ಅಪಘಾತಕ್ಕೊಳಗಾದ ಕಾರು 
ರಾಜ್ಯ

ನೆಲಮಂಗಲ: ಮರಕ್ಕೆ ಕಾರು ಡಿಕ್ಕಿ, ಸಪ್ತಗಿರಿ ಕಾಲೇಜಿನ ಇಬ್ಬರು ಎಂಜನೀಯರಿಂಗ್ ವಿದ್ಯಾರ್ಥಿನಿಯರ ದುರ್ಮರಣ

ಕಾಲೇಜಿನ ಪ್ರಾಜೆಕ್ಟ್ ಕೆಲಸದದ ನಿಮಿತ್ತ ವಿದ್ಯಾರ್ಥಿಗಳು ಕಾರಿನಲ್ಲಿ ಕುಣಿಗಲ್ ಕಡೆಗೆ ಹೋಗುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ.

ಬೆಂಗಳೂರು: ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಕಾಲೇಜು ವಿದ್ಯಾರ್ಥಿನಿಯರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಗುಡೆಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಬಳಿ ನಡೆದಿದೆ.

ಮೃತರನ್ನು ಬೆಂಗಳೂರು ಮೂಲದ ವೈಷ್ಣವಿ (20) ಮತ್ತು ಜಾಹ್ನವಿ (20) ಎಂದು ಗುರುತಿಸಲಾಗಿದ್ದು, ಇವರಿಬ್ಬರೂ ಬೆಂಗಳೂರಿನ ಸಪ್ತಗಿರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಕಾಲೇಜಿನ ಪ್ರಾಜೆಕ್ಟ್ ಕೆಲಸದದ ನಿಮಿತ್ತ ವಿದ್ಯಾರ್ಥಿಗಳು ಕಾರಿನಲ್ಲಿ ಕುಣಿಗಲ್ ಕಡೆಗೆ ಹೋಗುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಕಾರಿನಲ್ಲಿದ್ದ ವೈಷ್ಣವಿ ಮತ್ತು ಜಾಹ್ನವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಒಬ್ಬ ವಿದ್ಯಾರ್ಥಿನಿಗೆ ಗಂಭೀರ ಗಾಯಗಳಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಉಳಿದ ಮೂವರು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಾರಿನಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಸ್ಥಳೀಯರು ಹಾಗೂ ಪೊಲೀಸರು ಹೊರಕ್ಕೆಳೆದು ಸಮೀಪದ ನೆಲಮಂಗಲ ಸರ್ಕಾರಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಶ್ವಕ್ಕೆ ಶಾಂತಿ-ಸ್ಥಿರತೆ ಅಗತ್ಯ, ಪೈಪೋಟಿ ಬದಿಗಿಟ್ಟು ಸಹಕಾರದ ಹಾದಿಯಲ್ಲಿ ಸಾಗೋಣ: India-ASEAN ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

UN-OIC ಕರಡು ನಿರ್ಣಯ: ಉದ್ದೇಶಪೂರ್ವಕವಾಗಿ ಭಾರತವನ್ನು ದೂರವಿಟ್ಟ ಟರ್ಕಿ ವಿರುದ್ಧ ಭಾರತ ತೀವ್ರ ಕಿಡಿ, ನಿರ್ಣಯದ ವಿರುದ್ಧ ಮತದಾನ

IPL 2027 Retention: 'ಯಾರನ್ನೂ ಕೈಬಿಡಬೇಡಿ'.. RCBಯೇ ಎಲ್ಲರ ಕೇಂದ್ರ ಬಿಂದು, ಅಭಿಮಾನಿಗಳ ಬೇಡಿಕೆ, ಆಕಾಶ್ ಚೋಪ್ರಾ ಹೇಳಿದ್ದೇನು?

ಸದ್ದೇ ಇಲ್ಲದೇ OTTಗೆ ಲಗ್ಗೆ ಇಟ್ಟ ಕನ್ನಡ ಬ್ಲಾಕ್ ಬಸ್ಟರ್ ಚಿತ್ರ 'ಪ್ರೇಮದ ಊರಲಿ'.. ಎಲ್ಲಿ, ಯಾವಾಗ?

ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್‌ಗೆ ಭಾರತ ತಂಡ ಆಯ್ಕೆ; ಪ್ಲೇಯಿಂಗ್ ಇಲೆವೆನ್ ಸುಳಿವು ಕೊಟ್ಟ ನಾಯಕ ಶುಭ್`ಮನ್ ಗಿಲ್; 7 ಬ್ಯಾಟರ್‌, 4 ವೇಗಿಗಳು!