಅಧ್ಯಕ್ಷರಾಗಿರುವ ‘ಸಿದ್ದಸಿರಿ ಮಲ್ಟಿ ಸ್ಟೇಟ್ ಮಲ್ಟಿ ಪರ್ಪಸ್ ಕೋ-ಆಪರೇಟಿವ್ ಸೊಸೈಟಿ’ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ ಎಂಬ ವಂತಿಗಳ ಕುರಿತು ಶಾಸಕ ಯತ್ನಾಳ್ ಈ ಸ್ಪಷ್ಟನೆ ನೀಡಿದ್ದಾರೆ.

ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಯತ್ನಾಳ್ ಅವರು, ಯಾವುದೇ ದಾಳಿಯಾಗಿಲ್ಲ, ಇದೆಲ್ಲವೂ ರಾಜಕೀಯ ವಿರೋಧಿಗಳ ಸುಳ್ಳು ವದಂತಿ ಎಂದು ತಳ್ಳಿಹಾಕಿದ್ದು, ತಮ್ಮ ಮೇಲೆ ಭ್ರಷ್ಟಾಚಾರ ಸಾಬೀತು ಮಾಡಿದರೆ 1 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಸವಾಲು ಹಾಕಿದ್ದಾರೆ.

ಕಳೆದ 2025ರಲ್ಲಿ ಕೇವಲ 5 ಲಕ್ಷ ರೂ. ಬಂಡವಾಳದಲ್ಲಿ ಆರಂಭವಾದ ಸಿದ್ದಸಿರಿ ಸೌಹಾರ್ದ ಸಹಕಾರಿ ಸಂಘವು ಅಲ್ಪಾವಧಿಯಲ್ಲಿ ಬೆಳೆದು 2025ರ ವೇಳೆಗೆ 6,140 ಕೋಟಿ ರೂ. ವ್ಯವಹಾರ ನಡೆಸುವ ಮೂಲಕ ರಾಜ್ಯದಿಂದ ಕೇಂದ್ರ ವ್ಯಾಪ್ತಿಗೆ ಸೇರ್ಪಡೆಗೊಂಡು ‘ಸಿದ್ದಸಿರಿ ಮಲ್ಟಿ ಸ್ಟೇಟ್ ಮಲ್ಟಿಪರ್ಪಸ್ ಕೋ-ಆಪರೇಟಿವ್ ಸೊಸೈಟಿ’ಯಾಗಿ ಪರಿವರ್ತನೆಯಾಗಿದೆ ಎಂದರು.

ರಾಜ್ಯ ವ್ಯಾಪ್ತಿಯಿಂದ ಕೇಂದ್ರ ಸಹಕಾರಿ ವ್ಯಾಪ್ತಿಗೆ ಹೋದಾಗ ನಿಯಮಗಳ ಬದಲಾವಣೆಯಾಗಲಿದ್ದು, ಕೇಂದ್ರ ಸಹಕಾರ ಸಂಘಗಳ ರಿಜಿಸ್ಟ್ರಾರ್ ಕಚೇರಿಯಿಂದ ಮಾಹಿತಿ ಕೋರಿ ನೋಟಿಸ್ ಬರುವುದು ಸಹಜ. ಅದರಂತೆ ಆಗಸ್ಟ್ 14ರಂದು ಆಡಿಟರ್ ಸಹಿ ಹಾಗೂ ದಾಖಲೆಗಳ ಕುರಿತು ಕೇಳಿದ್ದ ಮಾಹಿತಿಗೆ ಸೆಪ್ಟೆಂಬರ್ 4ರಂದೇ ಇ-ಮೇಲ್ ಮೂಲಕ ಸಮರ್ಪಕ ಉತ್ತರ ನೀಡಲಾಗಿದೆ ಎಂದು ಯತ್ನಾಳ ತಿಳಿಸಿದರು.

ಈವರೆಗೆ ಕನ್ನಡದಲ್ಲಿಯೇ ಆಡಿಟ್ ವರದಿ ಸಲ್ಲಿಸಲಾಗುತ್ತಿದ್ದು, ಸಿಆರ್‌ಸಿಎಸ್ ಅಧಿಕಾರಿಗಳು ಕನ್ನಡದಿಂದ ಇಂಗ್ಲಿಷ್‌ಗೆ ಭಾಷಾಂತರಿಸುವಾಗ ಕೆಲವು ಗೊಂದಲಗಳು ಉಂಟಾಗಿವೆ. ಮುಂದಿನ ದಿನಗಳಲ್ಲಿ ಇಂಗ್ಲಿಷ್‌ನಲ್ಲಿಯೇ ಆಡಿಟ್ ವರದಿ ಸಲ್ಲಿಸಲಾಗುವುದು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮತ್ತೆ ಯುದ್ಧದ ಸುಳಿವು?: ಅಮೆರಿಕದಿಂದ ಇನ್ನೊಂದೇ ಒಂದು ತಪ್ಪು ನಡೆದರೂ....; ಟ್ರಂಪ್ ಗೆ ಇರಾನ್ ಸಂಧಾನಕಾರನ ಧಮ್ಕಿ...

ಚಾಮರಾಜನಗರ: ಆಂಜನೇಯನ ದೇವಸ್ಥಾನದಲ್ಲಿ ಗೋಮಾಂಸ ಬಿಸಾಡಿದ ಕಿಡಿಗೇಡಿಗಳು, ಭುಗಿಲೆದ್ದ ಆಕ್ರೋಶ!

ಪತಿಯಿಂದ ಪ್ರತ್ಯೇಕ ವಾಸ: ರಮ್ಯಾ ಕೃಷ್ಣ ದಾಂಪತ್ಯದಲ್ಲಿ ಬಿರುಕು? ಶಾಕಿಂಗ್ ವಿಚಾರ ಬಿಚ್ಚಿಟ್ಟ ಖ್ಯಾತ ನಟಿ!

ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯ, ಪ್ರೀತಿ: ಮದುವೆಯಾಗಲು ಭಾರತಕ್ಕೆ ಬಂದ ಕೆನಡಾ ಮಹಿಳೆಗೆ ಕಾದಿತ್ತು ಬಿಗ್ ಶಾಕ್!

ಮುಂಬೈನಲ್ಲಿ CNG ದರ ಮತ್ತೆ ಏರಿಕೆ; ಇದೇ ವರ್ಷದಲ್ಲಿ 8ನೇ ಬಾರಿ ಹೆಚ್ಚಳ!